ಸಾಹಿತಿ ಎಸ್. ಎಲ್ ಭೈರಪ್ಪನವರ ಅಗಲಿಕೆಗೆ ಶ್ರದಾಂಜಲಿ ಅರ್ಪಿಸಿರುವ ಕಸಪ

ಸಾಹಿತಿ ಎಸ್. ಎಲ್ ಭೈರಪ್ಪನವರ ಅಗಲಿಕೆಗೆ ಶ್ರದಾಂಜಲಿ ಅರ್ಪಿಸಿರುವ  ಕಸಪ

ಸಾಹಿತಿ ಎಸ್. ಎಲ್ ಭೈರಪ್ಪನವರ ಅಗಲಿಕೆಗೆ ಶ್ರದಾಂಜಲಿ ಅರ್ಪಿಸಿರುವ ಕಸಪ

ಚಿಂಚೋಳಿ: ಕನ್ನಡದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನವರ ಅಗಲಿಕೆಯ ಹಿನ್ನಲೆಯಲ್ಲಿ ಚಿಂಚೋಳಿ ಕನ್ನಡ ಭವನದಲ್ಲಿ ಚಿಂಚೋಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಾಹಿತಿ ಎಸ್. ಎಲ್ ಭೈರಪ್ಪ ನವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ತಾಲೂಕಿನ ಹಿರಿಯ ಸಾಹಿತಿ, ನಾಟಕ ಬರಹಗಾರ ಎಸ್ ಎನ್ ದಂಡಿನಕುಮಾರ ಮಾತನಾಡಿ, ಭೈರಪ್ಪನವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಂನ್ನುಟು ಮಾಡಿದೆ. ಅವರ ನೇರ ನುಡಿ ಯ ಬರಹಗಳಿಂದ ರಚಿತವಾದ ಹಲವು ಕಾದಂಬರಿಗಳು ಚಲನಚಿತ್ರಗಳಾಗಿ ಪ್ರಕಟಗೊಂಡಿವೆ. ಅವರ ಕಥೆ, ಕಾದಂಬರಿ, ಕೃತಿ ಬರಹಗಳಿಗೆ ಹಲವಾರು ಪ್ರಶಸ್ತಿಗಳು ತಂದು ಕೊಟ್ಟಿವೆ. ಹಾರಕೂಡ ಶ್ರೀ ಮಠದಿಂದ ಶ್ರೀಚನ್ನ ಪ್ರಶಸ್ತಿ ಕೂಡ ಅವರಿಗೆ ಲಭಿಸಿದೆ ಎಂದರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ದೇಶಪಾಂಡೆ ಮಾತನಾಡಿ, ಎಸ್. ಎಲ್ ಭೈರಪ್ಪನವರ ಅಗಲಿಕೆಯಿಂದ ಸಾಹಿತ್ಯ ಲೋಕ ಬಡವ ಆಗಿದೆ. ಭೈರಪ್ಪ ಅವರು ಬರೆದಂತಹ ಕೃತಿ, ಕಾದಂಬರಿಗಳು ಓದುಗರ ಗಮನ ಸೆಳೆದಿವೆ. ಪದ್ಮ ಭೂಷಣ, ಪದ್ಮಶ್ರೀ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ಲಭಿಸಿವೆ. ೨೫ ಕೃತಿಗಳು ಮರು ಮುದ್ರಣಗೊಂಡು ದಾಖಲೆ ಮಾಡಿವೆ. ಭೈರಪ್ಪ ನವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ತುಂಬಲಾರದ ನಷ್ಟವಾಗಿದೆ ಎಂದರು. ಈ ಸಂದರ್ಭದಲ್ಲಿ ಪರಿಷತ್ತಿನ ಪದಾಧಿಕಾರಿಹಾಗೂ ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಆಡಕಿ, ರಾಜು ಮುಸ್ತರಿ,ಹಣಮಂತ ಪುಜಾರಿ, ಗಣಪತಿ ದೇವಕತೆ, ಅಕ್ಬರ್ ಇದ್ದರು.