ಸಂವಿಧಾನ ಪ್ರಸ್ತಾವನೆ ಓದಿ ಶೈಕ್ಚಣಿಕ ಪ್ರವಾಸಕ್ಕೆ ಚಾಲನೆ

ಸಂವಿಧಾನ ಪ್ರಸ್ತಾವನೆ ಓದಿ ಶೈಕ್ಚಣಿಕ ಪ್ರವಾಸಕ್ಕೆ ಚಾಲನೆ

ಸಂವಿಧಾನ ಪ್ರಸ್ತಾವನೆ ಓದಿ ಶೈಕ್ಚಣಿಕ ಪ್ರವಾಸಕ್ಕೆ ಚಾಲನೆ

 ಕಲಬುರಗಿ: ನಗರದ ಹೈದ್ರಾಬಾದ್ ಕರ್ನಾಟಕ ಶಿಕ್ಚಣ ಸಂಸ್ಥೆಯ ಬಾಲಕಿಯರ ವಿಜ್ನಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಕಲಬುರಗಿಯ ವಿದ್ಯಾರ್ಥಿನಿಯರು ಇಂದು ಬೆಳಿಗ್ಗೆ 5 ಗಂಟೆಗೆ ಸಂವಿಧಾನದ ಪ್ರಸ್ತಾವನೆಯನ್ನು ಓದವುದರ ಮೂಲಕವಾಗಿ ತಮ್ಮ ಒಂದು ದಿನದ ಶೈಕ್ಚಣಿಕ ಪ್ರವಾಸಕ್ಕೆ ವಿನೂತನವಾದ ರೀತಿಯಲ್ಲಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಡಾ.ಮಹೇಶ ಗಂವ್ಹಾರ, ಉಪನ್ಯಾಸಕರಾದ, ಸವಿತಾ ಪಾಟೀಲ,ಜಾನಕಿ ಪಾಟೀಲ,ವಿಜಯಲಕ್ಚ್ಮೀ ಪಾಕಿನ್, ಜೇಬಾ ಅಕ್ತರ್,ರಾಜಶ್ರೀ,ಗೀತಾ ಹಾಗೂ ಸಿಬ್ಬಂದಿಗಳಾದ ಬಸವರಾಜ,ಕಸ್ತೂರಿ ಮತ್ತು ವಿದ್ಯಾರ್ಥಿನಿಯರು,ಪಾಲಕರು ಉಪಸ್ತಿತರಿದ್ದರು.

 ಪ್ರವಾಸಕ್ಕೆ ವಿನೂತನ ರೀತಿಯಲ್ಲಿ ಚಾಲನೆ ನೀಡಿದ ವಿದ್ಯಾರ್ಥಿನಿಯರ ಈ ಪದ್ದತಿಯನ್ನು ಪ್ರಾಚಾರ್ಯರು,ಸಿಬ್ಬಂದಿ ಹಾಗೂ ಪಾಲಕರು ಕೊಂಡಾಡಿ ಪ್ರವಾಸ ಶುಭಕರವಾಗಲಿ ಎಂದು ಹಾರೈಸಿದರು.