ವಾಡಿ ಬಿಜೆಪಿ ಕಛೇರಿಯಲ್ಲಿ ಮನ್ ಕಿ ಬಾತ್ ಆಲಿಸಿದರು

ವಾಡಿ ಬಿಜೆಪಿ ಕಛೇರಿಯಲ್ಲಿ ಮನ್ ಕಿ ಬಾತ್ ಆಲಿಸಿದರು

ವಾಡಿ ಬಿಜೆಪಿ ಕಛೇರಿಯಲ್ಲಿ ಮನ್ ಕಿ ಬಾತ್ ಆಲಿಸಿದರು 

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪ್ರಧಾನಿ ಮೋದಿಜಿ ಅವರ 116ನೇ ಸಂಚಿಕೆಯನ್ನು ವೀಕ್ಷಿಸಿದ ಮುಖಂಡರು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ,

ನಮ್ಮಂತ ಯುವಕರ ಬಗ್ಗೆ ಅತೀ ಹೆಚ್ಚಿನ ಕಾಳಜಿ ನಮ್ಮ ಮೋದಿಜಿ‌ ಹೊಂದಿದ್ದಕ್ಕೆ ಇಂದಿನ ಸಂಚಿಕೆಯಲ್ಲಿನ ಮಾತುಗಳೆ ಸಾಕ್ಷಿ ಎಂದರು.

ಇಡೀ ಕುಟುಂಬಕ್ಕೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲವೋ ಅಂತಹ ಯುವಕರು ರಾಜಕೀಯಕ್ಕೆ ಸೇರುವಂತೆ ಮನವಿ ಮಾಡಿದ್ದಾರೆ.

ಒಂದು ಲಕ್ಷ ಯುವಕರನ್ನು ರಾಜಕೀಯದೊಂದಿಗೆ ಸಂಪರ್ಕಿಸಲು, ದೇಶದಲ್ಲಿ ಅನೇಕ ವಿಶೇಷ ಅಭಿಯಾನಗಳನ್ನು ನಡೆಸುವುದರ ಬಗ್ಗೆ ಇಂದಿನ ಮನ್ ಕಿ ಬಾತ್ ನಲ್ಲಿ ಆಲಿಸಿದ್ದೇವೆ. ಡೆವಲಪ್ಡ್ ಇಂಡಿಯಾ ಯಂಗ್ ಲೀಡರ್ಸ್ ಡೈಲಾಗ್ ಕೂಡ ಅಂತಹ ಒಂದು ಪ್ರಯತ್ನ. ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12 ರಂದು ದೇಶವು ‘ಯುವ ದಿನ’ವನ್ನು ಆಚರಿಸುವುದು. ಮುಂದಿನ ವರ್ಷ ಸ್ವಾಮಿ ವಿವೇಕಾನಂದರ 162ನೇ ಜಯಂತಿ. ಅತ್ಯಂತ ವಿಶೇಷ ರೀತಿಯಲ್ಲಿ ಆಚರಿಸುವುದರ ಬಗ್ಗೆ ಹೇಳಿದ್ದರು. ಈ ಸಂದರ್ಭದಲ್ಲಿ ಜನವರಿ 11-12 ರಂದು ದೆಹಲಿಯ ಭಾರತ ಮಂಟಪದಲ್ಲಿ ಯುವ ವಿಚಾರಗಳ ಮಹಾ ಕಾರ್ಯಕ್ರಮ ಹಾಕಿಕೊಂಡು, ಈ ಉಪಕ್ರಮದ ಹೆಸರು ವಿಕಾಸ್ ಭಾರತ್ ಯುವ ನಾಯಕರ ಸಂವಾದ ಎಂದು ನಮಗೆ ತಿಳಿಸಿದ್ದಾರೆ. 

ಮೋದಿಜಿ ಯವರ ಆಸೆಯಂತೆ ನಮ್ಮ ಯುವ ಸಮೂಹ ಸಾಮಾಜಿಕ ಜವಾಬ್ದಾರಿ ಯೊಂದಿಗೆ,ದೇಶ ಸೇವೆಯಲ್ಲಿ ನಿರತರಾಗುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶರಣಗೌಡ ಚಾಮನೂರ,ಆನಂದ ಇಂಗಳಗಿ,ಕಾಶಿನಾಥ ಪಾನಗಾಂವ,ರವಿ ಚವ್ಹಾಣ,ಸಚಿನ್ ನಾಲವಾರಕರ್,ಶಿವರಾಜ ಸಗರ,ಅನಿಲ ಚವ್ಹಾಣ,ಸೂರಜ್ ರಾಠೋಡ,ಕುಮಾರ ಪವಾರ,ವಿನೋದ ಪವಾರ ಸೇರಿದಂತೆ ಇತರರು ಇದ್ದರು.