ತಾಳೆ ಕೃಷಿಯಿಂದ ರೈತರ ಆದಾಯ ದ್ವಿಗುಣ ಅಡಿಕೆ ಬೆಳೆಗೆ ಪರ್ಯಾಯ: ಡಾ ಪಿ ಎಂ ಸೊಬರದ

ತಾಳೆ ಕೃಷಿಯಿಂದ ರೈತರ ಆದಾಯ ದ್ವಿಗುಣ ಅಡಿಕೆ ಬೆಳೆಗೆ ಪರ್ಯಾಯ: ಡಾ ಪಿ ಎಂ ಸೊಬರದ

ತಾಳೆ ಕೃಷಿಯಿಂದ ರೈತರ ಆದಾಯ ದ್ವಿಗುಣ ಅಡಿಕೆ ಬೆಳೆಗೆ ಪರ್ಯಾಯ: ಡಾ ಪಿ ಎಂ ಸೊಬರದ 

ಕಲಬುರಗಿ : ೨೪ ನೇ ಆಗಸ್ಟ್ . ಕಲಬುರಗಿ ಜಿಲ್ಲೆಯ ಪ್ರಗತಿಪರ ರೈತರಾದ ಚಿತ್ರಶೇಖರ ಅವರ ತೋಟದಲ್ಲಿ ತಾಳೆ ಬೆಳೆ ಸಸಿ ನೆಡುವ ಕಾರ್ಯಕ್ರಮವನ್ನು ಬೆಂಗಳೂರಿನ ಲಾಲ್ ಬಾಗ್ ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಾ ಪಿ ಎಂ ಸೊಬರದ ಉದ್ಘಾಟಿಸಿ ಮಾತನಾಡಿ,

ತಾಳೆ ಕೃಷಿಯಿಂದ ರೈತರ ಆದಾಯ ದ್ವಿಗುಣವಾಗಲಿದ್ದೂ, ಅಡಕೆಗೆ ಪರ್ಯಾಯ ಬೆಳೆಯಾಗಿ ಇದನ್ನು ಬೆಳೆಯಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. 

ಕಲಬುರಗಿ ತಾಲೂಕಿನ ಪ್ರಗತಿಪರ ರೈತ ಚಿತ್ರಶೇಖರ ಅವರ ತೋಟದಲ್ಲಿ ಏರ್ಪಡಿಸಿದ್ದ ತಾಳೆ ಬೆಳೆ ಕೃಷಿ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಮುಂದುವರೆದು ಮಾತನಾಡಿದ ಅವರು, ತಾಳೆ ಬೆಳೆ ಖರ್ಚು ಕಡಿಮೆ, ನಿರ್ವಹಣೆ ಸುಲಭವಾಗಿದೆ. ಕಲ್ಪವೃಕ್ಷ ದ ಕೃಷಿಯಂತೆ 30 ಅಡಿ ಅಂತರದಲ್ಲಿ ಬೆಳೆಯುವ ತಾಳೆ ನಿರ್ವಹಣೆಯೂ ಅತಿ ಸುಲಭವಾಗಿದೆ ಎಂದು ಹೇಳಿದರು. 

ಕಲಬುರಗಿ ಎಪಿಎಂಸಿ ಉಪಾಧ್ಯಕ್ಷ ಹಾಗೂ ಪ್ರಗತಿಪರ ರೈತರಾದ ರಾಜಕುಮಾರ್ ಕೋಟೆ ಮಾತನಾಡಿ, ಇತ್ತೀಚೆಗೆ ತಾಳೆ ಎಣ್ಣೆ ಬೆಲೆ ಏರಿಕೆಯಾಗಿ ಬೆಳೆಗಾರರಿಗೆ ಲಾಭದಾಯಕವಾಗಿದೆ. 

ತಾಳೆ ಬೆಳೆಯಲ್ಲಿ ಹೊಸ ತಳಿ ಪರಿಚಯಿಸಲಾಗಿದೆ. ಇದು ಕುಬ್ಜ ತಳಿಯಾಗಿದ್ದು, ಮುಳ್ಳು ಕಡಿಮೆ ಇದೆ. ಕಟಾವಿಗೂ ಅನುಕೂಲವಾಗಿದೆ.ಅಲ್ಲದೆ ಗಿಡವನ್ನು ಸರಕಾರವೇ ಉಚಿತವಾಗಿ ನೀಡುವುದಲ್ಲದೇ, ಮೂರು ವರ್ಷ ನಿರ್ವಹಣೆಗಾಗಿ ಸಹಾಯಧನ ನೀಡುತ್ತಿದೆ ಆದ್ದರಿಂದ ಇದರ ಲಾಭವನ್ನು ರೈತರು ಪಡೆಯಬೇಕು ಎಂದು ಹೇಳಿದರು. 

ಪ್ರಗತಿಪರ ರೈತ ಚಿತ್ರಶೇಖರ ಅವರು ತಾಳೆ ಬೆಳೆ ನಿರ್ವಹಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ತಾಡ ತೇಗನೂರ ಗ್ರಾಮದ ಶ್ರೀ ಮಲ್ಲಿಕಾರ್ಜುನ್ ಮುತ್ಯಾ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ನಾರಾಯಣಪುರ,

ಉಪ ನಿರ್ದೇಶಕರ ಸಂತೋಷ ಇನಾಮದಾರ, ಪ್ರಭುರಾಜ ಹಿರೇಮಠ, 3ಎಫ್ ಎಫ್ ಕಂಪನಿಯ ಕಿರಣ್ ಕುಮಾರ ವೇದಿಕೆ ಮೇಲಿದ್ದರು.

ತಾಲೂಕಿನ ತಾಳೆ ಬೆಳೆಗಾರರು ಹಾಗೂ ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.