**ದಕ್ಷ ಅಧಿಕಾರಿಗಳ 6 ತಿಂಗಳಲ್ಲಿಯೇ ವರ್ಗಾವಣೆ ಕೈಬಿಡಿ: ದಲಿತ ಸಂಘರ್ಷ ಸಮಿತಿಯಿಂದ ಉಗ್ರ ಹೋರಾಟದ ಎಚ್ಚರಿಕೆ**

**ದಕ್ಷ ಅಧಿಕಾರಿಗಳ 6 ತಿಂಗಳಲ್ಲಿಯೇ ವರ್ಗಾವಣೆ ಕೈಬಿಡಿ: ದಲಿತ ಸಂಘರ್ಷ ಸಮಿತಿಯಿಂದ ಉಗ್ರ ಹೋರಾಟದ ಎಚ್ಚರಿಕೆ**

ದಕ್ಷ ಅಧಿಕಾರಿಗಳಿಗೆ 6 ತಿಂಗಳಲ್ಲಿಯೇ ವರ್ಗಾವಣೆ ಮಾಡುತ್ತಿರುವುದು ಕೈಬಿಡಿ ಇಲ್ಲದಿದ್ದರೆ ಉಗ್ರ ಹೋರಾಟ:

 ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಎಚ್ಚರಿಕೆ.

ಯಾದಗಿರಿ ಜಿಲ್ಲೆಗೆ ಬಂದು ದಕ್ಷತೆಯಿಂದ ಕೆಲಸ ಮಾಡುತಿದ್ದು ಸರ್ಕಾರದ ಕ್ರಮಕ್ಕೆ ಕರ್ನಾಟಕ ನ್ಯಾಯ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ. 

ಈ ಕುರಿತು ಹೇಳಿಕೆ ನೀಡಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನೆಯ ಗುರುಮಾಠಕಲ್ ತಾಲೂಕು ಸಂಚಾಲಕರು ರಂಗಸ್ವಾಮಿ ಕೊಂಕಲ್.. ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ಹೀಗೆ ಅಂಧಾ ದರ್ಬಾರ್ ನಡೆಸುವ ಮೂಲಕ ವರ್ಗಾವಣೆ ಮಾಡಿರುವುದು ಅತ್ಯಂತ ನಾಚಿಕೆಗೇಡು ಸಂಗತಿಯಾಗಿದೆ. 

ಅತ್ಯಂತ ಹಿಂದುಳಿದ ಜಿಲ್ಲೆಗೆ ಆಗೊಮ್ಮೆ ಈಗೊಮ್ಮೆ ಪ್ರಮಾಣಿಕ ದಕ್ಷ ಅಧಿಕಾರಿಗಳು ಬರುತ್ತಿದ್ದು, ಅವರನ್ನೂ ಸಹ ಹೀಗೆ ದಿಢೀರ್ ವರ್ಗಾವಣೆ ಮಾಡಿದರೆ ಜಿಲ್ಲೆಯ ಅಭಿವೃದ್ಧಿ ಆಗುವುದಾದರೂ ಯಾವಾಗ? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದರೆ ನಮ್ಮ ಸಂಘಟನೆಯ ವತಿಯಿಂದ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 

ಇದಲ್ಲದೇ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳೂ ಸಹ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಎಸ್.ಪಿ. ಅವರು ಈಗಾಗಲೇ ಜಿಲ್ಲಾ ಕೇಂದ್ರದಲ್ಲಿ ಸಿಸಿ ಕೆಮೆರಾಗಳನ್ನು ಅಳವಡಿಸುವ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಅಕ್ರಮ ಮರಳು ಧಂದೆ, ಇಸ್ಪೀಟ್, ಜೂಜಾಟ ಸೇರಿದಂತೆ ಇನ್ನಿತರ ಮನೆಹಾಳು ಕೆಲಸ ಮಾಡುವವರನ್ನು ಮಟ್ಟ ಹಾಕುತ್ತಿದಾರೆ. 

ಹೀಗೆ ದಕ್ಷತೆಯಿಂದ ಜಿಲ್ಲೆಯ ಜನತೆಯ ಪರವಾಗಿ ಕೆಲಸ ಮಾಡುತ್ತಿರುವ ದಕ್ಷತೆಯಿಂದ ಕೆಲಸ ಮಾಡುವವರಿಗೆ ವರ್ಗಾವಣೆ ಮಾಡುವ ಕೆಲಸ ಕೈಬಿಡಬೇಕು 

ಎಸ್.ಪಿ. ಅವರಿಗೂ ಸಹ ವರ್ಗಾವಣೆ ಮಾಡುವ ದಟ್ಟ ವದಂತಿ ಹರಡಿದ್ದು, ಎಸ್.ಪಿ. ಅವರ ವರ್ಗಾವಣೆ ಮಾಡಿದಲ್ಲಿ ಜನಪರ ಸಂಘಟನೆಗಳೊಂದಿಗೆ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆನೀಡಿದ್ದಾರೆ.