ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿಲ್ಲ ಆದರೆ ಸರಿಯಾದ ಮಾರ್ಗದರ್ಶನ ಅಗತ್ಯವಿದೆ ಶಶೀಲ್ ಜಿ ನಮೋಶಿ
*ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿಲ್ಲ ಆದರೆ ಸರಿಯಾದ ಮಾರ್ಗದರ್ಶನ ಅಗತ್ಯವಿದೆ* ಶಶೀಲ್ ಜಿ ನಮೋಶಿ
ಕಲಬುರ್ಗಿ: ಕಲ್ಯಾಣ ಕರ್ನಾಟಕ ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದ ಪ್ರದೇಶ ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದರು ಈ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಎಂದು ಹಿಂದೆ ಬಿದ್ದಿಲ್ಲ ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಗುಣಮಟ್ಟದ ಶಿಕ್ಷಣದ ಕೊರತೆ ಇದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಅಭಿಪ್ರಾಯಪಟ್ಟರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಆರ್ ಎಂ ಸಿ ಸ್ಯಾಕ್ ಸಭಾಂಗಣದಲ್ಲಿ ನಡೆದ ಧಾರವಾಡದ ವಿದ್ಯಾ ಪಿ ಹಂಚಿನಮನಿ ಸಂಚಾಲಿತ ಎನ್ ಪಿ ಎಸ್ ಪದವಿಪೂರ್ವ ಕಾಲೇಜು ಕಲಬುರ್ಗಿಯಲ್ಲಿ ಪಿಯುಸಿ ದ್ವಿತೀಯ ವರ್ಷದಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳ ಅಭಿನಂದನಾ ಹಾಗೂ ಧಾರವಾಡದ ಪ್ರತಿಷ್ಠಿತ ಜ್ಞಾನದೀಪ ಕೋಚಿಂಗ್ ಸೆಂಟರ್ ಕಲಬುರ್ಗಿ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಕಲಬುರ್ಗಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಬಹುದಿನದ ಆಸೆ ನನ್ನದಾಗಿತ್ತು ಈ ದಿಸೆಯಲ್ಲಿ ನಾನು ರಾಜ್ಯದಲ್ಲಿ ಗುಣಮಟ್ಟದ ಶೈಕ್ಷಣಿಕ ಕ್ರಾಂತಿ ಮಾಡಿದ ಕೇವಲ ಮಹಾನಗರಗಳಲ್ಲಿ ಇರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಕಲಬುರ್ಗಿಯಲ್ಲಿ ಪ್ರಾರಂಭಿಸಬೇಕು ಎಂಬ ಛಲದಿಂದ ನಾನು ಹಾಗೂ ನನ್ನ ಸ್ನೇಹಿತರು ಕೂಡಿಕೊಂಡು ಪ್ರಯತ್ನಿಸಿ ಆ ಶಿಕ್ಷಣ ಸಂಸ್ಥೆ ಕಲಬುರ್ಗಿಯಲ್ಲಿ ಪ್ರಾರಂಭಿಸಿದೆವು. ಮಹಾನಗರಗಳಿಗೆ ಸೀಮಿತವಿಗಿದ್ದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರಪ್ರಥಮ ಬಾರಿಗೆ ಅದು ಉತ್ತರ ಕರ್ನಾಟಕ ಭಾಗದಲ್ಲಿ ಕಲಬುರ್ಗಿಯಲ್ಲಿ ನಮ್ಮ ನೇತೃತ್ವದಲ್ಲಿ ಪ್ರಾರಂಭವಾಗಿ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಮಹಾನಗರಗಳಲ್ಲಿ ದೊರೆಯುವ ಶಿಕ್ಷಣ ದೊರೆಯುವ ಪ್ರಾಮಾಣಿಕ ಪ್ರಯತ್ನ ಮಾಡಲಾಯಿತು. ವಿದ್ಯಾರ್ಥಿಗಳ ಜೀವನದಲ್ಲಿ ಪಿಯುಸಿ ಅತ್ಯಂತ ಮಹತ್ವವಾದ ಘಟ್ಟ ಅದಕ್ಕಾಗಿ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕಂಬ ಉದ್ದೇಶದಿಂದ ನಾನು ಹಾಗೂ ನಮ್ಮ ಎನ್ ಪಿ ಎಸ್ ತಂಡ ರಾಜ್ಯದ ಬೇರೆ ಬೇರೆ ಪಿಯುಸಿ ಕಾಲೇಜುಗಳನ್ನು ಸಂದರ್ಶಿಸಿದೆವು. ಕೊನೆಗೆ ಕಿತ್ತೂರು ಕರ್ನಾಟಕದಲ್ಲಿ ರ್ಯಾಂಕ್ ಗಳ ಶಾಲೆ ಎಂದು ಮನೆಮಾತಾಗಿರುವ ವಿದ್ಯಾ ಪಿ ಹಂಚಿನಮನಿ ಪದವಿಪೂರ್ವ ಕಾಲೇಜು ನಮ್ಮ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡುವುದರಲ್ಲಿ ಸಂದೇಹವಿಲ್ಲ ಎಂದು ಮನಗಂಡು ನಮ್ಮ ತಂಡ ಪ್ರೋ ಪ್ರಹ್ಲಾದ್ ಹಂಚಿನಮನಿ ಸರ್ ಭೇಟಿ ಮಾಡಿ ನಮ್ಮ ಎನ್ ಪಿ ಎಸ್ ಸ್ಕೂಲ್ ಜೋತೆಗೂಡಿ 2022 ರಲ್ಲಿ ವಿದ್ಯಾ ಪಿ ಹಂಚಿನಮನಿ ಸಂಚಾಲಿತ ಎನ್ ಪಿ ಎಸ್ ಪದವಿಪೂರ್ವ ಕಾಲೇಜು ಪ್ರಾರಂಭಿಸಿದೇವು ಕೇವಲ 3 ವರ್ಷಗಳಲ್ಲಿ ಅನೇಕ ವಿದ್ಯಾರ್ಥಿಗಳು ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಸೀಟು ಸರಕಾರಿ ಕೋಟಾದಡಿ ಪಡೆದು ನಮ್ಮತಂಡದ ಕನಸನ್ನು ನನಸು ಮಾಡಿದ್ದಾರೆ. ಇಂದು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ತೆಗೆದುಕೊಂಡಿರುವ ಅನೇಕ ವಿದ್ಯಾರ್ಥಿಗಳಿನ್ನು ಇಂದು ಅಭಿನಂದಿಸಿರುವ ಈ ಕಾರ್ಯ ಸ್ತುತ್ಯಾರ್ಹ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಬಹುತೇಕ ವಿದ್ಯಾ ಪಿ ಹಂಚಿನಮನಿ ಸಂಸ್ಥೆಯ ಉಪನ್ಯಾಸಕರಿಂದಲೆ ಪ್ರಾರಂಭವಾದ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನ ನೀಡುತ್ತಾ ಅವರ ಬಾಳಿಗೆ ದೀಪವಾಗಿರುವ ಜ್ಞಾನ ದೀಪ ಕೋಚಿಂಗ್ ಸೆಂಟರ್ ಸಹ ಇಲ್ಲಿ ಆರಂಭವಾಗುತ್ತಿರುವದು ಇಲ್ಲಿನ ಬಹುತೇಕ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿದೆ ಎಂದು ಹೇಳಿದರು.
ಜ್ಞಾನ ದೀಪ ಕೋಚಿಂಗ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮ ನೆರೆದಿರುವ ಪ್ರೇಕ್ಷಕರನ್ನು ಮನರಂಜಿಸಿದ ನಾಟಕ ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಎನಕೆ?
ಇದೆ ಸಂದರ್ಭದಲ್ಲಿ ಜೋಗಿ ವಿರಚಿತ ಧಾರವಾಡದ ಡಾ ಪ್ರಕಾಶ್ ಗರುಡ ನಿರ್ದೇಶನದ ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ? ನಾಟಕ ಪ್ರದರ್ಶಿಸಲಾಯಿತು
ಜೋಗಿ ವಿರಚಿತವಾದ "ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ?" ಎಂಬ ನಾಟಕದಲ್ಲಿ, ವಿಶ್ವಾಮಿತ್ರನು ನೃತ್ಯ ಮಾಡುವುದಿಲ್ಲ, ಬದಲಿಗೆ ಮಧ್ಯಮ ವರ್ಗದ ಜನರ ದಾಂಪತ್ಯ ಜೀವನದ ಹತಾಶೆ, ಸಂಬಂಧಗಳ ಬಿರುಕುಗಳು ಮತ್ತು ಗಂಡು-ಹೆಣ್ಣಿನ ನಡುವಿನ ಸೂಕ್ಷ್ಮ ಸಮಸ್ಯೆಗಳನ್ನು ವಿಡಂಬನಾತ್ಮಕವಾಗಿ ಚಿತ್ರಿಸಲು ಈ ಕಥಾನಕವನ್ನು ಬಳಸಿಕೊಳ್ಳಲಾಗಿದೆ.
ಇಲ್ಲಿ "ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ?" ಎಂಬ ಶೀರ್ಷಿಕೆಯು ನಾಟಕದ ಮುಖ್ಯ ತಿರುಳನ್ನು ಸೂಚಿಸುತ್ತದೆ:
ಪೌರಾಣಿಕ ಹಿನ್ನೆಲೆ: ಪುರಾಣಗಳಲ್ಲಿ ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸಲು ಇಂದ್ರನು ಮೇನಕೆಯನ್ನು ಕಳುಹಿಸುತ್ತಾನೆ, ಮತ್ತು ಮೇನಕೆಯ ನೃತ್ಯಕ್ಕೆ ಮರುಳಾದ ವಿಶ್ವಾಮಿತ್ರನು ತನ್ನ ತಪಸ್ಸನ್ನು ಕಳೆದುಕೊಳ್ಳುತ್ತಾನೆ.
ನಾಟಕದ ಆಶಯ: ಈ ಪೌರಾಣಿಕ ಘಟನೆಯನ್ನು ಇಂದಿನ ಆಧುನಿಕ ಜಗತ್ತಿನ ಮಧ್ಯಮ ವರ್ಗದ ದಾಂಪತ್ಯಕ್ಕೆ ಹೋಲಿಸಿ, ಸಮಾಜದ ನಡುವೆ ಸಿಲುಕಿರುವ ಗಂಡ-ಹೆಂಡಿರ ಕಷ್ಟಗಳನ್ನು ಮತ್ತು ಅವರ ಸಂಬಂಧಗಳ ಸಂಕೀರ್ಣತೆಯನ್ನು ಹಾಸ್ಯ ಮತ್ತು ವ್ಯಂಗ್ಯದ ಮೂಲಕ ತೋರಿಸಲಾಗುತ್ತದೆ.
ವಿಡಂಬನೆ: ನಾಟಕದ ಕೇಂದ್ರ ಪಾತ್ರ 'ವೈಎನ್ಕೆ' (YNK - ಖ್ಯಾತ ಬರಹಗಾರ ವೈ.ಎನ್. ಕೃಷ್ಣಮೂರ್ತಿಯವರಿಂದ ಪ್ರೇರಿತವಾದ ಪಾತ್ರ) ಎಂಬ ವ್ಯಕ್ತಿಯ ಸುತ್ತ ಕಥೆ ಹೆಣೆಯಲಾಗಿದ್ದು, ಅವರ ಹಾಸ್ಯಮಯ ಮಾತುಕತೆಗಳು ಮತ್ತು ಚುಚ್ಚುಮಾತುಗಳ ಮೂಲಕ ಈ ವಿಷಯಗಳನ್ನು ಚರ್ಚಿಸಲಾಗುತ್ತದೆ.
ಆದ್ದರಿಂದ, ನಾಟಕದಲ್ಲಿ ವಿಶ್ವಾಮಿತ್ರನು ಅಕ್ಷರಶಃ ನೃತ್ಯ ಮಾಡುವುದಕ್ಕಿಂತ, ಈ ಶೀರ್ಷಿಕೆಯು ದಾಂಪತ್ಯದ ವಿಚಿತ್ರ ಸನ್ನಿವೇಶಗಳ ಮೇಲಿನ ಒಂದು ವಿಡಂಬನಾತ್ಮಕ ಪ್ರಶ್ನೆಯಾಗಿದೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ
ಎನ್ ಪಿ ಎಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ವೀರಶೆಟ್ಟಿ ಖೇಣೀ ,ನಿರ್ದೇಶಕರಾದ ವಿಶ್ವನಾಥ್ ಖೂಬಾ, ಗಣೇಶ ತಪಾಡಿಯಾ, ಮೊಹ್ಮದ್ ಮೈನುದ್ದಿನ, ಸಂಗಮೇಶ ಮಹಾ ಗಾಂವ್ಕರ್, ಅಮಿತ್ ಲೋಯಾ, ಮಹಾದೇವ ಖೇಣಿ, ಪ್ರಫುಲ್ ನಮೋಶಿ, ಹಂಚಿನಮನಿ ಸಂಸ್ಥೆಯ ಕಾರ್ಯದರ್ಶಿ ಮಿಲಿಂದ್ ಜಂಟಿ ಕಾರ್ಯದರ್ಶಿ ವರ್ಷಾ ಹಂಚಿನಮನಿ, ಶೈಕ್ಷಣಿಕ ಸಂಚಾಲಕರಾದ ರಾಜು ಕಡೆಮನಿ, ವಿಶ್ವನಾಥ್ ಗರುಡ ಉಪಸ್ಥಿತರಿದ್ದರ. ಮೀತಿಲಾ ಗರುಡ, ರೋಹನ್ ಪಾಂಡುರಂಗಿ ಕಾರ್ಯಕ್ರಮ ನಿರೂಪಿಸಿದರು
