ಜಾತಿ ಗಣತಿ ವರದಿ ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ರವಿ ಬಿರಾದಾರ್, ಆಂದೋಲ ಶ್ರೀಗಳು ಆಗ್ರಹ

ಜಾತಿ ಗಣತಿ ವರದಿ ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ರವಿ ಬಿರಾದಾರ್, ಆಂದೋಲ ಶ್ರೀಗಳು ಆಗ್ರಹ

ಜಾತಿ ಗಣತಿ ವರದಿ ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ರವಿ ಬಿರಾದಾರ್, ಆಂದೋಲ ಶ್ರೀಗಳು ಆಗ್ರಹ

 ಕಲಬುರಗಿಯಲ್ಲಿ ವೀರಶೈವ ಲಿಂಗಾಯತ ಮುಖಂಡರ ಪತ್ರಿಕಾ ಗೋಷ್ಠಿ

ಕರ್ನಾಟಕ ಕಾಂಗ್ರೆಸ್ ಸರ್ಕಾರವು ಅವೈಜ್ಞಾನಿಕವಾಗಿ ಸಿದ್ಧಪಡಿಸಿರುವ ಜಾತಿ ಗಣತಿ ವರದಿಯನ್ನು ಇಂದು ಸಂಪುಟ ಸಭೆಯಲ್ಲಿ ಮಂಡಿಸಿ ಜಾರಿಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ, ಕಲಬುರಗಿ ಜಿಲ್ಲೆಯ ವೀರಶೈವ ಲಿಂಗಾಯತ ಮುಖಂಡರು ಪತ್ರಿಕಾ ಗೋಷ್ಠಿ ನಡೆಸಿದರು. 

ಕಮಲಾಪುರದ ರವಿ ಬಿರಾದಾರ್ ಹಾಗೂ ಮಂಜು ರೆಡ್ಡಿ, ದಿವ್ಯ ಹಾಗರಗಿ, ಆಂದೋಲಾ ಶ್ರೀಗಳು ಹಾಗೂ ವೀರಶೈವ ಮುಖಂಡರ ನೇತೃತ್ವದಲ್ಲಿ ನಡೆದ ಈ ಪತ್ರಿಕಾ ಗೋಷ್ಠಿಯಲ್ಲಿ, "ಪ್ರಸ್ತುತ ವರದಿ ವೈಜ್ಞಾನಿಕತೆ ಕೊರತೆಯಿಂದ ಕೂಡಿದ್ದು, ಇದು ಸಮಾಜದ ನಡುವೆ ವಿಭಜನೆ ಉಂಟುಮಾಡುವ ಆತಂಕವಿದೆ" ಎಂಬ ಗುಡುಗಾಟ ಕೇಳಿಬಂತು.

ಸರ್ಕಾರವು ಈಗಾಗಲೇ ಸಿದ್ಧಪಡಿಸಿರುವ ವರದಿಯನ್ನು ತಕ್ಷಣವೇ ಹಿಂಪಡೆದು, ಜಾತಿ ಗಣತಿಯ ಸಮೀಕ್ಷೆಯನ್ನು ಮತ್ತೊಮ್ಮೆ ನ್ಯಾಯಸಮ್ಮತವಾಗಿ ಹಾಗೂ ವೈಜ್ಞಾನಿಕವಾಗಿ ನಡೆಸಬೇಕೆಂದು ಅವರು ಆಗ್ರಹಿಸಿದರು.