ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಯಲ್ಲಿ ಶಿಕ್ಷಕರ ದಿನಾಚರಣೆ

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಯಲ್ಲಿ ಶಿಕ್ಷಕರ ದಿನಾಚರಣೆ

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಯಲ್ಲಿ ಶಿಕ್ಷಕರ ದಿನಾಚರಣೆ

ಕಲಬುರಗಿ: ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳು ಆಚರಿಸಿದರು.  

ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡ ಪ್ರಾಂಶುಪಾಲರಾದ ಡಾ. ಮೊರಗೆ ಪ್ರಕಾಶ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಗುರು ಮತ್ತು ಶಿಷ್ಯರ ಸಂಬಂಧ ಶಿಕ್ಷಣದ ಮಹತ್ವವನ್ನು ಕುರಿತು ಮತ್ತು ಡಾ. ರಾಧಾಕೃಷ್ಣನ್ ಅವರ ಸಾಧನೆ ಮತ್ತು ಶಿಕ್ಷಣಕ್ಕೆ ಅವರು ಕೊಟ್ಟಂತಹ ಕೊಡುಗೆ ಶಿಕ್ಷಣದ ಮಹತ್ವ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು. 

ವೇದಿಕೆ ಮೇಲೆ ಉಪಸ್ಥಿತ ಇದ್ದಂತಹ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ರಾಮಲಿಂಗ ಭೋಸ್ಲೆ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಗುರು ಶಿಷ್ಯರ ಪರಂಪರೆಯನ್ನು ಮಹತ್ವವನ್ನು ಕುರಿತು ಹೇಳಿದರು.

ಡಾ. ಪದ್ಮಣ್ಣ ರಾಸಣಿಗಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳು ಸರಿಯಾಗಿ ಓದಬೇಕು ಮತ್ತು ಪರೀಕ್ಷೆಯನ್ನು ಉತ್ತಮವಾಗಿ ಬರೆದು ಅಂಕಗಳನ್ನು ಗಳಿಸಿ ಮುಂದೆ ಉನ್ನತ ಹುದ್ದೆಯನ್ನು ಅಲಂಕರಿಸಬೇಕೆAದು ಮಾತನಾಡಿದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸಾಂಸ್ಕೃತಿಕ ಸಂಚಾಲಕರು ಆದಂತಹ ಡಾ. ಜ್ಯೋತಿ ಕೆ .ಎಸ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮುಂದಿನ ಭವಿಷ್ಯವನ್ನು ಕಟ್ಟಿಕೊಳ್ಳಲು ಈಗಿನ ತಯಾರಿ ಅತಿ ಅವಶ್ಯಕ ಎಂದು ತಿಳಿಸಿದರು. 

ಡಾ. ಭಾಗ್ಯ ಜ್ಯೋತಿ ಸಹ ಪ್ರಾಧ್ಯಾಪಕರು ಕನ್ನಡ ವಿಭಾಗ ಇವರು ಕೂಡ ಗುರು ಶಿಷ್ಯರ ಪರಂಪರೆಯನ್ನು ಕುರಿತು ಮಹತ್ವವನ್ನು ಕುರಿತು ಹಾಗೂ ಗುರು ಆದವರು ಹೇಗಿದ್ದರು ಈಗಿನ ಒಂದು ಸಂದರ್ಭದಲ್ಲಿ ಗುರು-ಶಿಷ್ಯರು ಹೇಗಿದ್ದಾರೆ ಎನ್ನುವುದನ್ನು ಅನೇಕ ರೀತಿಯ ಗುರು-ಶಿಷ್ಯರನ್ನು ಸ್ಮರಿಸುತ್ತಾ ಪ್ಲೇಟೋ ಅರಿಸ್ಟಾಟಲ್, ದ್ರೋಣಾಚಾರ್ಯ ಅರ್ಜುನ, ಏಕಲವ್ಯ, ಗುರು ಗೋವಿಂದ ಭಟ್ಟರು ಮತ್ತು ಶಿಶುನಾಳ ಶರೀಫ ಹಾಗೂ ಅಲ್ಲಮನ ವಚನವನ್ನು ಕುರಿತು ಮಾತನಾಡಿದರು. 

ಡಾ. ಸುನಂದ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನೆರವೇರಿಸುವಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯಿಂದ ಮಾರ್ಗದರ್ಶನವನ್ನು ತೋರಿಸಿದರು ಹಾಗೂ ಈ ಕಾರ್ಯಕ್ರಮವನ್ನು ಪೂಜಾ ಸ್ವಾಗತಿಸಿದರು, ವೈಶಾಲಿ ವಂದನಾರ್ಪಣೆ ಮಾಡಿದರೆ ಭೂಮಿಕಾ ನಿರೂಪಣೆಯನ್ನು ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.