ಕನ್ನಡ ಉಳಿಸಿಕೊಳ್ಳುವುದು ತುರ್ತು ಅಗತ್ಯ-ನಿಸಾರ ಅಹ್ಮದ್
ಕನ್ನಡ ಉಳಿಸಿಕೊಳ್ಳುವುದು ತುರ್ತು ಅಗತ್ಯ-ನಿಸಾರ ಅಹ್ಮದ್
ಕಲಬುರಗಿ, ನವೆಂಬರ್ 1:ಕನ್ನಡಿಗರ ಹಬ್ಬವಾದ *ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಮಗ್ರ ಅಭಿವೃದ್ಧಿ ಸಂಸ್ಥೆ ಕಛೇರಿಯಲ್ಲಿ ಭಾವಪೂರ್ಣ ಕಾರ್ಯಕ್ರಮ ಜರುಗಿತು. ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮದ ಪ್ರಾರಂಭವಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ವಿಠಲ ಕುಂಬಾರ ಅವರು, “ಭಾರತದ ಸ್ವಾತಂತ್ರ್ಯ ನಂತರ ಭಾಷಾವಾರು ರಾಜ್ಯ ರಚನೆಯ ಮೂಲಕ ಕನ್ನಡವು ಆಡಳಿತ ಭಾಷೆಯಾಗಿ ಬೆಳೆಯಿತು. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಕನ್ನಡ ತನ್ನ ಅಸ್ತಿತ್ವವನ್ನು ವಿಶ್ವದ ಮಟ್ಟದಲ್ಲಿ ತೋರಿಸಿದೆ. ಈ ನೆಲದಲ್ಲಿ ಹುಟ್ಟಿದ ನಾವು ಪುಣ್ಯವಂತರು” ಎಂದು ಹೆಮ್ಮೆಯಿಂದ ಹೇಳಿದರು.
ಕಾರ್ಯಕ್ರಮದ ಪ್ರಮುಖ ಅತಿಥಿಯಾಗಿ ಮಾತನಾಡಿದ ನಿಸಾರ ಅಹ್ಮದ್ (ಚಿಂಚೋಳಿ) ಅವರು, “ಕಲ್ಯಾಣ ನಾಡಿನಲ್ಲಿ ನಡೆದ *ಅಕ್ಷರ ದಾಸೋಹ ಆಂದೋಲನ*ವು ದೀನ-ದಲಿತರು, ಹೆಣ್ಣು ಮಕ್ಕಳು, ಶೂದ್ರರು, ಅಸ್ಪೃಶ್ಯರು ಶಿಕ್ಷಣ ಪಡೆಯುವ ಮಹಾನ್ ದಾರಿ ತೆರೆದಿತು. ಬಸವಾದಿ ಶರಣರು ಕನ್ನಡ ಭಾಷೆ ಮತ್ತು ಸಾಹಿತ್ಯದ ಕೀರ್ತಿಯನ್ನು ಜಗತ್ತಿನ ಮಟ್ಟದಲ್ಲಿ ಹಬ್ಬಿಸಿದವರು. ಇಂದು ಕನ್ನಡ ಉಳಿಸಿಕೊಳ್ಳುವುದು ಮತ್ತು ಅದರ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಚ್.ಎಸ್. ಬರಗಾಲಿ ಕನ್ನಡ ಕವನ ವಾಚನದ ಮೂಲಕ ಮನರಂಜನೆ ಒದಗಿಸಿದರು. ಸಿದ್ರಾಮ ರಾಜಮಾನೆ,ರಾಜಶೇಖರ್ ತಿಗಶೆಟ್ಟಿಷಉಪಸ್ಥಿತರಿದ್ದರು. ನಾಗರಾಜ ಬಿರಾದಾರ ಕಾರ್ಯಕ್ರಮವನ್ನು ನಿರೂಪಿಸಿದರು. ಬಸವಂತರಾಯ ಕೋಳಕೂರ ಸ್ವಾಗತಿಸಿದರು, ರಾಹುಲ್ ವಾಡಿ ವಂದಿಸಿದರು.
