ಹೆಚ್ಚಿನ ಜ್ಞಾನವೃಧಿಗೆ ಸರ್ಟಿಫಿಕೇಟ್ ಕೋರ್ಸ್ ಸಹಾಯಕ: ಡಾ. ದತ್ತಾ
 
                                ಹೆಚ್ಚಿನ ಜ್ಞಾನವೃಧಿಗೆ ಸರ್ಟಿಫಿಕೇಟ್ ಕೋರ್ಸ್ ಸಹಾಯಕ: ಡಾ. ದತ್ತಾ
ಕಲಬುರಗಿ: ಇಂದು ಮೊಬೈಲ್ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಮೊಬೈಲ್ ಫೋನುಗಳಲ್ಲಿ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ವಿಶ್ವವಿದ್ಯಾಲಯದ ಪಠ್ಯಕ್ರಮದ ಜೊತೆಗೆ ಹೆಚ್ಚಿನ ಜ್ಞಾನವೃಧಿಸಿ ಕೊಳ್ಳಲು ಸರ್ಟಿಫಿಕೇಟ್ ಕೋರ್ಸ್ ಸಹಾಯಕ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಹಿಂದಿ ಪ್ರಾಧ್ಯಾಪಕರಾದ ಡಾ ಮುದನರ ದತ್ತಾ ಅವರು ನುಡಿದರು.
ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಕಲಬುರಗಿಯ ಹಿಂದಿ ವಿಭಾಗ, ಕೇಂದ್ರ ಸರ್ಕಾರದ ಕೇಂದ್ರೀಯ ಹಿಂದಿ ನಿರ್ದೇಶಾಲಯದ ಸಹಯೋಗದಲ್ಲಿ ಆರಂಭಿಸಿರುವ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಇಂದಿನ ಮೊಬೈಲ್ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಪಡೆದುಕೊಳ್ಳ ಬೇಕು ಹಾಗೂ ಹೆಚ್ಚಿನ ಜ್ಞಾನ ವೃಧಿಸಿಕೊಳ್ಳ ಬೇಕು ಎಂಬ ಮಹತ್ವಾಕಾಂಕ್ಷೆ ಯೊಂದಿಗೆ ಇಂತಹ ಸರ್ಟಿಫಿಕೇಟ್ ಕೋರ್ಸ್ ಗಳು ಸಹಾಯಕ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ರಾಜೇಂದ್ರ ಕೊಂಡಾ ಅವರು ವಹಿಸಿಕೊಂಡು ಹಿಂದಿ ವಿಭಾಗದವರು ಆರಂಭಿಸಿರುವ ಸರ್ಟಿಫಿಕೇಟ್ ಕೋರ್ಸ್ ರೀತಿಯಲ್ಲಿ
ಕೇಂದ್ರ ಸರ್ಕಾರ ತನ್ನ ವಿವಿಧ ವಿಭಾಗಗಳ ಅಧೀನದಲ್ಲಿ ಬೇರೆ ಬೇರೆ ರೀತಿಯ ಕೋರ್ಸ್ ನಡೆಸುತ್ತದೆ, ಆ ಕೋರ್ಸಗಳ ಸದುಪಯೋಗ ಪಡಿಸಿಕೊಳ್ಳ ಬೇಕೆಂದು ಹೇಳಿದರು. ನಮ್ಮ ಮಹಾವಿದ್ಯಾಲಯದಲ್ಲಿ ಇದೆ ಮೊದಲು ಕೇಂದ್ರ ಸರ್ಕಾರದ ಕೇಂದ್ರೀಯ ಹಿಂದಿ ನಿರ್ದೇಶಾಲಯ ಸಹಯೋಗದಲ್ಲಿ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗಿದೆ ಎಂದು ಹೇಳಿದರು.
ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ಪ್ರೇಮಚಂದ ಚವ್ಹಾಣ ಅವರು
ಕಾರ್ಯಕ್ರಮದ ಅತಿಥಿಗಳಿಗೆ ಸ್ವಾಗತವನ್ನು ಕೋರುತ್ತಾ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಮ್ಮ ಮಹಾವಿದ್ಯಾಲಯದ ಸುಮಾರು ೮೦ ವಿದ್ಯಾರ್ಥಿಗಳು ಈ ಸರ್ಟಿಫಿಕೇಟ್ ಕೋರ್ಸ್ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಮತ್ತು ಈ ಕೋರ್ಸ್ ಒಂದು ವರ್ಷದ ಅವಧಿದಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ನಿರ್ವಹಣೆಯನ್ನು ಹಿಂದಿ ವಿಭಾಗದ ಉಪನ್ಯಾಸಕರಾದ ಸುಷ್ಮಾ ಕುಲಕರ್ಣಿ ಅವರು ನಿರ್ವಹಿಸಿದರು, ವಿಭಾಗದ ಉಪನ್ಯಾಸಕರಾದ ಕವಿತಾ ಠಾಕೂರ್ ಅವರು ವಂದಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಡಾ ವೀಣಾ ಎಚ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ ಸುಭಾಷ ದೊಡ್ಡಮನಿ, ದೈಹಿಕ ನಿರ್ದೇಶಕರಾದ ಡಾ ವಿಶ್ವನಾಥ್ ದೇವರಮನಿ, ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ಜ್ಯೋತಿಪ್ರಕಾಶ ದೇಶಮುಖ, ಕನ್ನಡ ವಿಭಾಗದ ಮುಖ್ಯಸ್ಥರಾದ ಕವಿತಾ ಅಶೋಕ್, ಬಸಮ್ಮ ಗೊಬ್ಬುರ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಶ್ರೀದೇವಿ ಸರಡಗಿ, ಉರ್ದು ವಿಭಾಗದ ಮುಖ್ಯಸ್ಥರಾದ ಡಾ ಮೋಹಸೀನಾ ಫಾತಿಮಾ ಮತ್ತು ಇನ್ನಿತರ ವಿಭಾಗದ ಶಿಕ್ಷಕರು ಹಾಗೂ ವಿಭಾಗದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
 

 kkeditor
                                    kkeditor                                 
                    
                 
                    
                 
                    
                 
                    
                 
                    
                 
                    
                 
                    
                 
    
             
    
             
    
             
    
             
    
             
    
             
    
 
    
 
    
 
    
 
    
 
    
                                        
                                     
    
 
    
