ಕಲಾತರಂಗ ಕಲಾಂತರಂಗ

ಕಲಾತರಂಗ ಕಲಾಂತರಂಗ

ಕಲಾತರಂಗ ಕಲಾಂತರಂಗ

ಪುಸ್ತಕ :-ಕಲಾತರಂಗ.{ಅಂಕಣ ಬರಹಗಳು}

ಲೇಖಕರು :-ವಿದುಷಿ ಅನುಪಮಾ ರಾಘವೇಂದ್ರ.

ಪ್ರಕಾಶಕರು :- ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ (ರಿ )ಎಡನೀರು.

ಬೆಲೆ :-ನೂರು ರೂಪಾಯಿ (100)

""ಸೃಜನಾತ್ಮಕ ಬರವಣೆಗೆಯೇ ಸಾಹಿತ್ಯದ ಸಂಪತ್ತು""

ಅದೊಂದು ತಪಸ್ಸಿನ ರೀತಿ, ನಿರಂತರ ಪರಿಶ್ರಮವಿದ್ದಾಗ ಮಾತ್ರ ಸಿದ್ದಿಸುವದೆನ್ನುವುದು ಅಕ್ಷರಸಹ ಸತ್ಯವಾದ ಮಾತು.

ಕಲಾತರಂಗ -ಕಲಾಂತರಂಗ ಕೃತಿ ಇದಕ್ಕೊಂದು ಸ್ಪಷ್ಟ ನಿರ್ದಶನ.

ಬರಹಗಾರ್ತಿ ಅನುಪಮಾ ರಾಘವೇಂದ್ರರವರು ಕಲೆ ಮತ್ತು ಸಾಹಿತ್ಯ ಎರಡನ್ನು ಸರಿಯಾಗಿ ಅರಿತುಕೊಂಡು ""ಕಲಾತರಂಗ-ಕಲಾಂತರಂಗ"" ಕೃತಿಯನ್ನು ರಚಿಸಿದ್ದಾರೆ.

ಈ ಕೃತಿಯಲ್ಲಿ ಭರತನಾಟ್ಯ, ಯಕ್ಷಗಾನ, ಮತ್ತು ಅದಕ್ಕೆ ಸಂಭಂದಿಸಿದ ಸಾಹಿತ್ಯದ ಸುತ್ತ ಕಟ್ಟಿಕೊಟ್ಟ ಗಟ್ಟಿ ಹೂರಣದಂತೆ ಅನುಪಮಾರವರ ಅನುಭವ ಸಂಪತ್ತಾಗಿದೆ.

ಕಲೆ, ಕಲಾವಿದ, ಮತ್ತು ಪ್ರೇಕ್ಷಕ ಒಂದೇ ಸರಳರೇಖೆಯಲ್ಲಿದ್ದಾಗ ಮಾತ್ರ ಕಲಾವಿದನ ಕಲೆ ಅಭಿವ್ಯಕ್ತಿ ಗೋಚರವಾಗುತ್ತದೆ.

ಇದರ ಪರಿಣಾಮ ಕಲೆಯೂ ಕಲಾವಿದನನ್ನು ಬೆಳೆಸುತ್ತದೆ ಅನ್ನಬಹುದು.

ಒಂದು ಕಲೆ ಶಾಶ್ವತವಾಗಿ ಉಳಿಯಬೇಕಾದರೆ ಕಲಾವಿದನೊಳಗೆ ಕಲೆಯ ನವರಸ ಇದ್ದಾಗ ಮಾತ್ರ ಪ್ರೇಕ್ಷಕ, ಕಲಾವಿದನ ಕಲೆಯಯನ್ನು ಮೆಚ್ಚುತ್ತಾನೆ.ಇಲ್ಲದಿದ್ದರೆ ಕಲಾವಿದನಿಂದ ದೂರ ಸರಿಯುತ್ತಾನೆ. ಆವಾಗ ಕಲಾವಿದ ಭ್ರಮನಿರಸನಗೊಂಡು ಏಕಾಂಗಿಯಾಗಿ ಘಾಡ ಮೌನಕ್ಕೆ ಜಾರುತ್ತಾನೆ. ಅನ್ನುವದನ್ನು ಲೇಖಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಲಾವಿದನಿಗೆ ಕಲೆಯೂ ಬದುಕಿನ ದಾರಿ, ಕಲಾವಿದನಾದವನು ತಾನು ನಂಬಿದ ಕಲೆಯನ್ನು ಆರಾಧಿಸುತ್ತಾನೆ. ಆದರೇ ಬೇಸರದ ಸಂಗತಿಯಂದರೆ ವಾತ್ಸವದಲ್ಲಿ ಇಂದಿನ ಕೆಲವಬ್ಬ ಕಲಾವಿದರು ಕಾಂಚಣದ ಹಿಂದೆ ಬಿದ್ದು ಕಲೆಯ ಮೌಲ್ಯ ಕಳೆಯುತ್ತಿದ್ದಾರೆ.ಕಲೆಗೆ ಬೆಲೆ ಕೊಡದೆ ಅಹಂ ಭಾವದಿಂದ ಬಿಗುತ್ತಿರುವದನ್ನು ಲೇಖಕರು ಇದರಲ್ಲಿ ಹಂಚಿಕೊಂಡಿದ್ದಾರೆ.

ಸಮಾಧಾನದ ಸಂಗತಿಯಂದರೆ ಕೆಲ ಕಲಾವಿದರು ತನ್ನ ಕಲೆಯನ್ನು ದೇವರಂತೆ ಆರಾಧಿಸುತ್ತಾರೆ, ಪ್ರೀತಿಸುವ, ದೈವಿಭಾವದಿಂದ ಕಾಣುವ ಕಾರಣ ಕಲಾರಂಗ ಇನ್ನೂ ಉಸಿರಾಡುತ್ತಿದೆ. ಕಲಾವಿದನಾದವನಿಗೆ ತ್ಯಾಗದ ಮನೋಭಾವ ಬೇಕು ತ್ಯಾಗದ ಬೆಲೆ ಗೊತ್ತಿಲ್ಲದವನಿಗೆ ಕಲೆ ಒಲೆಯದು.

ಕೇವಲ ಕಾಟಾಚಾರಕ್ಕಾಗಿ ತಾನು ಕಲಾವಿದ, ಕಲಾವಿದೆಯಂದು ಬೀಗಿದರೆ ಆ ಕಲಾವಿದ ದಾರಿದ್ರ್ಯ ಕಲಾವಿದ ಎಂಬುದನ್ನು ಲೇಖಕರು ಪ್ರತಿಪಾದಿಸಿದ್ದಾರೆ.

ಕಲೆಯಂಬುವದು ವಿಲಾಸಕ್ಕಾಗಿ ಅಲ್ಲ ವಿಕಾಸಕ್ಕಾಗಿಯಂದು ಅಭಿಪ್ರಾಯ ವ್ಯಕ್ತಪಡಿಸುವ ಲೇಖಕರು ಇಂದು ಯಕ್ಷಗಾನ, ನಾಟ್ಯ ಮೊದಲಾದವುಗಳು ರಂಗದಲ್ಲಿ ವಿಲಾಸವಾಗಿ ದುರ್ಮಾoಸದಂತೆ ಬೆಳೆದಿದೆಯಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮತ್ತೊಂದಡೆ ಕಲೆ ಮತ್ತು ಸಾಹಿತ್ಯ, ಇವೆರಡು ಪರಸ್ಪರ ಮಿಳಿತವಾದಗ ಮಾತ್ರ ಸಂಸ್ಕೃತಿ, ಸಂಸ್ಕಾರವೆಂದು ಹೇಳುವ ಲೇಖಕರು ತಮ್ಮ ಕೃತಿಯ ಮೂಲಕ ಕಲೆ ಮತ್ತು ಸಾಹಿತ್ಯಕ್ಕೆ ಜೀವ ತುಂಬುವ ಜೊತೆಗೆ ಅದರ ಹೂರಣದೊಳಗೆ ಇಳಿದು ಕಲೆಯ ಒಂದೊಂದು ಅಂಗವನ್ನು ವಿಶ್ಲೇಷಿಸಿದ್ದಾರೆ.

ಯಾವಾಗ ಕಲಾವಿದ /ಕಲಾವಿದೆ ಕಲೆಯಪರ ನಿಂತು ಮಾತನಾಡುತ್ತಾರೋ ಆವಾಗ ಕಲೆಯೇ ಅವರನ್ನು ಮಾತಾಡಿಸುತ್ತದೆ, ಕಲಾವಿದ ಸದಾಕಾಲ ಕ್ರಿಯಾಶೀಲನಾಗಿರುವಂತೆ ಮಾಡುತ್ತದೆ, ಸಮಾಜದಕ್ಕೆ ಯೇನು ಬೇಕು /ಬೇಡಗಳು ಅನ್ನುವದನ್ನು ಕಲಾವಿದನ ಮೂಲಕ ದ್ವನಿಯಬ್ಬಿಸುತ್ತದೆ.

 ಲೇಖಕರಾದ ಅನುಪಮಾರವರು ಯಕ್ಷಗಾನ, ಭರತನಾಟ್ಯ ಮತ್ತು ಸಾಹಿತ್ಯ ಪ್ರಾವಿಣ್ಣ್ಯತೆ ಪಡೆದವರಗಿದ್ದು 'ಕಲಾತರಂಗ-ಕಲಾಂತರಂಗ' ಕೃತಿಯ ಮೂಲಕ ಕಲಾವಿದರ ಕಲೆಗೆ ಸ್ಫೂರ್ತಿಯಾಗಿರುವ ಜೊತೆಗೆ ಸೊರಗುತ್ತಿರುವ ರಂಗ ಕಲಾವಿದರ ಕಲೆಗೆ ಧ್ವನಿಯಾಗಿದ್ದಾರೆ .

-ಓಂಕಾರ ಪಾಟೀಲ

{ಕಾರ್ಯದರ್ಶಿಗಳು :-ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ