ಕನ್ನಡ ಶಾಲೆಗಳ ಉಳಿವಿಗಾಗಿ ಶ್ರಮಿಸಿ - ಶಾಂತಗೌಡ ಪಾಟೀಲ್

ಕನ್ನಡ ಶಾಲೆಗಳ ಉಳಿವಿಗಾಗಿ ಶ್ರಮಿಸಿ - ಶಾಂತಗೌಡ ಪಾಟೀಲ್
ಶಹಪುರ : ಪ್ರಸ್ತುತ ದಿನಮಾನಗಳಲ್ಲಿ ಆಂಗ್ಲ ವ್ಯಾಮೋಹಕ್ಕೆ ಬಲಿಯಾಗಿ ಮಾತೃಭಾಷೆಯಾದ ಕನ್ನಡ ಪ್ರತಿಯೊಬ್ಬರು ಮರೆಯುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಕನ್ನಡ ಶಾಲೆಗಳ ಉಳಿವಿಗಾಗಿ ಶ್ರಮಿಸೋಣ ಎಂದು ಯಾದಗಿರಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಶಾಂತಗೌಡ ಪಾಟೀಲ ಹೇಳಿದರು.
ಪಟ್ಟಣದ ಚಾಮುಂಡೇಶ್ವರಿ ನಗರದಲ್ಲಿ ಕನಕದಾಸ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಾತೃ ಛಾಯಾ ಹಿರಿಯ ಪ್ರಾಥಮಿಕ ಶಾಲೆಯ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಅಂಕ ಗಳಿಕೆ ಶ್ರೇಷ್ಠತೆಯೆಂದು ತಿಳಿದುಕೊಳ್ಳದೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳು ತುಂಬಬೇಕು ಎಂದು ನುಡಿದರು.
ಮುಖ್ಯ ಅತಿಥಿಗಳಾದ ಮೈಸೂರಿನ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಶಿವರಾಜ್ ಮಾತನಾಡಿ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಕರು ಕಲಿಕೆಯ ಜೊತೆಗೆ ಸುಸಂಸ್ಕೃತವನ್ನು ಕಲಿಸಿಕೊಡಬೇಕು ಅಲ್ಲದೆ ಮಕ್ಕಳಿಗೆ ಸ್ಲೋಗ ಮತ್ತು ವಚನಗಳನ್ನು ಪಡಿಸುವುದರ ಮೂಲಕ ಅಕ್ಷರ ದಿಕ್ಷ ಕಾರ್ಯಕ್ರಮದ ಕಾರ್ಯವೈಕರಿ ರಾಜ್ಯದಾದ್ಯಂತ ವ್ಯಾಪಿಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿ ಬದುಕಿನಲ್ಲಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಪೂಜ್ಯಶ್ರೀ ಹಜರತ್ ಸೈಯದ್ ಮೊಹಮ್ಮದ್ ಮುಜೀಬುದ್ದಿನ್ ಸರ್ ಮಸ್ತ್ ನಶೀನ್ ಪ್ರಜಾರದ ಸೂಫಿ ಸರ್ಮಸ್ತಾ ದರ್ಗಾದ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು, ಸಮಾರಂಭದ ವೇದಿಕೆ ಮೇಲೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ರವೀಂದ್ರನಾಥ್ ಹೊಸಮನಿ, ಯುವ ಮುಖಂಡರಾದ ಈಶ್ವರ ಕಂದಕೂರ,ಸೇರಿದಂತೆ ಇತರರು ಉಪಸ್ಥಿತರಿದ್ದರು,
ಈ ಸಂದರ್ಭದಲ್ಲಿ ನಾಡಿನ ಸಾಧಕರಾದ,ಶಿವಣ್ಣ ಇಜೇರಿ(ಸಾಹಿತ್ಯ) ಕಾಂತು ಪಾಟೀಲ್,(ಹೋರಾಟ) ಅಮರಪ್ರಿಯ ಹೋತಪೇಟೆ (ಸಂಗೀತ) ಕಾಮಣ್ಣ ಜೆ.ಕೆ,(ಶಿಕ್ಷಣ) ದೇವಕ್ಕೆಮ್ಮ ಪೋ.ಬಿರಾದರ್(ಜಾನಪದ) ಇವರ ಸಲ್ಲಿಸಿದ ಅನುಪಮಾ ಸೇವೆಯನ್ನು ಪರಿಗಣಿಸಿ ಕನಕದಾಸ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು, ನಂತರ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಅದರಲ್ಲಿ ವಿಶೇಷವಾಗಿ ರಂಗಭೂಮಿ ಕಲಾವಿದ ಶ್ರೀನಿವಾಸ್ ಕಶೆಟ್ಟಿ ನಿರ್ದೇಶನದ ಯಮಲೋಕ ಕಿರು ನಾಟಕವನ್ನು ನೆರೆದಿದ್ದ ಜನರ ಗಮನ ಸೆಳೆಯಿತು,ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ತಿಪ್ಪಣ್ಣ ಖ್ಯಾತನಾಳ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಹಾಡಿದರು ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು,ಭಾಗ್ಯ ಘನಾತೆ ವಂದಿಸಿದರು.