ಡಿಗ್ಗಿ ಗ್ರಾಮದಲ್ಲಿ ಶ್ರಾವಣ ಮಾಸ ಸಮಾಪ್ತಿ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಪಲ್ಲಕ್ಕಿ ಉತ್ಸವ
ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ಶ್ರಾವಣ ಮಾಸ ಸಮಾಪ್ತಿ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಿತು.
ಕಮಲನಗರ : ಸೋಮವಾರ ರಾತ್ರಿಯಿಂದ ನಿರಂತರವಾಗಿ ನಡೆದ ಭಜನೆ ಕಾರ್ಯಕ್ರಮ ನಸುಕಿನ ಜಾವ 5 ಗಂಟೆ ವರೆಗೆ ನಡೆಯಿತು. ಬೆಳಿಗ್ಗೆ 6 ಗಂಟೆಗೆ ಮಡಿವಾಳೇಶ್ವರ ದೇವರ, ಪಲ್ಲಕ್ಕಿ ಉತ್ಸವಕ್ಕೆ ಟ್ರಸ್ಟ'ನ ಅಧ್ಯಕ್ಷ ದೇವೇಂದ್ರ ಪಾಟೀಲ ಚಾಲನೆ ನೀಡಿದರು.
ಗ್ರಾಮದ ಪ್ರಮುಖ ಬಿದಿಗಳಿಂದ ಸಾಗಿದ ಪಲ್ಲಕ್ಕಿ ಮೆರವಣಿಗೆ, ಹನುಮಾನ ದೇವಾಲಯ, ಗ್ರಾಮಕಟ್ಟೆ, ಲಕ್ಷ್ಮಿ ಕಟ್ಟೆ, ಭಾಗ್ಯವಂತಿ ದೇವಾಲಯ, ಅಗ್ಗಿ ಬಸವಣ್ಣ ಕಟ್ಟೆ ಹತ್ತಿರ ತಲುಪಿತು, ಮೇರವಣಿಗೆ ಉದ್ದಕ್ಕೂ ಭಾಜ ಭಜಂತ್ರಿ, ಕೋಲಾಟ, ಲೇಜಿಮ್, ಭಜನೆ ಪದಗಳಿಗೆ ಅಕ್ಕನ ಬಳಗ ಹಾಗೂ ಅನ್ನ ಬಳಗ ಮೈಮರೆತು ಕುಣಿದು ಸಂಭ್ರಮದಿಂದ ಪಲ್ಲಕ್ಕಿ ಉತ್ಸವ ಆಚರಣೆ ಮಾಡಿದರು.
ತಮ್ಮ ಮನೆ ಬಾಗಿಲಿಗೆ ಬಂದ, ವರ್ಷಕ್ಕೆ ಒಮ್ಮೆ ಬರುವ ಗ್ರಾಮ ದೇವರನ್ನು ಭಕ್ತಿ ಭಾವದಿಂದ ತೆಂಗಿನಕಾಯಿ, ಕರಪೂರ ಬೆಳಗಿ ಪೂಜೆ ಮಾಡಿ, ಫ್ಯಾಮಿಲಿ ಫೋಟೋ ತೆಗೆದುಕೊಂಡು ಆನಂದ ಪಟ್ಟರು. ಮೆರೆವಣಿಗೆಯಲ್ಲಿ ಭಕ್ತರು ಪ್ರಸಾದ ವ್ಯವಸ್ಥೆ ಮಾಡಿದರು. ದರ್ಶನಕ್ಕೆ ಬಂದ ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಕಿರಿಯರು, ಅಣ್ಣನ ಬಳಗ, ಅಕ್ಕನ ಬಳಗ ಎಲ್ಲರೂ ಒಗ್ಗೂಡಿ ಜಾತ್ರೆ ಯಶಸ್ವಿ ಮಾಡಿದರು. ಕಮಲನಗರ ಪೊಲೀಸ್ ಠಾಣೆ ಪಿ.ಎಸ್.ಐ ಆಶಾ ರಾಠೋಡ ಅವರ ನೇತೃತ್ವದಲ್ಲಿ ಭದ್ರತೆ ನೀಡಿದರು.