ಶರಣರ ಹಾಗೂ ಸೂಫಿ ಸಂದೇಶಗಳ ಸಾರ ಒಂದೆ : ಅಜೀಮ್ ಪಾಷಾ ಅಭಿಮತ
ಶರಣರ ಹಾಗೂ ಸೂಫಿ ಸಂದೇಶಗಳ ಸಾರ ಒಂದೆ : ಅಜೀಮ್ ಪಾಷಾ ಅಭಿಮತ
ಕಲಬುರಗಿ: ನಗರದ ಅಮೀದ ಪಿಯಾರೆ ಕಾಲೇಜಿನಲ್ಲಿ, ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಮಾತೋಶ್ರೀ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಡೊಂಗರಗಾಂವ ಸಂಯುಕ್ತ ಆಶ್ರಯದಲ್ಲಿ ನಡೆದ ಸೂಫಿ ಸಾಹಿತ್ಯ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು .
ಶರಣರು ಹಾಗೂ ಸೂಫಿ ಪರಂಪರೆಯ ಮೌಲ್ಯಗಳ ಕುರಿತು ವಿಶೇಷವಾಗಿ ಚರ್ಚಿಸಲಾಯಿತು. ಸೂಫಿಗಳು ಇಸ್ಲಾಂ ಧರ್ಮದ ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸುವವರು. ಸೂಫಿಗಳ ಪ್ರಕಾರ ಅಲ್ಲಾಹನ ಪ್ರೀತಿ ಹಾಗೂ ಮಾನವೀಯತೆ ಮುಖ್ಯ. ಅವರ ಗುರು ಪ್ರವಾದಿ ಮಹಮ್ಮದ್ ಆಗಿದ್ದಾರೆ. ಸೂಫಿ ಪರಂಪರೆಯಲ್ಲಿ ‘ಗುರು’ ಮತ್ತು ‘ಗುರಿ’ ಎರಡೂ ಅತಿ ಮಹತ್ವದ್ದಾಗಿದ್ದು, ಅವುಗಳಿಲ್ಲದೆ ಸೂಫಿ ಪಂಥವೇ ಅಸ್ತಿತ್ವದಲ್ಲಿಲ್ಲ ಎಂದು ಸಮಾರೋಪ ಭಾಷಣದಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಅಜೀಮ್ ಪಾಷಾ ಅಭಿಪ್ರಾಯವಾಗಿತ್ತು.
ಅಪ್ಪಾರಾವ ಅಕ್ಕೊಣಿ ಮಾತನಾಡಿ,ತಂದೆ–ತಾಯಿಗಳ ಸೇವೆ ಮಾಡದವರು ನನ್ನ ಬಳಿಗೆ ಬರಬೇಡಿ ಎಂಬ ಹೇಳಿಕೆ ಖ್ವಾಜಾ ಬಂದೇನವಾಜ್ ಸಂದೇಶವಾಗಿದೆ ಎಂದು ಹೇಳಿದರು.
ಕೇಂದ್ರಿಯ ವಿವಿ ಡಾ ವಿಕ್ರಂ ವಿಸಾಜಿ ಕಾರ್ಯಕ್ರಮ ಉದ್ಘಾಟಿಸಿದರು, ಹಮಿದ ಪಿಯಾರೆ ಸಂಸ್ಥೆಯ ಅಧ್ಯಕ್ಷರಾದ ರಬೀಯಾ ಖಾನಮ್ ಅಧ್ಯಕ್ಷತೆ ವಹಿಸಿದರು, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಜಯದೇವಿ ಗಾಯಕವಾಡ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ಸಿದ್ದಲಿಂಗೇಶ್ವರ ಪ್ರಕಾಶನದ ಪ್ರಕಾಶಕರಾದ ಬಸವರಾಜ್ ಕೊನೇಕ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ವಂದನೆ ಗೋಷ್ಠಿಯಲ್ಲಿ ಸೂಫಿ ಪರಂಪರೆ ಕುರಿತು ಬೋಡೆರಿಯಾಜ್ ಅಹ್ಮದ್ ಉಪನ್ಯಾಸ , ಶರಣರು ಮತ್ತು ಸೂಫಿ ಪರಂಪರೆ ಕುರಿತು ಡಾ ಗವಿಸಿದ್ದಪ್ಪ ಪಾಟೀಲ ಉಪನ್ಯಾಸ ನೀಡಿದರು, ನಾರಾಯಣ ರೋಲೇಕರ್ ಅಧ್ಯಕ್ಷತೆ ವಹಿಸಿದ್ದರು,
ಎರಡನೇ ಗೋಷ್ಠಿಯಲ್ಲಿ ಡಾ ನಾಗಪ್ಪ ಟಿ ಗೋಗಿ ಅಧ್ಯಕ್ಷತೆ ವಹಿಸಿದರು, ಕರ್ನಾಟಕ ಸೂಫಿ ಪರಂಪರೆ ಕುರಿತು ಚಿದಾನಂದ್ ಚಿಕ್ಕಮಠ ಉಪನ್ಯಾಸ ನೀಡಿದರು, ಹಾಗೂ ಸೂಫಿ ಪರಂಪರೆ ಮಹಿಳೆ ಕುರಿತು ಪರ್ವೀನ್ ಸುಲ್ತಾನ್ ಉಪನ್ಯಾಸ ನೀಡಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷೆ ರಬೀಯಾ ಖಾನಮ್ ಉಪಸ್ಥಿತರಿದ್ದರು. ಪ್ರಮಾಣಪತ್ರಗಳನ್ನು ಅಪ್ಪಾರಾವ ಅಕ್ಕೊಣಿ ವಿತರಿಸಿದರು,ಪ್ರಾಚಾರ್ಯ ವನೀತಾ ಜಾದವ್, ಡಾ ಜಯದೇವಿ ಗಾಯಕವಾಡ, ಡಾ. ಶೀಲಾದೇವಿ ಎಸ್. ಬಿರಾದಾರ, ಡಾ. ಸೂಲಾಬಾಯಿ. ಪತ್ರಕರ್ತ ಶರಣಗೌಡ ಪಾಟೀಲ್ ಪಾಳಾ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರು ಹಾಗೂ ಮಾತೃಶ್ರೀ ಸಂಸ್ಥೆಯ ಅಧ್ಯಕ್ಷ ಡಾ ಶರಣಬಸಪ್ಪ ವಡ್ಡನಕೇರಿ ಉಪಸ್ಥಿತರಿದ್ದರು , ನಿರಂಜನ ನಿರೂಪಿಸಿದರು
ಕಾರ್ಯಕ್ರಮವು ಸೌಹಾರ್ದತೆ, ಮಾನವೀಯತೆ ಹಾಗೂ ಧಾರ್ಮಿಕ ಸಹಿಷ್ಣುತೆಯ ಸಂದೇಶ ಸಾರುವ ಮೂಲಕ ಯಶಸ್ವಿಯಾಗಿ ನೆರವೇರಿತು.
