ನಮ್ಮ ಹಣ.ನಮ್ಮ ಹಕ್ಕು.ನಮ್ಮ ಹೋಣೆಗಾರಿಕೆ.

ನಮ್ಮ ಹಣ.ನಮ್ಮ ಹಕ್ಕು.ನಮ್ಮ ಹೋಣೆಗಾರಿಕೆ.

ನಮ್ಮ ಹಣ.ನಮ್ಮ ಹಕ್ಕು.ನಮ್ಮ ಹೋಣೆಗಾರಿಕೆ.

ಕಮಲನಗರ :ಇಂದು ದಿನಾಂಕ 29-10-2024 ರಂದು ಬಳತ(ಬಿ) ಗ್ರಾಮ ಪಂಚಾಯತನಲ್ಲಿ ಜಿಲ್ಲಾ ಪಂಚಾಯತ್ ಬೀದರ್ ತಾಲೂಕಾ ಪಂಚಾಯತ್ ಕಮಲನಗರ ಗ್ರಾಮ ಪಂಚಾಯತ್ ಬಳತ(ಬಿ)2024-25 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ 2005 ಮತ್ತು15ನೇ ಹಣಕಾಸು ಅನುದಾನ ಆಯೋಗದ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆಯನ್ನು ನಡೆಸಲಾಯಿತು.

 ಈ ಸಭೆಯಲ್ಲಿ, ಈ ಸದರಿ ಸಭೆಗೆ ಊರಿನ ಹಿರಿಯ ನಾಗರಿಕರಾದ ಶ್ರೀ ಅಶೋಕ ಅಮೃತರಾವ್ ಇವರ ಅಧ್ಯಕ್ಷ ತೆಯಲ್ಲಿ ಗ್ರಾಮ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ದತ್ತಾತ್ರಿ ಪೂಜಾರಿ ಸಹ ಹಾಜರಿದ್ದರು.ಮತ್ತು ಗ್ರಾಮ ಪಂ ಅಧ್ಯಕ್ಷರು. ಸಂಜುಕುಮಾರ ಗೌಡಪ್ಪಾ ಉಪಾಧ್ಯಕ್ಷ ರು. ಶ್ರೀಮತಿ ಜಿಜಾಬಾಯಿ ಸಂಜುಕುಮಾರ ಗ್ರಾಮ ಪಂ ಸದಸ್ಯರು.ಕಾರ್ಯದರ್ಶಿ ಶ್ರೀ ಸೈಯದ ಅಹೇಮದ. ಸಹ ಹಾಜರಿದ್ದರು.ಡಿ.ಒ.ರಾದ ಶ್ರೀ ಸಂಜುಕುಮಾರ ಸಾವಳೆ ಬಳತ(ಬಿ)ಗ್ರಾಮದ ಗ್ರಾಮಸ್ಥರು ಮತ್ತು ಗ್ರಾಮ ಸಂಪನ್ಮೂಲ ವ್ಯಕ್ತಿ ಗಳಾದ ಯೋಗೇಶ ಪಾಟೀಲ್.ಶ್ರೀದೇವಿ ಬೀರಾದಾರ.ಸುನೀಲ ವಿಠಲ್.ರಂಜನಾ ಬೀರಾದಾರ ಪಲ್ಲವಿ.ದೇವಿಕಾ.ಜಗನ್ನಾಥ ಶೇಷರಾವ್ ಈ ಸಭೆಗೆ ಇತರರು ಉಪಸ್ಥಿತಿಯಲ್ಲಿದ್ದರು. ಯೋಜನೆಯ ಹಿನ್ನೆಲೆ. ಉದ್ದೇಶ. ಪ್ರಕಾರ ಗಳು ಈ ಯೋಜನೆಯ ಸವಿಸ್ತಾರವಾಗಿ ತಾಲೂಕು ಕಾರ್ಯಕ್ರಮದ ವ್ಯವಸ್ಥಾಪಕರಾದ ಶ್ರೀ ಆನಂದ ಎಸ್ ಎಚ್ ಸಭೆಯಲ್ಲಿ ಮಾತನಾಡಿದರು. ಮೇಳು ಕೀಳು ಎಂಬ ಭಾವನೆಗಳನ್ನು ಇರಬಾರದು. ಎಲ್ಲರು ಸಮಾನರು ಸಹ ಬಾಳ್ವೆಯಾಗಿ ಬಾಳಬೇಕು ಎಂದು ಹೇಳುತ್ತಾ ತಮ್ಮ ಮಾತುಗಳಿಗೆ‌ ವಿರಾಮ‌ ಹಾಕಿದರು.

ಈ ಗ್ರಾಮ ಸಭೆಯನ್ನು ಯಶಸ್ವಿ ಯಾಗಿ ನಡೆಸಲಾಯಿತು.