ಲೋಕೋಪಯೋಗಿ ಭವನದಲ್ಲಿ ೭೮ನೇ ಸ್ವಾತಂತ್ರ‍್ಯ ದಿನಾಚರಣೆ
ಕಲಬುರಗಿ: ಲೋಕೋಪಯೋಗಿ ಭವನದ ಆವರಣದಲ್ಲಿ ೭೮ನೇ ಸ್ವಾತಂತ್ರ‍್ಯ ದಿನಾಚರಣೆಯನ್ನುಆಚರಿಸಲಾಯಿತು. ಮುಖ್ಯ ಇಂಜಿನಿಯರ್ ಶರಣಪ್ಪ ಸುಲುಗಂಟಿ ಅವರು ಧ್ವಜಾರೋಹಣವನ್ನು ಮಾಡಿದರು.
ಕಲ್ಯಾಣ ಕರ್ನಾಟಕ ಲೋಕಪಯೋಗಿ ನೌಕರ ಸಂಘ ಹಾಗೂ ಕರ್ನಾಟಕ ಇಂಜಿನಿಯರಿAಗ್ ಸೇವಾ ಸಂಘ ಜಂಟಿಯಾಗಿ ವಿವಿಧ ಕ್ರೀಡಾ ಕೋಟದಲ್ಲಿ ಜಯ ಗಳಿಸಿದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಪ್ರಶಸ್ತಿ ಪ್ರತ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಅಧಿಕ್ಷಕ ಅಭಿಯಂತರಾದ ಸುರೇಶ್ ಶರ್ಮಾ, ಸೂರ್ಯಕಾಂತ್ ಕಾರ್ಬಾರಿ, ಕಾರ್ಯನಿರ್ವಾಕ ಅಭಿಯಂತರಾದ ಸುಭಾಷ್, ಇಬ್ರಾಹಿಂ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಶಿವಶರಣಪ್ಪ ಪಟ್ಟಣಶೆಟ್ಟಿ, ಕರ್ನಾಟಕ ಇಂಜಿನಿಯರಿAಗ್ ಸೇವಾ ಸಂಘದ ಅಧ್ಯಕ್ಷ ಕಾಳಪ್ಪ, ಕಲ್ಯಾಣ ಕರ್ನಾಟಕ ಲೋಕೋಪಯೋಗಿ ನೌಕರ ಸಂಘದ ಅಧ್ಯಕ್ಷ ಶರಣರಾಜ್ ಚಪ್ಪರಬಂದಿ, ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಾದೇವಿ ಸೇರಿದಂತೆ ಪದಾಧಿಕಾರಿಗಳು ಮತ್ತು ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.