ಸಗರದಲ್ಲಿ ಸಂಭ್ರಮದ ಗಣೇಶ್ ಚತುರ್ಥಿ

ಸಗರದಲ್ಲಿ ಸಂಭ್ರಮದ ಗಣೇಶ್ ಚತುರ್ಥಿ
ಶಹಪುರ : ತಾಲೂಕಿನ ಸಗರ ಗ್ರಾಮದ ಹೋಳಿಕಟ್ಟಿ ಗಜಾನನ ಯುವಕ ಮಂಡಳಿ ವತಿಯಿಂದ ನೂತನ ಗಣೇಶ್ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಯಿತು.
ಗಣೇಶ ಹಬ್ಬ ಹಿಂದೂ ಧರ್ಮದಲ್ಲಿ ಒಂದು ವಿಶೇಷ ಹಬ್ಬವಾಗಿ ಆಚರಿಸಲಾಗುತ್ತಿದೆ,ಭಾದ್ರಪದ ದಿನದಂದು ಗಣೇಶ್ ಮೂರ್ತಿ ತಂದು ವಿಜೃಂಭಣೆಯಿಂದ ಪೂಜೆ ಪುನಸ್ಕಾರ ನೆರವೇರಿಸಿ, ಸಮೃದ್ಧಿ,ಸಂಪತ್ತು, ಬುದ್ಧಿವಂತಿಕೆಯನ್ನು ಕರುಣಿಸಿ ಎಂದು ಬೇಡಿಕೊಳ್ಳುತ್ತಾರೆ,ಅಲ್ಲದೆ ಅಡೆತಡೆಗಳನ್ನು,ವಿಘ್ನಗಳನ್ನು ನಿವಾರಣೆ ಮಾಡುತ್ತಾನೆ ಎಂಬ ಅಪಾರ ನಂಬಿಕೆ ನಮ್ಮ ಹಿಂದೂಗಳಲ್ಲಿದೆ.
ಐದು ದಿನಗಳ ಕಾಲ ಪ್ರತಿದಿನ ಬೆಳಗ್ಗೆ ಪೂಜಾ ಸಮಯದಲ್ಲಿ ಗಣೇಶನಿಗೆ ತೆಂಗಿನಕಾಯಿ ಹಾಗೂ ಪ್ರಿಯವಾದ ಆಹಾರ ಮೋದಕ ಮತ್ತು ವಿವಿಧ ಬಗೆಯ ಈ ತಿಂಡಿ ಪದಾರ್ಥ ಅರ್ಪಿಸಿ ಅಂತರ ಬಂದಂತಹ ಭಕ್ತರಿಗೆ ಪ್ರಸಾದ ವಿತರಣೆ ಮಾಡುತ್ತಾರೆ.
ಈ ಸಂದರ್ಭದಲ್ಲಿ ಶ್ರೀಕಾಂತಗೌಡ ಸುಬೇದಾರ,ಅಚ್ಚಪ್ಪಗೌಡ ಮಾಲಿ ಪಾಟೀಲ್,ಮಹೇಶ್ ಸುಬೇದಾರ್, ಬಸುಗೌಡ ಪೊಲೀಸ್ ಪಾಟೀಲ್, ಕಾಶಿನಾಥ ಪೂಜಾರಿ,ಶಿವು ಮಲ್ಲೇದ,ಗುರು ಪತ್ತಾರ್,ಇತರರು ಹಾಜರಿದ್ದರು.