ಪೌರಾಣಿಕ ನಾಟಕಗಳ ರಾಜ್ಯಮಟ್ಟದ ಏಕವ್ಯಕ್ತಿ ಪಾತ್ರಸ್ಪರ್ಧೆ: ದಾವಣಗೆರೆಯಲ್ಲಿ ಮಾರ್ಚ್ 27ರಂದು

ಪೌರಾಣಿಕ ನಾಟಕಗಳ ರಾಜ್ಯಮಟ್ಟದ ಏಕವ್ಯಕ್ತಿ ಪಾತ್ರಸ್ಪರ್ಧೆ: ದಾವಣಗೆರೆಯಲ್ಲಿ ಮಾರ್ಚ್ 27ರಂದು

ಪೌರಾಣಿಕ ನಾಟಕಗಳ ರಾಜ್ಯಮಟ್ಟದ ಏಕವ್ಯಕ್ತಿ ಪಾತ್ರಸ್ಪರ್ಧೆ: ದಾವಣಗೆರೆಯಲ್ಲಿ ಮಾರ್ಚ್ 27ರಂದು (ಕಲ್ಯಾಣ ಕಹಳೆ ವಾರ್ತೆ)

ದಾವಣಗೆರೆ: ಕನ್ನಡದ ಪೌರಾಣಿಕ ನಾಟಕಗಳಿಗೆ ಶ್ರೀಮಂತ ಮತ್ತು ಕ್ಲಾಸಿಕ್ ಪರಂಪರೆ ಇದೆ. ಇಂದಿಗೂ ಕರ್ನಾಟಕದ ಅನೇಕ ಪ್ರಾಂತ್ಯಗಳಲ್ಲಿ ಪೌರಾಣಿಕ ನಾಟಕಗಳ ಪ್ರದರ್ಶನಗಳಿಗೆ ಅಪಾರ ಬೇಡಿಕೆ ಇದೆ. ಇಂತಹ ನಾಟಕಗಳಲ್ಲಿ ಪಾತ್ರಧಾರಿಗಳಾಗಿ ಅಭಿನಯಿಸುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವೃತ್ತಿ ರಂಗಭೂಮಿ ರಂಗಾಯಣ ರಾಜ್ಯಮಟ್ಟದ ಪೌರಾಣಿಕ ನಾಟಕಗಳ ಏಕವ್ಯಕ್ತಿ ಪಾತ್ರಸ್ಪರ್ಧೆಯನ್ನು ಆಯೋಜಿಸಿದೆ.

ಈ ಸ್ಪರ್ಧೆಯನ್ನು “ವಿಶ್ವ ರಂಗಭೂಮಿ ದಿನಾಚರಣೆ” ಹಾಗೂ “ರಾಷ್ಟ್ರೀಯ ವೃತ್ತಿ ರಂಗೋತ್ಸವ-26” ಅಂಗವಾಗಿ ದಿನಾಂಕ 27-03-2026ರಂದು ದಾವಣಗೆರೆ ನಗರದಲ್ಲಿ ನಡೆಸಲಾಗುತ್ತದೆ.

ರಾಜ್ಯದ ವಿವಿಧ ಭಾಗಗಳಿಂದ ಪೌರಾಣಿಕ ನಾಟಕಗಳ ಪ್ರಸಿದ್ಧ ಪಾತ್ರಗಳನ್ನು ಏಕವ್ಯಕ್ತಿಯಾಗಿ ಪ್ರದರ್ಶಿಸಲು ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸ್ಪರ್ಧೆಯ ಮೂಲಕ ಪೌರಾಣಿಕ ರಂಗಭೂಮಿ ಪರಂಪರೆಯನ್ನು ಉಳಿಸಿ ಬೆಳೆಸುವ ಜೊತೆಗೆ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದು ಮುಖ್ಯ ಉದ್ದೇಶವಾಗಿದೆ.

ಬಹುಮಾನಗಳ ವಿವರ:

ಪ್ರಥಮ ಬಹುಮಾನ – ₹25,000/-

ದ್ವಿತೀಯ ಬಹುಮಾನ – ₹15,000/-

ತೃತೀಯ ಬಹುಮಾನ – ₹10,000/-

ಸಮಾಧಾನಕರ ಬಹುಮಾನ – ₹5,000/-

ಈ ಕುರಿತು ರಂಗಾಯಣದ ನಿರ್ದೇಶಕರು ಹಾಗೂ ವಿಶೇಷ ಅಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.

ಸ್ಪರ್ಧೆಯ ನಿಯಮಗಳು:

1. ಏಕವ್ಯಕ್ತಿ ಪಾತ್ರ, ಪ್ರಸಂಗ ಕಡ್ಡಾಯವಾಗಿ ಪೌರಾಣಿಕ ನಾಟಕ ಪ್ರದರ್ಶನದ್ದೇ ಆಗಿದ್ದು, ನಾಟಕಕಾರ ಮತ್ತು ನಾಟಕದ ಹೆಸರು ಕಡ್ಡಾಯವಾಗಿ ಅರ್ಜಿಯಲ್ಲಿ ನಮೂದಿಸಬೇಕು.

2. ಲಿಂಗ ಭೇದವಿಲ್ಲದೇ ವಯಸ್ಕರೆಲ್ಲರೂ ಭಾಗವಹಿಸಬಹುದು.

3. ಪಾತ್ರದ ವೇಷಭೂಷಣ ಮತ್ತು ಅಲಂಕಾರ, ಸಂಗೀತ ವ್ಯವಸ್ಥೆ ಸ್ಪರ್ಧಿಗಳಿಗೆ ಸೇರಿರುತ್ತದೆ.

4. ಸ್ಪರ್ಧೆಯ ಅವಧಿ ಗರಿಷ್ಠ ಹತ್ತು ನಿಮಿಷ.

5. ತೀರ್ಪುಗಾರರು ಮತ್ತು ರಂಗಾಯಣದ ತೀರ್ಪು ಅಂತಿಮವಾದುದು.

6. ದಾವಣಗೆರೆ ನಗರದಲ್ಲಿ ಸ್ಪರ್ಧೆ ಜರುಗುವ ದಿ:27.03.2026 ರಂದು ಬೆಳಗ್ಗೆ 10:30 ಗಂಟೆಗೆ,

ಸ್ಥಳ:- ದೃಶ್ಯಕಲಾ ಮಹಾವಿದ್ಯಾಲಯ, ವಿದ್ಯಾನಗರ ರಸ್ತೆ, ದಾವಣಗೆರೆ.

7. ನಿರ್ದೇಶಕರು, ವೃತ್ತಿ ರಂಗಭೂಮಿ ರಂಗಾಯಣಕ್ಕೆ ಆಧಾರ ಕಾರ್ಡ್ ಸಮೇತ ಸ್ಪರ್ಧೆಯ ವಿವರಗಳೊಂದಿಗೆ ಲಿಖಿತ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20.03.2026

ಕಛೇರಿ ವಿಳಾಸ 

ನಿರ್ದೇಶಕರು, ವೃತ್ತಿ ರಂಗಭೂಮಿ ರಂಗಾಯಣ.ಕೊ.ಸಂ:38ಎ, ಮೊದಲನೇ ಮಹಡಿ, ಜಿಲ್ಲಾಡಳಿತ ಭವನ, ಪಿ.ಬಿ. ರಸ್ತೆ, ದಾವಣಗೆರೆ:577006,  ಮೊ. 93410-10712.

ವಿಶೇಷ ಸೂಚನೆ:- ಆದೇಶದ ಪ್ರತಿಯನ್ನು ಪಿಡಿಎಫ್ ಫೈಲ್ ಇದೆ ಡೌನ್ಲೋಡ್ ಮಾಡಿಕೊಳ್ಳಿ.

Files