ಅಪ್ಪನ ಕೆರೆಯಲ್ಲಿ ಸಂಕ್ರಾಂತಿ ಹಬ್ಬದ ಗಿಫ್ಟ್ - ದೋಣಿ ವಿಹಾರದ ಸಂಭ್ರಮ!

ಅಪ್ಪನ ಕೆರೆಯಲ್ಲಿ ಸಂಕ್ರಾಂತಿ ಹಬ್ಬದ ಗಿಫ್ಟ್ - ದೋಣಿ ವಿಹಾರದ ಸಂಭ್ರಮ!

ಬೋಟಿಂಗ್ ಗೆ ಪ್ರಾದೇಶಿಕ ಆಯುಕ್ತ ಕೃಷ್ಣಬಾಜಪೇಯಿ ಚಾಲನೆ

ಅಪ್ಪನ ಕೆರೆಯಲ್ಲಿ ಸಂಕ್ರಾಂತಿ ಹಬ್ಬದ ಗಿಫ್ಟ್ - ದೋಣಿ ವಿಹಾರದ ಸಂಭ್ರಮ!

ಕಲಬುರಗಿ: ಶರಣಬಸವೇಶ್ವರ ಕೆರೆ (ಅಪ್ಪನಕೆರೆ) ಯಲ್ಲಿ ಸಂಕ್ರಾಂತಿ ಹಬ್ಬದ ಸಡಗರದ ನಡುವೆ ದೋಣಿ ವಿಹಾರಿಗಳು ಬೋಟಿಂಗ್ ನಡೆಸಿ ಸಂಭ್ರಮಿಸಿದರು. ಪ್ರಾದೇಶಿಕ ಆಯುಕ್ತರು ಹಾಗೂ ಶರಣಬಸವೇಶ್ವರ ಕೆರೆ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಕೃಷ್ಣ ಬಾಜಪೇಯಿಯವರು ಬಾಲಕಿಯರ ಬಾಲ ಮಂದಿರದ ಮಕ್ಕಳ ಜೊತೆ ಕೆರೆಯಲ್ಲಿ ಬೋಟಿಂಗ್ ಮಾಡಿ ಶುಭಾರಂಭಗೊಳಿಸಿದರು. 

    ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪಾಲಿಕೆ ಆಯುಕ್ತರಾದ ಭುವನೇಶ್ ಪಾಟೀಲ್ ಜೊತೆ ಜನವರಿ 13ರಂದು ಸೋಮವಾರ ಅಪ್ಪನ ಕೆರೆಯಲ್ಲಿ ಬೋಟಿಂಗ್ ಮಾಡಿ ಸಂಭ್ರಮದಲ್ಲಿ ಪಾಲ್ಗೊಂಡರು. ಖುಷಿಯಲ್ಲಿ ತೇಲಾಡುತ್ತಿದ್ದ ಮಕ್ಕಳು ಬೋಟಿಂಗ್ ನ ವೇಳೆ ಕುಣಿದು ಕುಪ್ಪಳಿಸಿ "ಹಿಪ್ ಹಿಪ್ ಹುರ್ರೆ" ಘೋಷಣೆ ಕೂಗಿ ಸಡಗರ ಅನುಭವಿಸಿದರು. ಬಾಲ ಮಂದಿರದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉದ್ಘಾಟನಾ ಬೋಟಿಂಗ್ ನ ಮೊದಲ ಪಯಣಕ್ಕೆ ಸಾಕ್ಷಿಯಾದರು. ಬೋಟ್ ಜೆಟ್ಟಿ ಬಳಿ ಗಿಡ ನೆಡುವುದರ ಮೂಲಕ ಹಾಗೂ ರಿಬ್ಬನ್ ಕತ್ತರಿಸಿ ಬೋಟಿಂಗ್ ಗೆ ಕೃಷ್ಣ ಬಾಜಪೇಯಿ ಚಾಲನೆ ನೀಡಿದರು. 

     ಬೋಟಿಂಗ್ ನ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಪ್ರಾದೇಶಿಕ ಆಯುಕ್ತರಾದ ಕೃಷ್ಣಭಾಜಪೇಯಿಯವರು 'ಶರಣಬಸವೇಶ್ವರ ಕೆರೆ ಇತ್ತೀಚೆಗೆ ಆದಾಯ ಗಳಿಕೆಯಲ್ಲಿ ಪ್ರಗತಿ ಹೊಂದಿದ್ದು ಪ್ರವೇಶ ಶುಲ್ಕ, ಆಹಾರ ಮಳಿಗೆ, ಮನರಂಜನಾ ಸೆಂಟರ್ ಗಳಿಂದ ತಿಂಗಳಿಗೆ 4 ರಿಂದ 5 ಲಕ್ಷ ರೂಪಾಯಿ ಆದಾಯ ಬರುತ್ತಿದೆ. ಈಗ ಬೋಟಿಂಗ್ ಕೂಡಾ ಸೇರ್ಪಡೆಗೊಂಡಿರುವುದರಿಂದ ಆದಾಯ ಇನ್ನಷ್ಟು ವೃದ್ಧಿಯಾಗಲಿದೆ. ಇದರಿಂದ ಕೆರೆಯಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ ಎಂದರು. 

      ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಲ್ಲಿ ಬೋಟಿಂಗ್ ಉದ್ಘಾಟನೆ ಗೊಳ್ಳುತ್ತಿರುವುದು ಸಂತಸವಾಗಿದೆ 2019 ರಂದು ಸ್ಥಗಿತಗೊಂಡ ಕೆರೆಯಲ್ಲಿ 2023 ಜುಲೈನಿಂದ ನವೀಕರಣ ಕಾರ್ಯ ಕೈಗೊಂಡು 7 ತಿಂಗಳಲ್ಲಿ ಪುನರ್ನವೀಕರಣಗೊಳಿಸಲಾಗಿದೆ. 2024 ಮಾರ್ಚ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಪುನರ್ನವೀಕರಣಗೊಂಡ ಕೆರೆಯನ್ನು ಉದ್ಘಾಟನೆ ಮಾಡಿದ್ದರು. ಜಿಲ್ಲಾಧಿಕಾರಿ ಪಾಲಿಕೆ ಆಯುಕ್ತರು ಅಧಿಕಾರಿಗಳ ಪ್ರೋತ್ಸಾಹದಿಂದ ಬೋಟಿಂಗ್ ಈಗ ಪ್ರಾರಂಭವಾಗಿದೆ 11 ಪೆಡಲ್ ಬೋಟ್ ಮೂರು ಯಾಂತ್ರಿಕ ಬೋಟ್ ಪ್ರವಾಸಿಗರಿಗೆ ಈ ಲಭ್ಯವಿದ್ದು ಶೀಘ್ರದಲ್ಲಿ ಬನಾನ ಬೋಟ್ ಹಾಗೂ ಮೋಟಾರ್ ಬೋಟು ಸೇರ್ಪಡೆಗೊಳ್ಳಲಿದೆ ಎಂದು ಹೇಳಿದರು. 

   ಕೆರೆಯಲ್ಲಿ ಹೂಳು ತುಂಬಿ ಉಪಯೋಗ ಶೂನ್ಯವಾಗಿದ್ದು 17000 ಕ್ಯೂಬಿಕ್ ಮೆಟ್ರಿಕ್ ನಷ್ಟು ಮಣ್ಣನ್ನು ಹೂಳೆತ್ತಲಾಗಿದೆ.ಈಗ ಕೆರೆಗೆ ಫಿಲ್ಟರ್ ಬೆಡ್ ನಿಂದ ನೀರು ಯಾರಿದು ಬರುತ್ತಿದ್ದು ಕೆರೆಯ ಸುತ್ತಲಿನ ಕಾಮಗಾರಿಯನ್ನು ಪರಿಸರ ಇಲಾಖೆಯನ್ನು ವರದಿಯಂತೆ ಕೈ ಬಿಡಲಾಗಿದೆ ಕೆರೆಗೆ ಹಾನಿಯ ಸಿಗಲು ಅವಕಾಶವಿಲ್ಲ ಎಂದು ಕೃಷ್ಣ ಬಾಜಪೇಯಿ ಹೇಳಿದರು. 

   ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾತನಾಡಿ ಅಪ್ಪನ ಕೆರೆಯಲ್ಲಿ ಬೋಟಿಂಗ್ ಪ್ರಾರಂಭವಾಗಿರುವುದರಿಂದ ಮಕ್ಕಳಿಗೆ ಖುಷಿಯಾಗಿದೆ ಸಾರ್ವಜನಿಕರು ತಮ್ಮ ರಜಾ ದಿನಗಳಲ್ಲಿ ಶರಣಬಸವೇಶ್ವರ ಕೆರೆ ಹಾಗೂ ಉದ್ಯಾನದ ಮನರಂಜನೆಯನ್ನು ಅನುಭವಿಸಿ ಕೆರೆ, ಪಾರ್ಕ್ ಗಳ ಸಂರಕ್ಷಣೆಗೆ ಕೈಜೋಡಿಸಬೇಕಾಗಿದೆ. ಪ್ರಾದೇಶಿಕೆ ಆಯುಕ್ತರ ಸತತ ಶ್ರಮದಿಂದ ಬೋಟಿಂಗ್ ಪ್ರಾರಂಭವಾಗಿದ್ದು ಸಾರ್ವಜನಿಕರಿಗೆ ಸಂಕ್ರಾಂತಿ ಹಬ್ಬದ ದೊಡ್ಡ ಗಿಫ್ಟ್ ಇದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

      ಮಹಾನಗರ ಪಾಲಿಕೆ ಆಯುಕ್ತರಾದ ಭುವನೇಶ್ ದೇವಿದಾಸ ಪಾಟೀಲ್ ಮಾತನಾಡಿ ಕಲಬುರಗಿ ಜನತೆಯ ಬಹುಕಾಲದ ಕನಸು ಈಗ ನನಸಾಗಿದೆ. ಕಲಬುರಗಿಯ ಪ್ರವಾಸಿ ನಕ್ಷೆಯಲ್ಲಿ ಶರಣಬಸವೇಶ್ವರ ಕೆರೆಯೂ ಕೂಡ ಸೇರ್ಪಡೆಗೊಂಡು ಪ್ರವಾಸಿಗರಿಗೆ ಮತ್ತು ಈ ಭಾಗದ ಜನರಿಗೆ ಇದೊಂದು ಅದ್ಭುತ ಪ್ರಕೃತಿ ರಮಣೀಯ ತಾಣವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು. 

   ಈ ಸಂದರ್ಭದಲ್ಲಿ ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಜಿ.ಎಸ್ ಮಳಗಿ, ಕೆರೆ ನಿರ್ವಹಣಾ ಪ್ರಾಧಿಕಾರದ ತಾಂತ್ರಿಕ ಸಲಹೆಗಾರರಾದ ಭರತ್ ಭೂಷಣ್, ಸಲಹಾ ಸಮಿತಿಯ ಸದಸ್ಯರಾದ ಡಾ. ಸದಾನಂದ ಪೆರ್ಲ, ಪ್ರೊ. ಶಂಕರಪ್ಪ ಹತ್ತಿ, ನೋಪಾಸನ ಬೋಟ್ ಕ್ಲಬ್ ನ ಶಕೀಬ್ , ಸಾಂಸ್ಕೃತಿಕ ಸಮಿತಿ ಸದಸ್ಯರಾದ ಬಸವ ಪ್ರಭು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.