ವಾಡಿ ಬಿಜೆಪಿ ಕಛೇರಿಯಲ್ಲಿ 76ನೇ ಗಣರಾಜ್ಯೋತ್ಸವ

ವಾಡಿ ಬಿಜೆಪಿ ಕಛೇರಿಯಲ್ಲಿ 76ನೇ ಗಣರಾಜ್ಯೋತ್ಸವ

ವಾಡಿ ಬಿಜೆಪಿ ಕಛೇರಿಯಲ್ಲಿ 76ನೇ ಗಣರಾಜ್ಯೋತ್ಸವ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 76ನೇ ಗಣರಾಜ್ಯೋತ್ಸವದ ಅಂಗವಾಗಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು ಭಾರತ ಸಂವಿಧಾನ ರೂಪಿಸಿದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ದೂರದೃಷ್ಟಿಯಿಂದ ದೇಶಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿದ್ದ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವಗಳನ್ನು ಅಳವಡಿಸಿದರು. ಇದು ಭಾರತದ ಪ್ರಜಾಪ್ರಭುತ್ವ ಚೌಕಟ್ಟಿಗೆ ಭದ್ರ ಅಡಿಪಾಯವಾಯಿತು.

ಅವರ ಈ ಕಾರ್ಯದಿಂದ ದೇಶವು ಸಮಗ್ರ ಮತ್ತು ನ್ಯಾಯಯುತ ಸಮಾಜ ದೊಂದಿಗೆ ಮುನ್ನಡೆಯುತ್ತಿದೆ.

ಪ್ರಜಾಪ್ರಭುತ್ವದ ಮಹತ್ವ ಮತ್ತು ಮೌಲ್ಯಗಳನ್ನು ಎತ್ತಿಹಿಡಿದು ಬದುಕುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಾವು ಧರ್ಮ, ಭಾಷೆ ಅಥವಾ ಜನಾಂಗೀಯತೆಯನ್ನು ಲೆಕ್ಕಿಸದೆ ರಾಷ್ಟ್ರ ಸಂವಿಧಾನದ ಸಾರ್ವಭೌಮತ್ವಕ್ಕಾಗಿ ಒಂದಾಗಿ ಬಾಳಬೇಕಾಗಿದೆ ಎಂದು ಹೇಳಿದರು.

ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಎಲ್ಲರಿಗೂ ಅನ್ವಯವಾಗುವ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ.

ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸಿದ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ನಮ್ಮ ದೇಶದಾಗಿದೆ. ಆದ್ದರಿಂದ ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಕೃತಜ್ಞತೆ ಸಲ್ಲಿಸುವುದರ ಜೊತೆಗೆ ಅವರ ಸಾಧನೆಯನ್ನು ಪ್ರತಿಯೊಂದು ಮನೆ ಮನಕ್ಕೆ ಮುಟ್ಟಿಸುವುದು ನಮ್ಮೆಲ್ಲರ ಜವಾಬ್ದಾರಿ ಯಾಗಿದೆ ಎಂದರು.

ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್ ಸಿ ಮೋರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಮುಖಂಡರಾದ ಭೀಮಶಾ ಜೀರೋಳ್ಳಿ,ಅರ್ಜುನ ಕಾಳೆಕರ್,ಗಿರಿಮಲ್ಲಪ್ಪ ಕಟ್ಟಿಮನಿ,ಹರಿ ಗಲಾಂಡೆ, ಕಿಶನ ಜಾಧವ, ಅಂಬದಾಸ ಜಾಧವ,ಗೋಪಾಲರಾವ ಸುತ್ರಾವೆ,ಅಶೋಕ ಪವಾರ,ಹಣಮಂತ ಚವ್ಹಾಣ,

ರವೀಂದ್ರ ವಾಲ್ಮೀಕ ನಾಯಕ,

ಪ್ರಕಾಶ ಪುಜಾರಿ,ಆನಂದ ಇಂಗಳಗಿ,ಅಯ್ಯಣ್ಣ ದಂಡೊತಿ,ರವಿ ಜಾಧವ,ಭಾರತ ರಾಠೊಡ, ಸುರೇಶ ರಾಠೊಡ,

ವಿಶಾಲ ನಿಂಬರ್ಗಾ,ಮಹೇಂದ್ರ ಕುಮಾರ ಪುಜಾರಿ,ಪ್ರೇಮ ರಾಠೊಡ,ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ,ಶರಣಮ್ಮ ಯಾದಗಿರ,ಉಮಾ ಭಾಯಿ ಗೌಳಿ,

ದೇವಕ್ಕಿ ಪುಜಾರಿ,ಚಂದ್ರಶೇಖರ ಬೆಣ್ಣೂರ,

ಅನಿಲ ಕುಮಾರ ನಿರಡಗಿ,ನಿಂಗಯ್ಯ ಗುತ್ತೆದಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.