ಸರ್ಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ಸರ್ಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
ಕಲಬುರಗಿ : ಸರ್ಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯಲ್ಲಿ ದಿನಾಂಕ 08-09-2025 ರಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಡಾ. ಬಿ. ಆರ್. ಅಂಬೇಡ್ಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ರಮೇಶ ಲಂಡನಕರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇಂದಿನ ವಿದ್ಯಾರ್ಥಿಗಳು ಓದುವುದರ ಕಡೆ ಗಮನವಹಿಸಬೇಕು,ಅಂದಾಗ ಮಾತ್ರ ಜೀವನ ಉಜ್ವಲವಾಗುತ್ತದೆ ಎಂದರು. ಶಿಕ್ಷಕ ವೃತ್ತಿ ಪವಿತ್ರವಾದದ್ದು, ಶಿಕ್ಷಕರು ರಾಷ್ಟ್ರಕ್ಕೆ ಮಾದರಿಯಾಗಬೇಕು ಎಂದರು. ಅತಿಥಿಗಳಾಗಿ ಆಗಮಿಸಿದ ಡಾ. ಯುನಿಸ್ ಖಾನ್, ಡಾ ಮಲ್ಲಿಕಾರ್ಜುನ ಸಾರ್ವಕರ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಅವರು ವಹಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಡೀನರಾದ ಡಾ. ವಿಜಯಕುಮಾರ್ ಸಾಲಿಮನಿ, ಡಾ.ರಾಜಕುಮಾರ ಸಲಗರ, ಡಾ. ದೌಲಪ್ಪ.ಎಚ್, ಪರೀಕ್ಷಾ ನಿಯಂತ್ರಕರಾದ ಡಾ. ಟಿ.ವಿ ಅಡಿವೇಶ ಮತ್ತು ಐ.ಕ್ಯೂ.ಎಸಿ ಸಂಯೋಜಕರಾದ ಡಾ.ರಾಜಶೇಖರ ಮಡಿವಾಳ, ಸಿಬ್ಬಂದಿ ಕಾರ್ಯದರ್ಶಿಗಳಾದ ಡಾ. ರವೀಂದ್ರಕುಮಾರ ಭಂಡಾರಿ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಡಾ. ಬಲಭೀಮ ಸಾಂಗ್ಲಿಯವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಿಂದ ಪದನ್ನೋತಿ ಹೊಂದಿ ಪ್ರಾಧ್ಯಾಪಕರಾಗಿ ಬಡ್ತಿ ಹೊಂದಿದ ಡಾ. ಮಹಾಂತೇಶ ನಂದಪ್ಪನವರ, ಡಾ. ಟಿ.ವಿ ಅಡಿವೇಶ ಡಾ. ಚಂದ್ರಕಾಂತ ಜಮಾದಾರ್, ಡಾ.ಮಲ್ಲಿಕಾರ್ಜುನ ಶೆಟ್ಟಿ,ಡಾ. ಶಿವಲಿಂಗಪ್ಪ ಪಾಟೀಲ ಅವರನ್ನು ಅತಿಥಿ ಗಣ್ಯರಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಕುರಿತು ಮಾತನಾಡಿದರು. ಡಾ. ಶಾಮಲಾ ಸ್ವಾಮಿ ಪ್ರಾರ್ಥಿಸಿದರು. ಡಾ.ರವೀಂದ್ರಕುಮಾರ ಭಂಡಾರಿ ಸ್ವಾಗತಿಸಿದರು. ಡಾ. ರಾಜಕುಮಾರ ಸಲಗರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಸಂತ ಸಾಗರ ವಂದಿಸಿದರು. ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಡಾ. ಬಲಭೀಮ ಸಾಂಗ್ಲಿಯವರು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಯೇತರ ವರ್ಗದವರು ಮತ್ತು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು. ಡಾ. ನಾಗಪ್ಪ ಗೋಗಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು.