ಅಕ್ರಮ ಶಾಲೆಗಳ ವಿರುದ್ಧ ಕ್ರಮಕ್ಕೆ ಸಂದೀಪ ಭರಣಿ ನೇತೃತ್ವದಲ್ಲಿ ಸಚಿವರಿಗೆ ಮನವಿ”

ಜಿಲ್ಲೆಯಲ್ಲಿ ಒಂದೇ ಕಟ್ಟಡದಲ್ಲಿ 2-3 ಶಾಲೆಗಳನ್ನು ಅಕ್ರಮವಾಗಿ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಸಂದೀಪ ಭರಣಿ ನೇತೃತ್ವದಲ್ಲಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ
ಕಲಬುರಗಿ ಜಿಲ್ಲೆಯಲ್ಲಿ ಒಂದೇ ಕಟ್ಟಡದಲ್ಲಿ 2-3 ಶಾಲೆಗಳನ್ನು ಅಕ್ರಮವಾಗಿ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಳ್ಳದೇ ಇರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಇವರ ವಿರುದ್ಧ ದೂರು ಕ್ರಮ ಕೈಗೋಳಬೇಕೆಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸಂದೀಪ ಭರಣಿ ನೇತೃತ್ವದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಹಲವಾರು ಕಡೆ ಒಂದೇ ಕಟ್ಟಡದಲ್ಲಿ 2-3 ಶಾಲೆಗಳನ್ನು ನಡೆಸುತ್ತಿರುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ಹಲವಾರು ಬಾರಿ ತಮ್ಮ ಇಲಾಖೆಗೆ ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಶಿವಶಕ್ತಿನಗರ, ತಾಜಸುಲ್ತಾನಪೂರ ರಸ್ತೆಯಲ್ಲಿರುವ ನಿಸರ್ಗ ಆಂಗ್ಲ ಮಾಧ್ಯಮ ಶಾಲೆ ಇದ್ದು, ಇದೇ ಕಟ್ಟಡದಲ್ಲಿ ನವಪ್ರಜ್ಞಾ ಶಾಲೆ ಹಾಗೂ ನಿಸರ್ಗ ಬಿ.ಸಿ.ಎ. ಬಿಕಾಂ ಕಾಲೇಜನ್ನು ಅಕ್ರಮವಾಗಿ ನಡೆಸುತ್ತಿದ್ದಾರೆ. ಆದರೆ ಇಲ್ಲಿ ಯಾವುದೇ ಆಟದ ಮೈದಾನ ಸಹ ಇರುವುದಿಲ್ಲ, ಕಾಟನ್ ಮಾರ್ಕೆಟ್ ಹತ್ತಿರ ಕೃಷ್ಣನಗರದಲ್ಲಿ ಶ್ರೀ ಬಾಲಾಜಿ ಆಂಗ್ಲ ಮಾಧ್ಯಮಶಾಲೆ ಮತ್ತು ದೇವಾಜಿನಾಯಕ ಕನ್ನಡ ಹಿರಿಯ ಪ್ರಾಥಮಿಕ ಶಾಲೆ (ಅನುದಾನಿತ) ಶಾಲೆಗಳನ್ನು ಅಕ್ರಮವಾಗಿ ನಡೆಸುತ್ತಿದ್ದಾರೆ. ಇಲ್ಲಿಯೂ ಸಹ ಯಾವುದೇ ಆಟದ ಮೈದಾನ ಸಹ ಇರುವುದಿಲ್ಲ, ಬಸವ ಕನ್ನಡ ಕಾನ್ವೆಂಟ್ ಶಾಲೆ, ಚೇತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಇನ್ನೂ ಹಲವಾರು ಶಾಲೆಗಳಲ್ಲಿ ಮಕ್ಕಳಿಗೆ ಆಟವಾಡಲು ಯಾವುದೇ ಆಟದ ಮೈದಾನಗಳು ಇರುವುದಿಲ್ಲ.
ಈ ಮೇಲೆ ತಿಳಿಸಿರುವ ಅಕ್ರಮ ಶಾಲೆಗಳ ಸಂಪೂರ್ಣ ಮಾಹಿತಿ ಹಾಗೂ ಒಂದೇ ಕಟ್ಟಡದಲ್ಲಿ 2 ಶಾಲೆಗಳನ್ನು ಹೇಗೆ ನಡೆಸಲಾಗುತ್ತಿದೆ? ಎಂಬುದರ ಕುರಿತು ಮಾಹಿತಿ ಹಕ್ಕು ಅಧಿನಿಮಯ ಕಾಯ್ದೆಯಡಿ ಸಹ ಕೇಳಲಾಗಿತ್ತು. ಆದರೆ ಸದರಿ ಶಾಲೆಯ ಆಡಳಿತ ಮಂಡಳಿಯವರು ಅಥವಾ ಇಲಾಖೆಯವರು ಈ ಕುರಿತು ನಮಗೆ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ. ಅಂದರೆ ಸದರಿ ಶಾಲೆಗಳು ಅಧಿಕೃತ ಅನುಮತಿಗಳನ್ನು ಪಡೆದು ನಡೆಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇಂತಹ ಶಾಲೆಗಳ ಪರವಾನಿಗೆಯನ್ನು ರದ್ದುಗೊಳಿಸಬೇಕು. ಕಲಬರಗಿ ನಗರದದಲ್ಲಿ ಒಂದು ಪರವಾನಿಗೆಯನ್ನು ಪಡೆದು 3-4 ಶಾಲೆಗಳನ್ನು ಅಕ್ರವಾಗಿವಾಗಿ ನಡೆಸುತ್ತಿದ್ದಾರೆ.
ಶಾಲೆಯನ್ನು ನಡೆಸಲು ಅನುಮತಿ ಪಡೆಯಲು ಶಾಲೆಯಲ್ಲಿ ಕಡ್ಡಾಯವಾಗಿ ಮಕ್ಕಳಿಗೆ ಆಟವಾಡಲು ಗ್ರೌಂಡ್ ಅನ್ನು ತಪ್ಪದೇ ಹೊಂದಿರಬೇಕು. ಆದರೆ ಕಲಬುರಗಿಯಲ್ಲಿ ಹಲವಾರು ಶಾಲೆಗಳಲ್ಲಿ ಯಾವುದೇ ಆಟದ ಮೈದಾನಗಳು ಇರುವುದಿಲ್ಲ, 2025ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ಕೊನೆಯ ಸ್ಥಾನ ಪಡೆದಿದ್ದು, ಇದಕ್ಕೆ ಶಿಕ್ಷಣ ಇಲಾಖೆಯೇ ನೇರವಾಗಿ ಕಾರಣವಾಗಿದ್ದು, ಅಕ್ರಮವಾಗಿ ಶಾಲೆಗಳನ್ನು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಸಹ ಇದಕ್ಕೆ ಹೊಣೆಗಾರರಾಗಿರುತ್ತವೆ, ಕಲಬುರಗಿ ನಗರದ ಶಾಲೆಗಳ ರಿನಿವಲ್ ಮುಗಿದರೂ ಸಹ ಹಿಂದಿನ ದಿನಾಂಕಗಳನ್ನು ನಮೂದಿಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಕ್ರಮ ಮತ್ತು ಕಾನೂನುಬಾಹಿರವಾಗಿ ರಿನಿವಲ್ ಮಾಡಿಕೊಡುತ್ತಿದ್ದಾರೆ, ಕನ್ನಡ ಮಾಧ್ಯಮ ಅನುಮತಿ ಪಡೆದು ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ನಡೆಸುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಲಬುರಗಿ ಇವರ ಕಛೇರಿ ಎದುರು ಹಲವಾರು ಬಾರಿ ಉಗ್ರವಾದ ಹೋರಾಟ ನಡೆಸಿದರೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಸದರಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಈ ಮೇಲೆ ತಿಳಿಸಿರುವ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಕಲಬುರಗಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.