ನನ್ನ ಭಾವದಂತೆ ಬರಹ- ಪ್ರಭಾಕರ ಜೋಷಿ

ನನ್ನ ಭಾವದಂತೆ ಬರಹ- ಪ್ರಭಾಕರ ಜೋಷಿ

ನನ್ನ ಭಾವದಂತೆ ಬರಹ- ಪ್ರಭಾಕರ ಜೋಷಿ

ಕಲಬುರಗಿ: ಅಕ್ಷರದಲ್ಲಿ ತಾಕತ್ತಿದೆ ಬರಹಕ್ಕೆ ಯಾವುದೇ ಪಲ್ಲೋ ಇಲ್ಲ.ಸಾಹಿತ್ಯಕ್ಕೆ ಯಾವುದೇ ಭೇದ ಇಲ್ಲ ಹೀಗಾಗಿ ನನ್ನ ಭಾವದಂತೆ ಬರಹ ಎಂದು ರಂಗಾಯಣ ಮಾಜಿ ನಿರ್ದೇಶಕ ಸಾಹಿತಿ ಪ್ರಭಾಕರ ಜೋಷಿ ಅಭಿಮತಪಟ್ಟರು

      ಕೃಷ್ಣಾ ನಗರದಲ್ಲಿ ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿ ಷ್ಠಾನ ಏರ್ಪಡಿಸಿದ ಸಾಹಿತ್ಯ ಸಮಾಗಮ ಉಪನ್ಯಾಸ ಮಸಲಿಕೆ-೭ ಭೀಮಸೇನ ಗಾಯಕವಾಡ ಬದುಕು- ಬರಹ ಮಾಲಿಕೆಗೆ ಚಾಲನೆ ನೀಡಿ ಮಾತನಾಡಿ ಇವತ್ತು ಸಾಹಿತ್ಯ ಚರ್ಚೆ ಆಗಬೇಕಾದ ಕೆಲಸ ವೇದಿಕೆ ಮಾಡುತ್ತಿದೆ ಮುಂದು ವರಿಯಲಿ ಎಂದು ಹಾರೈಸುವೆ ಎಂದರು

      ಶಾಹಿರಿ- ಗಜಲ್ ಕುರಿತು ಡಾ.ಮಲ್ಲಿನಾಥ ತಳವಾರ ಮಾತನಾಡಿ ಶಾಹಿರಿ ಕನ್ನಡದ ಒಂದು ಕಾವ್ಯ ಪ್ರಕಾರವಾಗಿದೆ ಆದರೆ ಉರ್ದುವಿನಲ್ಲಿ ಶಾಹಿರಿ ಕಾವ್ಯವಾಗಿ ದೆ,ಗಜಲ್ ಗಳಲ್ಲಿ ಪ್ರೀತಿಯ ವಿಷಯದ ಜೊತೆಗೆ ಸಾಮಾಜಿ ಕ ಸಂವೇದನೆ ಒಳಗೊಂಡ ಭೀಮಸೇನ ಅವರ ಬರಹ ರೋಮಾಂಚನ ಉಂಟುಮಾಡಿದೆ ಎಂದರು.

          ಕಾವ್ಯವನ್ನು ಕುರಿತು ಡಾ.ಕೈಲಾಸ ಡೋಣಿ ಮಾತನಾಡಿ ಭೀಮಸೇನ ಕಾವ್ಯ ಶೋಷಿತ, ಅವಮಾನ,ಅಪಮಾನಗಳನ್ನುಂಡ ಕಾವ್ಯ ರಚಿಸಿದ್ದಾರೆ. ಸಿದ್ದಲಿಂಗಯ್ಯ, ಮೊದಲಾದ ಕಾವ್ಯದ ಸಮಾನವಾದ ಕಾವ್ಯ ರಚಿಸಿದ ಬಹುಮುಖ ಕವಿ ಎಂದರು.

  ‌‌ ಸಾಹಿತಿ ಭೀಮಸೇನ ಗಾಯಕವಾಡ ಮಾತನಾಡಿ ನನಗೆ ಈ ದೇಶದಲ್ಲಿ ಅಸ್ಪ್ರಶ್ಯರು ಮತ್ತು ಮಹಿಳೆಯರು ಶೋಷಣೆಗೆ ಒಳಗಾಗಿದ್ದು ಬಿಟ್ಟರೆ ಬೇರಾರು ಆಗಿಲ್ಲ, ಸಮಾನತೆ,ಸ್ವಾತಂತ್ರ್ಯ, ಭಾತೃತ್ವ,ಚಿಂತನ ನನಗೆ ಕಾಡಿದ ವಿಷಯ ಬರವಣಿಗೆಯಲ್ಲಿ ಬರೆದಿದ್ದಾರೆ.ಅವರ ಬುದ್ಧ,ಬಸವ,ಅಂಬೇಡ್ಕರ್ ಚಿಂತನೆ ಮಾದರಿ ಎಂದರು.

            ಅಧ್ಯಕ್ಷತೆವಹಿಸಿದ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ ನಮ್ಮ ಲೇಖಕರು, ಕವಿ ಬರಹಗಾರರು ಪರಿಚಯವಾಗಬೇಕು.ಕವಿ ಭೀಮಸೇನ ನಾಲ್ಕು ಕೃತಿ ಪ್ರಕಟವಾಗಿವೆ ಇನ್ನೂ ವಚನ,ಹಾಯಿಕು,ರುಬಾಯಿ,ಕಾವ್ಯ ರಚಿಸಿದ್ದಾರೆ. ಕವಿ ತನ್ನ ಶೋಷಣೆ ಕುರಿತು ರಚಿಸಿದ್ದಾರೆ ರಂದರು.

      ಆರೋಗ್ಯ ಇಲಾಖೆ ರಾಜೇಶ್ವರದ ಲ್ಯಾಬ್ ಟೆಕ್ನಿಸಿಯನ್

ವಿಶ್ರಾಂತ ಶ್ರೀ ಮಲ್ಲಪ್ಪ ಭೀಮರಾವ್ ಗಾಯಕವಾಡ ಅವರ ೮೬ ನೆಯ ಜನ್ಮ ಸಂಭ್ರಮದಲ್ಲಿ ದಂಪತಿಗಳಿಗೆ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗ ಕಥಾ ಸ್ಪರ್ಧೆ ಯ ಕಂಚು ಪದಕ ವಿಜೇತ ಡಾ.ಶುಲಾಬಾಯಿ ಅವರಿಗೆ ಸನ್ಮಾನಿಸಲಾಯಿತು.

ಬಸವರಾಜ ಶೃಂಗೇರಿ ಪ್ರಾರ್ಥನೆ ಗೀತೆ ಹಾಡಿದರು, ಡಾ.ಜಯದೇವಿ ಗಾಯಕವಾಡ ಸ್ವಾಗತಿಸಿ ಪ್ರಾಸ್ತಾವಿಕ ನುಡಿ ಆಡಿದರು ಡಾ.ಶೀಲಾದೇವಿ ಬಿರಾದಾರ ನಿರೂಪಿಸಿದರು ಡಾ.ಸಿದ್ಧಪ್ಪ ಹೊಸಮನಿ ವಂದಿಸಿದರು

ಡಾ.ಸುಖದೇವಿ ಘಂಟೆ

ಡಾ.ಪೀರಪ್ಪ ಸಜ್ಜನ, ಡಾ.ಸಂಧ್ಯಾ ಸುರೇಶ ಕಾನೇಕರ, ಮನೋಹರ ಮರಗುತ್ತಿ, ಡಾ.ಚಿದಾನಂದ ಕುಡ್ಡನ್, ಡಾ.ರಾಜಕುಮಾರ ಮಾಳಗೆ,ಡಾಕಪ್ಪ,ಭಾಗ್ಯಶ್ರೀ, ಶಿವಪುತ್ರ ಕೊಲಾರೆ,ಡಾ.ಅವಿನಾಶ್, ಡಾ.ಶಿವಪುತ್ರ ಹೊಳ್ಕರ್,ಡಾ.ರಾಜಕುಮಾರ ಮಾಳಗೆ ಮೊದಲಾದವರು ಭಾಗವಹಿಸಿದ್ದರು.

ವರದಿ ಡಾ .ಅವಿನಾಶ S.D.