ಶಹಾಪುರಕ್ಕೆ ವೀರಶೈವ ಕಲ್ಯಾಣ ಮಂಟಪ,ವಸತಿ ನಿಲಯ,ಮಂಜೂರು - ಸಚಿವ ದರ್ಶನಾಪೂರಗೆ ಅಭಿನಂದನೆ.

ಶಹಾಪುರಕ್ಕೆ ವೀರಶೈವ ಕಲ್ಯಾಣ ಮಂಟಪ,ವಸತಿ ನಿಲಯ,ಮಂಜೂರು - ಸಚಿವ ದರ್ಶನಾಪೂರಗೆ ಅಭಿನಂದನೆ.

ಶಹಾಪುರಕ್ಕೆ ವೀರಶೈವ ಕಲ್ಯಾಣ ಮಂಟಪ,ವಸತಿ ನಿಲಯ,ಮಂಜೂರು - ಸಚಿವ ದರ್ಶನಾಪೂರಗೆ ಅಭಿನಂದನೆ. 

ಶಹಪುರ : ಬಹು ದಿನಗಳ ಬೇಡಿಕೆಯಾಗಿ ಉಳಿದಿದ್ದ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ವಸತಿ ನಿಲಯ ಹಾಗೂ ಕಲ್ಯಾಣ ಮಂಟಪದ ನಿವೇಶನವನ್ನು ಸರ್ಕಾರದಿಂದ ಮಂಜೂರು ಮಾಡಿಸುವಲ್ಲಿ ಕಾರಣಿಭೂತರಾದ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಅವರಿಗೆ ಸಮಸ್ತ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಅಭಿನಂದನೆಗಳು ಸಲ್ಲಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆಗೊಳಿಸಿ ಮುಂದಿನ ಕಲ್ಯಾಣ ಮಂಟಪ ಹಾಗೂ ವಸತಿ ನಿಲಯದ ಕಟ್ಟಡದ ರೂಪರೇಷಗಳ ಕುರಿತು ಬಗ್ಗೆ ಚರ್ಚಿಸಿ,ಕಲ್ಯಾಣ ಮಂಟಪ ಹಾಗೂ ವಸತಿ ನಿಲಯದ ಕಟ್ಟಡ ನಿರ್ಮಾಣಕ್ಕಾಗಿ ಕೂಡಲೇ ಕಾರ್ಯ ಪ್ರವೃತ್ತರಾಗಬೇಕೆಂದು ಸಚಿವರು ಹಾಗೂ ಶಹಪುರ ತಾಲೂಕಿನ ಮತಕ್ಷೇತ್ರದ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಸೂಚಿಸಿ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ವೀರಶೈ ಸಮಾಜದ ಅಧ್ಯಕ್ಷ ಸಿದ್ದಣ್ಣ ಸಾಹು ಆರಬೋಳ,ಸಮಾಜದ ಹಿರಿಯ ಮುಖಂಡರಾದ ಲಿಂಗಣ್ಣ

ಪಡಶೆಟ್ಟಿ,ಸಿದ್ದಲಿಂಗಣ್ಣ ಆನೆಗುಂದಿ, ಬಸನಗೌಡ ಮಾಲಿ ಪಾಟೀಲ್, ಚಂದ್ರಶೇಖರ್ ಸಾಹು ಆರಬೋಳ, ಮಲ್ಲಣ್ಣ ಮಡ್ಡಿ ಸಾಹು,ಶರಣಪ್ಪ ಮುಂಡಾಸ್,ಸೋಮಶೇಖರಯ್ಯ ಹಿರೇಮಠ,ಸುಧಾಕರ ಗುಡಿ,ಶಿವಣ್ಣ ಇಜೇರಿ,ರಾಜು ಆನೆಗುಂದಿ,ಬಸವರಾಜ ಶಿಣ್ಣೂರ ಸೇರಿದಂತೆ ಇನ್ನಿತರರು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.