ನಿಷ್ಠಾವಂತ ಶಿಕ್ಷಕ ಶಿವಶರಣಪ್ಪ ಜಮಾದಾರ

ನಿಷ್ಠಾವಂತ  ಶಿಕ್ಷಕ ಶಿವಶರಣಪ್ಪ ಜಮಾದಾರ

ನಿಷ್ಠಾವಂತ ಶಿಕ್ಷಕ ಶಿವಶರಣಪ್ಪ ಜಮಾದಾರ

ನಿವೃತ್ತ ಶಿಕ್ಷಕರಾದ ಶಿವಶರಣಪ್ಪ ಜಮಾದಾರ ಅವರ ಅಭಿನಂದನ ಸಮಾರಂಭ 

         ನಾನು ನೋಡಿದಂತೆ ಶಿವಶರಣಪ್ಪ ಶಿಕ್ಷಕರು ಒಬ್ಬ ಬಹುಮುಖ ವ್ಯಕ್ತಿತ್ವವನ್ನು ಹೊಂದಿದ ತಮ್ಮನ್ನು ತಾವು ಶಿಕ್ಷಕ ವೃತ್ತಿಯ ಜೊತೆಗೆ ಸಾಮಾಜಿಕ ಸೇವೆಗಳಲ್ಲಿ ಕೂಡ ತೊಡಗಿಸಿಕೊಂಡಿರುವ ಒಬ್ಬ ಅಪರೂಪದ ಶಿಕ್ಷಕರು ಅವರಿಂದ ಇನ್ನು ಅನೇಕ ಸಾಮಾಜಿಕ ಸೇವಾ ಕಾರ್ಯಗಳು ನಡೆದು ಸಮಾಜಕ್ಕೆ ಒಳಿತಾಗಲಿ ಎಂದು ಶ್ರೀ ಶಾಹಬಾದ ತಾಲೂಕಿನ ತೊನಸನಹಳ್ಳಿ ಅಲ್ಲಮಪ್ರಭು ಪೀಠದ ಪೂಜ್ಯರಾದ ಶ್ರೀ ಮಲ್ಲಣ್ಣಪ್ಪ ಮಹಾಸ್ವಾಮಿಜಿಗಳು ನುಡಿದರು. 

      ಸೇಡಂ ತಾಲೂಕಿನ ಬಟಗೇರ ಕೆ. ಗ್ರಾಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಇತ್ತೀಚೆಗೆ ನಿವೃತ್ತಿಯಾದ ಶ್ರೀ ಶಿವಶರಣಪ್ಪ ಜಮಾದಾರ ಅವರ ಅಭಿನಂದನ ಸಮಾರಂಭದಲ್ಲಿ ಪೂಜ್ಯರು ತಮ್ಮ ಆಶಯ ನುಡಿಯಲ್ಲಿ ಹೇಳಿದರು. 

      ವೇದಿಕೆ ಮೇಲೆ ಉಪಸ್ಥಿತರಿದ್ದ ಜೇವರ್ಗಿ ತಾಲೂಕಿನ ಚಿಗರಳ್ಳಿ ಮಠದ ಪೂಜ್ಯರಾದ ಶ್ರೀ ಸಿದ್ದ ಬಸವ ಕಬೀರ ಮಹಾಸ್ವಾಮಿಜಿಗಳು ಮಾತನಾಡುತ್ತಾ ಶಿವಶರಣಪ್ಪ ಜಮಾದಾರ ಶಿಕ್ಷಕರು ಅವರೊಬ್ಬ ಆದರ್ಶ ಶಿಕ್ಷಕರು ಶಿಕ್ಷಕ ವೃತ್ತಿಯ ಜೊತೆಗೆ ಅನೇಕ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಮಾನ್ಯ ಜನರಲ್ಲಿ ಬೆರೆಯುವ ಹಳ್ಳಿಯ ಸೊಗಡನ್ನು ಮೈಗೂಡಿಸಿಕೊಂಡಿರುವ ಶಿಕ್ಷಕರಾಗಿದ್ದಾರೆ ಎಂದು ತಮ್ಮ ಆಶಯ ನುಡಿಯಲ್ಲಿ ತಿಳಿಸಿದರು. 

     ಗುರುವಿನ ಸ್ಥಾನ ದೊಡ್ಡದು ಎಲ್ಲ ನೌಕರಿಗಳಲ್ಲಿ ಶಿಕ್ಷಕ ವೃತ್ತಿ ಪವಿತ್ರವಾದದ್ದು ಶಿಕ್ಷಕರಲ್ಲಿರುವ ಒಳ್ಳೆಯ ಆದರ್ಶ ಗುಣಗಳು ಶ್ರೀ ಶಿವಶರಣಪ್ಪ ಶಿಕ್ಷಕರು ಹೊಂದಿದ್ದಾರೆ ಎಂದು ಕಲಬುರ್ಗಿಯ ಸಿದ್ಧಾರೂಡ ಮಠದ ಶ್ರೀ ಮಹೇಶ್ವರ ಜಿ ಗುರೂಜಿ ಅವರು ತಮ್ಮ ಪ್ರವಚನದಲ್ಲಿ ತಿಳಿಸಿದರು. 

        ಶ್ರೀ ಶಿವ ಶರಣಪ್ಪ ಜಮಾದಾರ ಅವರು ತಮ್ಮ ಹತ್ತು ವರ್ಷಗಳ ಉಪನ್ಯಾಸಕ ವೃತ್ತಿ 26 ವರ್ಷಗಳ ಶಿಕ್ಷಕರ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಅಪಾರ ಶಿಷ್ಯ ಬಳಗವನ್ನು ಹೊಂದಿದ್ದಾರೆ ಅವರು ಅನೇಕ ಸೇವಾ ಚಟುವಟಿಕೆಗಳಲ್ಲಿ ಕೂಡ ತೊಡಗಿಕೊಂಡಿದ್ದಾರೆ ಎಂದು ಶಹಾಪುರ ತಾಲೂಕಿನ ಸನ್ನತಿ ಬ್ರಿಜ್ ಹುರುಸ ಗುಂಡಗೆಯ ಬ್ರಹ್ಮರ್ಷಿ ವೇದವ್ಯಾಸ ಪೀಠದ ಪೂಜ್ಯರಾದ ಶ್ರೀ ರಾಜು ಗುರೂಜಿ ಅವರು ತಮ್ಮ ಆಶಯ ನುಡಿಯಲ್ಲಿ ತಿಳಿಸಿದರು.

       ಕಲ್ಬುರ್ಗಿ ತಾಲೂಕಿನ ಶಿರಸಗಿಯ ಪೂಜ್ಯರಾದ ಶ್ರೀ ರುದ್ರಮುನಿ ಶಿವಾಚಾರ್ಯರು ಶಿಕ್ಷಕ ವೃತ್ತಿ ಮತ್ತು ಶಿಕ್ಷಕರ ಬಗ್ಗೆ ತಮ್ಮ ಆಶಯ ನುಡಿಯಲ್ಲಿ ತಿಳಿಸಿದರು. 

       ಈ ಅಭಿನಂದನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಫಜಲಪುರ ತಾಲೂಕಿನ ಚಿನ್ಮಯಗಿರಿ ಮಹಾಂತೇಶ್ವರ ಮಠದ ಪೂಜ್ಯರಾದ ಶ್ರೀ ಸಿದ್ದರಾಮ ಶಿವಾಚಾರ್ಯರು ವಹಿಸಿದ್ದರು. 

   ಕಾರ್ಯಕ್ರಮದ ಪ್ರಾರಂಭದಲ್ಲಿ ವೇದಿಕೆ ಮೇಲಿರುವ ಎಲ್ಲ ಪೂಜ್ಯರು ಜ್ಯೋತಿ ಬೆಳಗಿಸುವುದರೊಂದಿಗೆ ಹಾಗೂ ಶ್ರೀ ಮಾತಾ ಮಾಣಿಕೇಶ್ವರಿ ಮಾತೆಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

    ಪ್ರಾರಂಭದಲ್ಲಿ ಧಾರವಾಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಎಸ್ ಕೆ ಮೇಲ್ಕಾರ ಅವರು ಶಿಕ್ಷಕರಾದ ಶಿವಶರಣಪ್ಪ ಜಮಾದಾರ ಅವರನ್ನು ಪರಿಚಯಿಸುತ್ತ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಿವಶರಣಪ್ಪ ಸರ್ ಅವರು ಕೋಲಿ ಸಾಂಸ್ಕೃತಿಕ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರು ಆಗಿರುವುದರಿಂದ ಇವರ ನೇತೃತ್ವದಲ್ಲಿ ಗೆಳೆಯರ ಬಳಗದವರೆಲ್ಲ ಸೇರಿ ಜಿಲ್ಲೆಯಲ್ಲಿ ಅನೇಕ ಒಳ್ಳೆಯ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ ಇನ್ನು ಮುಂದೆಯೂ ಕೂಡ ಇವರಿಂದ ಒಳ್ಳೆ ಕಾರ್ಯಕ್ರಮಗಳು ಬರಲಿ ಎಂದು ಪ್ರಸ್ತಾವಿಕವಾಗಿ ಮಾತನಾಡಿದರು.

      ಶಿವ ಶರಣಪ್ಪ ಶಿಕ್ಷಕರ ಅಪಾರ ಮಿತ್ರರು, ಹಿತೈಷಿಗಳು, ಗೆಳೆಯರು ಸೇರಿ ಹಮ್ಮಿಕೊಂಡಿರುವ ಈ ಅಭಿನಂದನಾ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು. ಅವರಲ್ಲಿ ನಿವ್ರತ್ತ ಪ್ರಾಂಶುಪಾಲರಾದ ಶ್ರೀ ದೇವೇಂದ್ರಪ್ಪ ಬಾಡಿಯಾಳ, ಕಲ್ಬುರ್ಗಿ ಕಲ್ಬುರ್ಗ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳಾದ ಶ್ರೀ ಶಿವ ಗುಂಡಪ್ಪ ಕಣ್ಣಿ, ಕಲ್ಬುರ್ಗಿ ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಜಯಕುಮಾರ ಜಮಖಂಡಿ, ನಿಕಟಪೂರ್ವ ಕೋಲಿ ಗಂಗಾಮತ ನೌಕರರ ರಾಜ್ಯ ಅಧ್ಯಕ್ಷ ರಾದ ಬಾಬುರಾವ ಜಮಾದಾರ, ಕಲ್ಬುರ್ಗಿ ಜಿಲ್ಲಾ ಕೋಲಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ನೀಲಕಂಠ ಜಮಾದಾರ, ಉದ್ದಿಮೆದಾರರಾದ ಚಂದ್ರಶೇಖರ ಕೋಟಾರಗಸ್ತಿ, ವೈದ್ಯರಾದ ಡಾ. ಟಿ .ಡಿ. ರಾಜ್, ಹಿರಿಯ ಅಧಿಕಾರಿಗಳಾಗಿ ನಿವೃತ್ತರಾದ ಪಂಡರಿ ದೊಡ್ಲಾ, , ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳಾದ ಶರಣು ಸಾಳೆರ,ಪ್ರೌಢಶಾಲಾ ಶಿಕ್ಷಕರಾದ ಅಮಲಪ್ಪ ಯರಗೋಳ"ಗುರು ಉಪದೇಶ " ಮಾಸಪತ್ರಿಕೆಯ ಸಂಪಾದಕರಾದ ಸಿದ್ದಣಗೌಡ ಕಣ್ಣಿ, ಗೌರವ ಸಂಪಾದಕರಾದ ಗುಂಡೂರಾವ ಕಣ್ಣಿ, ಪತ್ರಿಕೆ ಸಂಪಾದಕರಾದ ಚಂದ್ರಕಾಂತ ಹಾವನೂರ ಕಲ್ಬುರ್ಗಿ ವಿಶ್ವವಿದ್ಯಾಲಯದ ನಿವೃತ್ತ ಹಿರಿಯ ಅಧಿಕಾರಿಗಳಾದ ಈರಣ್ಣ ಜಮಾದಾರ, ನಿವ್ರತ್ತ ಮುಖ್ಯ ಗುರುಗಳಾದ ಜಟ್ಟೆಪ್ಪ ಜಮಾದಾರ ,ಶಂಕರ ಜಡಾಲ, ಜೆಸ್ಕಾಂನ ಹಿರಿಯ ಅಧಿಕಾರಿಗಳಾದ ಸಂಜು ಕುಮಾರ ಬೋಸ್ಗೆಕರ, ಪ್ರೌಢಶಾಲಾ ಶಿಕ್ಷಕರಾದ ಭೀಮಾಶಂಕರ ಕಣ್ಣಿ, ಹಿರಿಯ ಅಧಿಕಾರಿಗಳಾಗಿ ನಿವೃತ್ತರಾದ ನಾಗಪ್ಪ ಜಮಾದಾರ, ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಜಿಲ್ಲಾಧ್ಯಕ್ಷರಾದ ಮರೆಪ್ಪ ಮಿಣಜಗಿ, RSP ಪಕ್ಷದ ಜಿಲ್ಲಾಧ್ಯಕ್ಷರಾದ ದೇವೇಂದ್ರ ಚಿಗರಳ್ಳಿ, ಶಿಕ್ಷಕರಾದ ಬಸವರಾಜ ಹೇರೂರ, ವಕೀಲರಾದ ನಾಗರಾಜ ಕಟ್ಟಿಮನಿ, ಮಾರ್ಥಂಡಪ್ಪ ಅಲ್ಲೂರ,ಮಲ್ಲಿಕಾರ್ಜುನ ಕಲಬೇನೂರ, ಜೆಸ್ಕಾಂನ ನಿವೃತ್ತ ಅಧಿಕಾರಿಗಳಾದ ಚಂದ್ರಾಮ ಬೋಕಿ ,ಸಹಕಾರ ಇಲಾಖೆ ತರಬೇತಿ ಕೇಂದ್ರದ ಹಿರಿಯ ಅಧಿಕಾರಿಗಳಾದ,ಸತೀಶ ಹಕ್ಕಿ, ಬಸವರಾಜ ಪಾಟೀಲ ನಿಪ್ಪಾಣಿ, ಕಮಲಾಪುರ ತಾಲೂಕಿನ ಪ್ರೌಢಶಾಲಾ ಶಿಕ್ಷಕರ ಸಂಘದ ಸದಸ್ಯರಾದ ಮಲ್ಲಿಕಾರ್ಜುನ ಜಮಾದಾರ ಸಲಗರ, ಜೇವರ್ಗಿ ಮುರಾರ್ಜಿ ಪ್ರೌಢಶಾಲೆ ಶಿಕ್ಷಕರಾದ ಮಲ್ಲಿಕಾರ್ಜುನ ಶಿರೋಳಿ, ಸೇಡಂ ತಾಲೂಕಿನ ಆಡಕಿ ಸಿ .ಆರ್. ಪಿ. ಭೀಮಣ್ಣ ರಾಜೋಳ, ನಿವೃತ್ತ ಮುಖ್ಯ ಗುರುಗಳಾದ ಶಿವಪುತ್ರಪ್ಪ ಕೋಣಿನ, ಕೆನರಾ ಬ್ಯಾಂಕ್ ಹಿರಿಯ ಅಧಿಕಾರಿಗಳಾದ ಆನಂದ ಹಾಗೂ ಗೀತಾ ಕಲ್ಗುರ್ತಿ,ನಿವ್ರತ್ತ ಪದವಿ ಪೂರ್ವ ಕಾಲೇಜು ಹಿರಿಯ ಅಧಿಕಾರಿಗಳಾಗಿರುವ ಡಾ. ರಾಘವೇಂದ್ರ ಗುಡಗುಂಟಿ, ಪ.ಪೂ.ಕಾಲೇಜು ಉಪನ್ಯಾಸಕರಾದ ಧರ್ಮರಾಜ ಜವಳಿ, ನಿವೃತ್ತ ಹಿರಿಯ ಅಧಿಕಾರಿಗಳಾದ ಪಾಪಣ್ಣ ಇಟಗಿಕರ, ಉದ್ದಿಮೆದಾರರಾದ ಪರಮೇಶ್ವರ ತಳವಾರ, ನಿವೃತ್ತ ಶಿಕ್ಷಕರಾದ ಅಂಬಣ್ಣ ಜಮಾದಾರ, ಪ್ರಗತಿಪರ ರೈತರಾದ ಶ್ರೀಹರಿ ಗುಗ್ಗರಿ, ಪ್ರಿಯದರ್ಶಿನಿ ಪ್ರೌಢಶಾಲೆ ಮುಖ್ಯ ಗುರುಗಳಾದ ಚಂದ್ರಶೇಖರ ಪೋಲಕಪಳ್ಳಿ, ಪಶು ಸಂಗೋಪನ ಇಲಾಖೆಯ ಚಂದ್ರಶೇಖರ ಇಟಕಲ ಹಾಗೂ ಸಿದ್ದಪ್ಪ ಮಹಾಗಾಂವ, ಪ್ರೌಢಶಾಲಾ ಶಿಕ್ಷಕರಾದ ಚಂದ್ರ ಕಾಂತ ತಳವಾರ, ಕಲಬುರಗಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಹಿರಿಯ ಅಧಿಕಾರಿಗಳಾದ ಅವಣ್ಣ ತಳವಾರ , ನಿವೃತ್ತ ಶಿಕ್ಷಕರಾದ ಈರಣ್ಣ ತಳವಾರ, ಬಂದರವಾಡ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾದ ಕಲ್ಯಾಣಿ ಜಮಾದಾರ, ಅಲ್ಲದೆ ಹಾವನೂರ ಗ್ರಾಮದ ಹಿರಿಯ ನಾಯಕರಾದ ಗೋವಿಂದ ಭಟ್ ಕಾಶಿರಾಯ ಪಾಟೀಲ್ ಪ್ರಭು ಪಾಟೀಲ್ ಮಹಾಂತಗೌಡ ಪಾಟೀಲ್ ಎಂ ಆರ್ ಟ್ರಾವೆಲ್ಸ್ ಮಲ್ಲು ಅಲ್ಲದೆ ಅನೇಕ ಗಣ್ಯರು ಭಾಗವಹಿಸಿದ್ದರು.

       ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಜೇವರ್ಗಿ ತಾಲೂಕಿನ ಗವನಳ್ಳಿ, ಪ್ರೌಢಶಾಲಾ ಶಿಕ್ಷಕರಾದ ಶ್ರೀ ಅಮೃತ ಪಾಟೀಲ ನಿರೂಪಿಸಿದರು.--ಬರಹ-ಜಗನ್ನಾಥ ಜಮಾದಾರ ಹಾವನೂರ