ಮಾಹಿತಿ ಹಕ್ಕು ಆಯೋಗದ ರಾಜ್ಯ ಆಯುಕ್ತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು

ಮಾಹಿತಿ ಹಕ್ಕು ಆಯೋಗದ ರಾಜ್ಯ ಆಯುಕ್ತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು

ಮಾಹಿತಿ ಹಕ್ಕು ಆಯೋಗದ ರಾಜ್ಯ ಆಯುಕ್ತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು 

ಕಲಬುರಗಿ: ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿ ಕಲಬುರಗಿ ಹಾಗೂ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಲಬುರಗಿ ಮತ್ತು ಆಂತರಿಕ ಭರವಸೆ ಕೋಶದ ಐಕ್ಯೂಎಸಿ ಸಹಯೋಗದೊಂದಿಗೆ ಕಲಬುರಗಿ, ಬೀದರ, ಯಾದಗಿರ ಮತ್ತು ರಾಯಚೂರು ಜಿಲ್ಲೆಯ ಸರಕಾರಿ ಹಾಗೂ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೂ ಹಾಗೂ ಆರ್‌ಟಿಐ ನೋಡಲ್ ಅಧಿಕಾರಿಗಳಿಗೆ ಒಂದು ದಿನದ ಮಾಹಿತಿ ಹಕ್ಕು ಆಯೋಗದ ರಾಜ್ಯ ಆಯುಕ್ತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿದೆ. 

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಲಬುರಗಿ ಪೀಠ ಮಾಹಿತಿ ಹಕ್ಕು ಆಯೋಗದ ರಾಜ್ಯ ಆಯುಕ್ತರಾದ ರವೀಂದ್ರ ದಾಕಪ್ಪ ಅವರು ಕಾರ್ಯಕ್ರಮವನ್ನು ಸಸಿಗೆ ನೀರೇರಿಯುವ ಮೂಲಕ ಉದ್ಘಾಟಿಸಿ, ಮಾತನಾಡಿ, ಇಂದಿನ ದಿನಮಾನಗಳಲ್ಲಿ ಸರಕಾರದ ಕಛೇರಿಗಳಲ್ಲಿ ಕಾನೂನನ್ನು ಸಮನ್ವಯ ಮಾಡಲು ಆರ್‌ಟಿಐ ಅಗತ್ಯವಿದೆ. ಹಾಗೂ ಸರಕಾರಿ ನೌಕರರು ಆರ್‌ಟಿಐ ಮಾಹಿತಿ ಬಂದರೆ ನೀಡಬೇಕೆಂದರು ಅದರ ಬಗ್ಗೆ ಎದುರುವ ಅಗತ್ಯವಿಲ್ಲ ಎಂದರು. ನಿಮ್ಮ ವೃತ್ತಿಗೆ ಸಂಬAಧಪಟ್ಟAತೆ ಉತ್ತರ ನೀಡಬೇಕು ಎಂದರು. 

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಕಲಬುರಗಿಯ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಶಿವಶರಣಪ್ಪ ಗೊಳ್ಳೆಯವರು ಮಾತನಾಡಿ ಸರಕಾರಿ ಅಧಿಕಾರಿಗಳೂ ಆರ್‌ಟಿಐ ಮಹತ್ವ ಕುರಿತು ತಿಳಿದುಕೊಳ್ಳಬೇಕಾಗಿದೆ. ಈಗಾಗಿ ಕಾಲೇಜಿನ ಪ್ರಾಂಶುಪಾಲರುಗಳು ಆರ್‌ಟಿಐ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು. 

ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಈ ಕಾರ್ಯಕ್ರಮದಲ್ಲಿ ಡಾ. ಮಲ್ಲೇಶಪ್ಪ ಕುಂಬಾರ, ಡಾ. ವಿಜಯಕುಮಾರ ಸಾಲಿಮನಿ, ಡಾ. ದೌಲಪ್ಪ, ಬಿ.ಹೆಚ್. ಡಾ. ರಾಜಶೇಖರ ಮಡಿವಾಳ, ಡಾ. ಸುರೇಶ ಮಾಳೆಗಾಂವ, ಡಾ. ಬಲಭೀಮ ಸಾಂಗ್ಲಿ, ಡಾ. ನಾಗಪ್ಪ ಗೋಗಿ, ಡಾ. ವಿಜಯಕುಮಾರ ಗೋಪಾಳೆ, ಪ್ರೊ. ಶಿವಕುಮಾರ ಕಲಬುರಗಿ, ಡಾ. ಅನುಸೂಯಾ ಗಾಯಕವಾಡ ಅವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀ ರಾಜೇಂದ್ರ ಸಿಂಧೆ, ಶ್ರೀ ಅಜಯಸಿಂಗ್ ತಿವಾರಿ, ಶ್ರೀ ಶಿವಾನಂದ ಸ್ವಾಮಿ ಶ್ರೀಮತಿ ಜಯಶ್ರೀ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಡಾ. ವಿಜಯಕುಮಾರ ಸಾಲಿಮನಿ ಅವರು ಸ್ವಾಗತಿಸಿದರು. ಡಾ. ಸುರೇಶ ಮಾಳೆಗಾಂವ ಅವರು ವಂದಿಸಿದರು. ಡಾ. ಬಲಭೀಮ ಸಾಂಗ್ಲಿ ಅವರು ಕಾರ್ಯಕ್ರಮ ನಿರೂಪಿಸಿದರು. ಮಾಹಿತಿ ಹಕ್ಕು ಆಯೋಗದ ರಾಜ್ಯ ಆಯುಕ್ತರೊಂದಿಗೆ ಸಂವಾದ ಕಾರ್ಯಕ್ರಮ ನೆರೆವೇರಿತು. ಈ ಕಾರ್ಯಕ್ರಮದಲ್ಲಿ ಕಲಬುರಗಿ, ಬೀದರ, ಯಾದಗಿರ, ರಾಯಚೂರು ಜಿಲ್ಲೆಯ ಸರಕಾರಿ ಹಾಗೂ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರುಗಳು ಹಾಗು ಆರ್‌ಟಿಐ ನೋಡಲ್ ಅಧಿಕಾರಿಗಳು ಸಂವಾದದಲ್ಲಿ ಭಾಗವಹಿಸಿದ್ದರು ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.