ಗಂಡ್ಗತ್ತೆ ಜವಾಬ್ದಾರಿಯುತ ಗಂಡು ಮಕ್ಕಳ ನೋವಿನ ಮಾತುಗಳು

ಗಂಡ್ಗತ್ತೆ ಜವಾಬ್ದಾರಿಯುತ ಗಂಡು ಮಕ್ಕಳ ನೋವಿನ ಮಾತುಗಳು
ಪ್ರಪಂಚದಲ್ಲಿ ಗಂಡಸಿಗೆ ಒಂದು ಸ್ಥಾನಮಾನವಿದೆ ಅದೇ ತರಹ ಗಂಡು ಜೀವಿಗಳಿಗೆ ತಾನು ಕಂಡ ಎಷ್ಟೋ ಕನಸುಗಳನ್ನು ತಾನೇ ಮಣ್ಣು ಮುಚ್ಚಿ ಕಮರಿಸಿದ ಕೀರ್ತಿಯು ಸಹ ಅವನಿಗಿದೆ , ಇಷ್ಟೆಲ್ಲ ವನವಾಸ , ಕಷ್ಟ , ನೋವು , ತ್ಯಾಗ ಎಲ್ಲವನ್ನು ಸಹಿಸಿ ಇರುವುದರಲ್ಲೇ ಖುಷಿಪಟ್ಟು ಗಂಡಾಗಿ ಹುಟ್ಟಿದ್ದೇನೆ ಎಂಬ ಒಂದೇ ಒಂದು ಶತಮಾನದ ಕಾರಣಕ್ಕೆ ಮನೆ ಸಂಸಾರ ಅಪ್ಪ, ಅಮ್ಮನ ಸಲಹುದರ ಜೊತೆಗೆ, ಒಡ ಹುಟ್ಟಿದ ಸೋದರ ಸೋದರಿಯರ ಸಲಹಿ ವಿದ್ಯಾಭ್ಯಾಸ ಮಾಡಿಸಿ ಅವರ ಬದುಕಿನ ದಡ ಸೇರಿಸುವ ಜವಾಬ್ದಾರಿ ಸಹ ಇವನ ಹೆಗಲಿಗೆ ಬೆಂಬಿಡದ ಭೂತವಾಗಿ ಕಾಡುತ್ತಿದೆ.
ಹೌದು ಸ್ವಾಮಿ ಇದು ಎಲ್ಲರ ಮನೆಯಲ್ಲೂ ಇರುವ ಸಾಮಾನ್ಯ ಸಮಸ್ಯೆಗಳು " ಎಲ್ಲರ ಮನೆಯ ದೋಸೇನೂ ತೂತೆ " ಅಲ್ವಾ ಅದರಲ್ಲಿ ನೀವು ಒತ್ತಿ ಹೇಳುವುದು ಏನಿದೆ ಅಂತ ನೀವು ಕೇಳಬಹುದು ಅದಕ್ಕೂ ಮುಂದೆ ಉತ್ತರ ವನ್ನು ಕೊಡ್ತೀನಿ
ದಯವಿಟ್ಟು ಓದ್ಕೊಂಡು ಮುಂದೆ ಬನ್ನಿ ತೂತಗಿರೋ ದೋಸೆ ತಿಂದು ಇಲ್ಲೇ ನಿದ್ದೆಗೆ ಹೋಗ್ಬೇಡಿ ಪ್ಲೀಸ್.
ಹೌದು ಓದುಗ ಮಹಾಪ್ರಭುಗಳೇ ನೀವು ಹೇಳಿದ್ದು ನೂರಕ್ಕೆ ನೂರು ಪ್ರತೀಶತ ಸತ್ಯ " ಎಲ್ಲಾರ ಮನೆ ದೋಸೇನೂ ತೂತೆ " ಒಪ್ಪುವ ಮಾತೆ ಆದರೆ ನಾನು ಹೇಳ ಹೊರಟಿರೋದು ತೂತಗಿರೋ ದೋಸೆ ಮನೆಯದಲ್ಲ ಜವಾಬ್ದಾರಿಯಿಂದಾಗಿ ಜೀವನದ ಕಾವಲಿಯನ್ನೇ ತೂತು ಮಾಡ್ಕೊಂಡು ಆನೆ ಅಷ್ಟು ಬಾರದ ಜವಾಬ್ದಾರಿಯನ್ನು ಹೊತ್ತು ಕತ್ತೆಯಂತೆ ದುಡಿಯುತ್ತಿರುವ ಅಮಾಯಕ ಗಂಡು ಮಕ್ಕಳ ಬಗ್ಗೆ, ಇವಾಗ ನಿಮಗೆ ನನ್ನ ಬರಹದ ದಾರಿ ಕಾಣುಸುತ್ತಿದೆ ಅನ್ಕೋತೀನಿ ಸರಿ ಬನ್ನಿ ಮುಖ್ಯ ವಿಷಯಕ್ಕೆ ಬರೋಣ.
ಹೌದು ದೇವರು ಗಂಡು ಹಿರಿಯನಾಗಿ ಮನೆಯಲ್ಲಿ ಹುಟ್ಟಿ ಎಷ್ಟೆಲ್ಲ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸ್ತಾನೆ ಅಲ್ವಾ ಆಗಂತ ನಾನು ಹೆಣ್ಣುಮಕ್ಕಳನ್ನು ತುಚ್ಛ ಮಾಡ್ತಿಲ್ಲ ಹೆಣ್ಣುಮಕ್ಕಳಿಗೂ ಅವರದೇ ಆದ ಜವಾಬ್ದಾರಿಗಳಿವೇ ಒಪ್ಕೋಳೋ ಮಾತು ಆದರೆ ಗಂಡು ಮಕ್ಕಳಿಗೆ ಸ್ವಲ್ಪ ಜಾಸ್ತಿ ಅನ್ಕೋತೀನಿ ಯಾಕಂದ್ರೆ ಬಾಲ್ಯದಲ್ಲಿ ಅವನಿಗೆ ಸಿಗೋ ಸಂತಸ, ಅಸೆ ಪಟ್ಟ ವಸ್ತುವೇ ಆಗಲಿ ವ್ಯಕ್ತಿಗಳೇ ಆಗಲಿ ಮುಂದೆ ಅವನ ಜೀವನದಲ್ಲಿ ಮುಂದೆ ಸಿಗೋದು ಬಹಳ ಅಪರೂಪ ಆಗೋಗುತ್ತೆ ಯಾಕಂದ್ರೆ ಜವಾಬ್ದಾರಿ ಮೂಟೆ, ಅವನು ಕೆಲವು ಬಾರಿ ಅಸೆ ಪೂರೈಸಿಕೊಳ್ಳದಷ್ಟು ತ್ಯಾಗಮಯಿಯಾಗಿ ಬದುಕಿಬಿಡುತ್ತಾನೆ.
ಬಾಲ್ಯವನ್ನು ಸುಂದರವಾಗಿ ಕಳೆಯುವ ಗಂಡು ಮಕ್ಕಳು ಪ್ರೌಢವಸ್ಥೆಗೆಬರುತ್ತಿದ್ದ ಹಾಗೆ ತುಂಟಾಟಗಳನ್ನು ಮರೆತು ಜವಾಬ್ದಾರಿಯ ಮೊದಲ ಹಂತವಾಗಿ ಸೋದರ ಸೋದರಿಯ ಜವಾಬ್ದಾರಿಯನ್ನು ಹೆಗಲಿಗೆ ಹಾಕಿಕೊಳ್ಳುತ್ತಾನೆ ತನ್ನ ಓದನ್ನೂ ಲೆಕ್ಕಿಸದೆ ಅಕ್ಕ ತಮ್ಮನ ಓದಿಗೆ ಪ್ರಾಮುಖ್ಯತೆ ನೀಡುತ್ತಾನೆ, ಮುಂದುವರೆದು ಸೋದರಿಯ ಮದುವೆ ಮಕ್ಕಳು ಹೀಗೆ ತನ್ನ ಇಡೀ ಜೀವನ ಕಳೆದುಬಿಡುತ್ತಾನೆ,ಗಂಡು ಎಂಬ ಒಂದೇ ಕಾರಣಕ್ಕೆ ತನ್ನೆಲ್ಲ ಖುಷಿ, ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿ, ತನ್ನ ಬದುಕಿನ ಸರ್ವಸ್ವವನ್ನೂ ತನ್ನ ಕುಟುಂಬಕ್ಕಾಗಿ ಸಮರ್ಪಸಿಕೊಂಡು ಇಡೀ ಜೀವನವನ್ನು ಪರರಿಗಾಗಿ ಸವೆಸುವ, ಕತ್ತೆಯಂತೆ ದುಡಿದು ಕುಟುಂಬದ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಕೆಲವು ನಿಸ್ವಾರ್ಥ ಗಂಡು ಮಕ್ಕಳಿಗೆ ಮುಂದೆ ಆದರೂ ದೇವರು ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುವ ಶಕ್ತಿಯನ್ನು ಕರುಣಿಸಲಿ.
ಲೇಖಕ -ಮಹದೇವಸ್ವಾಮಿ ಎಂ ಕೆ
ಮಡಹಳ್ಳಿ ನಂಜನಗೂಡು ತಾಲ್ಲೂಕು ಮೈಸೂರು ಜಿಲ್ಲೆ
9742189742