ಆಧುನಿಕ ಸಮಾಜ ಸಂಸ್ಕಾರದಿಂದ ನಿರ್ಮಾಣ ಸಾಧ್ಯ -ಅವರಾದ್ ಶ್ರೀ
ಆಧುನಿಕ ಸಮಾಜ ಸಂಸ್ಕಾರದಿಂದ ನಿರ್ಮಾಣ ಸಾಧ್ಯ -ಅವರಾದ್ ಶ್ರೀ
ಕಮಲಾಪುರ: ಮನುಷ್ಯನ ಆಧುನಿಕ ಜೀವನಕ್ಕೆ ಸಂಸ್ಕಾರ ಬಹಳ ಅವಶ್ಯಕತೆ ಇದೆ, ಇದರಲ್ಲಿ ನಮ್ಮ ಸಮಾಜ ನಿರ್ಮಾಣ ಶಕ್ತಿ ಇದೆ ಎಂದು ಅವರಾದ ಚರಂತಿಮಠದ ಪರಮ ಪೂಜ್ಯ ಶ್ರೀ ಷ. ಬ್ರ. ಮರುಳಸಿದ್ದ ಶಿವಾಚಾರ್ಯ ಹೇಳಿದರು.
ಭೂಸಣಗಿ ಗ್ರಾಮದ ಕಳ್ಳಿಮಠದಲ್ಲಿ ಅನಂತ್ ಹುಣ್ಣಿಮೆ ನಿಮಿತ್ಯ ನಡೆದ ಶಿವನುಭವ ಚಿಂತನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಸಂಸ್ಕಾರ ಇಲ್ಲದ ಸಮಾಜ ಮುನ್ನಡೆದರೇ ಹೊಸ ಭಾರತ ನಿರ್ಮಾಣ ಅಸಾಧ್ಯ, ಹಾಗಾಗಿ ಪ್ರತಿಯೊಬ್ಬ ವ್ಯಕ್ತಿ ಜವಾಬ್ದಾರಿ ಇಂದ ಸಂಸ್ಕಾರ ಕಲಿತಾಗ ಮಾತ್ರ ಧರ್ಮದ ಉದ್ದೇಶ ಈಡೇರಲು ಸಾಧ್ಯ ಎಂದು ಈ ಸಂದರ್ಭದಲ್ಲಿ ಶ್ರೀ ಮಠದ ಲಿಂ. ಷ. ಬ್ರ. ಗುರುಲಿಂಗ ಶಿವಾಚಾರ್ಯರ ಕೊಡುಗೆ ಬಗ್ಗೆ ಸ್ಮರಣೆ ಮಾಡಿದರು.
ಶ್ರೀ ಮಠದ ವಿರೂಪಾಕ್ಷ ದೇವರು ಸಾನಿಧ್ಯ ವಹಿಸಿದರುಶಿವಯೋಗಿ ಕಳ್ಳಿಮಠ, ಪೂಜಾ ಕಳ್ಳಿಮಠ, ಸುನಿಲ್ ಪಾಟೀಲ್, ಉದಯಕುಮಾರ್ ಪಾಟೀಲ್, ಚನ್ನಬಸಪ್ಪ ಮಹಾಜನ್, ಮುಂತಾದವರು ಉಪಸ್ಥಿತರಿದ್ದರುಕಾವೇರಿ ಸ್ವಾಗತಿಸಿದರುಪ್ರಜ್ವಲ್ ವಂದಿಸಿದರುಅಂಬರಾಯ ಮಡ್ಡೆ ನಿರೂಪಿಸಿದರು.