ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕರಾಟೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಿ. ಡಾ. ಮಲ್ಲಿಕಾರ್ಜುನ್ ನಾಯ್ಕೋಡಿ ಆಗ್ರಹ
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕರಾಟೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಿ. ಡಾ. ಮಲ್ಲಿಕಾರ್ಜುನ್ ನಾಯ್ಕೋಡಿ ಆಗ್ರಹ
ರಾಜ್ಯದಲ್ಲಿ ಇತ್ತೀಚಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿರುವಂತಹ ಹೀನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ. ಮಾನವೀಯ ಮೌಲ್ಯಗಳು ಮರೆಯಾಗಿ ನರಕಾಸುರ ಬಕಾಸುರ ಭ್ರಷ್ಟಾಸುರ ಹಾಗು ರಣ ರಾವಣರ ದಂಡು ರಾಜ್ಯದ ಪ್ರತಿಯೊಂದು ಮೂಲೆಯಲ್ಲಿ ದುರ್ಯೋಧನ ದುಶ್ಯಾಸನರಂತಹ ಮನೋ ಪ್ರವೃತ್ತಿಯ ಪೈಶಾಜಿಕ ಕೃತ್ಯ ವೆಸುಗುವ ಕಾಮುಕರು ರಾಜ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು . ರಾಮರಾಜ್ಯ ಹೋಗಿ ರಾವಣ ರಾಜ್ಯವಾಗುತ್ತಿದೆ.ಕಾನೂನು ಕಾಯ್ದೆಗಳು ಎಷ್ಟೇ ಕಠಿಣವಾಗಿ ಜಾರಿಗೆ ಬಂದರು ಸಹಿತ ಇದುವರೆಗೂ ಕಾಮುಕರು ಕಾನೂನಿನ ಯಾವುದೇ ಭಯವಿಲ್ಲದೆ ರಾಜ್ಯದ ಕೊಲೆಗೇಡುಕರು ಅತ್ಯಾಚಾರಿಗಳು ಬೇಲ ಮೇಲೆ ಅಥವಾ ಜಾಮೀನಿನ ಮೇಲೆ ಹೊರಗೆ ಬಂದು ಅಟ್ಟಹಾಸ ಮೆರೆಯುತ್ತಿರುವ ಕಾರಣ ರಾಜ್ಯದ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸಬೇಕಾದರೆ ಆತಂಕ ಪಡುತ್ತಿದ್ದಾರೆ. ಬೆಳಿಗ್ಗೆ ಶಾಲೆಗೆ ಹೋದ ಮಗು ಸಾಯಂಕಾಲ ಮನೆಗೆ ಬರುವುದು ಪಾಲಕರಿಗೆ ಗ್ಯಾರಂಟಿ ಇಲ್ಲದಂತಾಗಿದೆ. ಆದಕಾರಣ ಸರ್ಕಾರ ಮಕ್ಕಳಿಗೆ ಶಿಕ್ಷಣದ ಜೊತೆ ಸಮವಸ್ತ್ರ ಕೊಟ್ಟರೆ ಅಷ್ಟೇ ಸಾಲದು ಪ್ರತಿಯೊಂದು ಮಗುವಿಗೆ ಹೋರಾಡುವ ಅಥವಾ ಕಾಮುಕರೊಂದಿಗೆ ಕಾದಾಡುವ ವಿದ್ಯೆಯನ್ನು ಕಲಿಸಬೇಕಾಗಿದೆ ಪ್ರತಿಯೊಂದು ಮಗುವಿಗೆ ಬಲವಾದ ಆತ್ಮಸ್ಥೈರ್ಯ ಮನೋ ಧೈರ್ಯ ಬರಬೇಕಾದರೆ ಪ್ರತಿಯೊಂದು ಶಾಲೆಗಳಲ್ಲಿ ಕರಾಟೆ ಶಿಕ್ಷಕರನ್ನು ಸರಕಾರ ನೇಮಕ ಮಾಡಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿಗಳಾದ ಡಾ. ಮಲ್ಲಿಕಾರ್ಜುನ್ ನಾಯ್ಕೋಡಿ ಅವರು ಸರ್ಕಾರಕ್ಕೆ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ . ಅಷ್ಟೇ ಅಲ್ಲದೆ ಈ ವಿಷಯದ ಕುರಿತು ಸರಕಾರ ಒಂದು ವೇಳೆ ನಿರ್ಲಕ್ಷ್ಯ ಧೋರಣೆ ತಾಳಿದ್ದೆ ಆದಲ್ಲಿ ಸರಕಾರದ ವಿರುದ್ದ ವಿವಿಧ ಸಂಘಟನೆಗಳ ಒಕ್ಕೂಟದೊಂದಿಗೆ ಕರ್ನಾಟಕ ಬಂದ್ ಮಾಡಲಾಗುವದೆಂದು ಸರ್ಕಾರಕ್ಕೆ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ ಹಾಗು ಅತಿ ಶೀಘ್ರದಲ್ಲಿ ರಾಜ್ಯ ಸರ್ಕಾರ ಕರಾಟೆ ಶಿಕ್ಷಕರ ನೇಮಕಾತಿ ಆದೇಶ ಅತಿ ಶೀಘ್ರದಲ್ಲಿ ಹೊರಡಿಸಬೇಕೆಂದು ಈ ಸಂದರ್ಭದಲ್ಲಿ ಡಾ ಮಲ್ಲಿಕಾರ್ಜುನ್ ನಾಯ್ಕೋಡಿ ಅವ್ರು ಸರ್ಕಾರಕ್ಕೆ ಅಗ್ರಹಿಸಿದ್ದಾರೆ
ವರದಿ ಜೆಟ್ಟಪ್ಪ ಎಸ್ ಪೂಜಾರಿ