ಕಲ್ಯಾಣ ಕರ್ನಾಟಕ ರೈತಾಪಿ ಸಂಘದ ಕಮಲಾಪೂರ ತಾಲೂಕಾ ಅಧ್ಯಕ್ಷರಾಗಿ ಪಂಡಿತರಾವ ಹುಂಪಳಿ ಆಯ್ಕೆ

ಕಲ್ಯಾಣ ಕರ್ನಾಟಕ ರೈತಾಪಿ ಸಂಘದ ಕಮಲಾಪೂರ ತಾಲೂಕಾ ಅಧ್ಯಕ್ಷರಾಗಿ ಪಂಡಿತರಾವ ಹುಂಪಳಿ ಆಯ್ಕೆ
ಕಲಬುರಗಿ: ಕಲ್ಯಾಣ ಕರ್ನಾಟಕ ರೈತಾಪಿ ಸಂಘದ ರಾಜ್ಯಾಧ್ಯಕ್ಷ ಚಂದ್ರಕಾAತ ತುಕ್ಕೋಜಿ ಆದೇಶದ ಮೇರೆಗೆ ಕಲ್ಯಾಣ ಕರ್ನಾಟಕ ರೈತಾಪಿ ಸಂಘದ ಕಮಲಾಪೂರ ತಾಲೂಕಾ ಅಧ್ಯಕ್ಷರಾಗಿ ಪಂಡಿತರಾವ ಹುಂಪಳಿ ಹಾಗೂ ಕಮಲಾಪೂರ ತಾಲೂಕಾ ಪ್ರಧಾನ ಕಾರ್ಯದರ್ಶಿಯಾಗಿ ಶರಣಬಸಪ್ಪ ಪಾಟೀಲ ಇವರನ್ನು ನೇಮಕ ಆದೇಶ ಹೊರಡಿಸಲಾಗಿದೆ.
ತಾವುಗಳು ಈ ಗುರುತರವಾದ ಜವಾಬ್ದಾರಿಯನ್ನು ವಹಿಸಿಕೊಂಡು ನಮ್ಮ ಈ ರೈತ ಸಂಘದ ತತ್ವ-ಸಿದ್ಧಾಂತಗಳು, ವಿಚಾರಧಾರೆಗಳನ್ನು ಚಾಚು ತಪ್ಪದೇ ಪಾಲನೆ ಮಾಡುತ್ತೀರೆಂದು. ಕಾಯಾ, ವಾಚಾ, ಮನಸಾ ರೈತ ಪರವಾಗಿ ಕ್ರೀಯಾಶೀಲವಾದ ಕೆಲಸ ಮಾಡಬೇಕೆಂದು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ರೈತರಿಗೆ ನ್ಯಾಯ ಒದಗಿಸಿಕೊಡುವ ಕಾರ್ಯದಲ್ಲಿ ಪರಿಣಾಮಕಾರಿಯಾದ ಪಾತ್ರ ನಿರ್ವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.