ಮಹಾರಾಷ್ಟ್ರದಲ್ಲಿ 'ರಾಜ್ಯಮಾತಾ-ಗೋಮಾತಾ, ಕರ್ನಾಟಕದಲ್ಲಿ ಯಾವಾಗ..?

ಮಹಾರಾಷ್ಟ್ರದಲ್ಲಿ 'ರಾಜ್ಯಮಾತಾ-ಗೋಮಾತಾ, ಕರ್ನಾಟಕದಲ್ಲಿ ಯಾವಾಗ..?

ಮಹಾರಾಷ್ಟ್ರದಲ್ಲಿ 'ರಾಜ್ಯಮಾತಾ-ಗೋಮಾತಾ, ಕರ್ನಾಟಕದಲ್ಲಿ ಯಾವಾಗ..?

ಭಾರತ ದೇಶದಲ್ಲಿ ಹಿಂದೂಗಳಿಗೆ ಗೋವು , ದೇವತೆಯ,ಮಾತೆ ಸಮಾನ. ಎಲ್ಲ ದೇವ ದೇವತೆಗಳನ್ನು ಅದರಲ್ಲಿ ಕಾಣುತ್ತೇವೆ . ಎಂದು ಗೋವನ್ನು ಕಾಮಧೇನು ಎಂದು ಕರೆಯುತ್ತಾರೆ. ಕಾಮಧೇನು ಎಂದರೆ ಬೇಡಿದನ್ನು ಕೊಡುವುದು ಕಾಮಧೇನು ಕಲ್ಪವೃಕ್ಷ . ಈ ಕಾಮಧೇನು ಪದವನ್ನು ಭಗವದ್ಗೀತೆಯಲ್ಲಿ ಉಲ್ಲೇಖವಾಗಿದೆ.

 ಮಹಾರಾಷ್ಟ್ರ ಸರ್ಕಾರವು ಸೋಮವಾರ (ಸೆಪ್ಟೆಂಬರ್ 30, 2024) ರಾಜ್ಯದ ಸ್ಥಳೀಯ ದೇಶಿ,ಹಸುಗಳ ತಳಿಗಳನ್ನು 'ರಾಜ್ಯಮಾತಾ-ಗೋಮಾತಾ' ಎಂದು ಘೋಷಿಸಿತು. ಗೋವುಗಳ

  ಸಂಖ್ಯೆ ದಿನ ದಿನಕ್ಕೆ ಕಡಿಮೆಯಾಗುತ್ತಿರುವುದರಿಂದ ಅದನ್ನು ಉಳಿಸುವ ಉದ್ದೇಶದಿಂದ "ರಾಜ್ಯಮಾತ- ಗೋಮಾತಾ" ಎಂದು ಅದು ಹೇಳಿದೆ.

ದೇಶಿ ಹಸುಗಳನ್ನು ಸಾಕಲು ಸಬ್ಸಿಡಿ ಯೋಜನೆ ಜಾರಿಗೆ ಬರುವಂತೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಯೋಜನೆಯಡಿಯಲ್ಲಿ, ಪ್ರತಿ ಗೋಶಾಲೆಗಳಿಗಲ್ಲಿ ಇರುವ ಹಸುವಿಗೆ ಒಂದಕ್ಕೆ ದಿನಕ್ಕೆ ₹ 50 ನೀಡಲಾಗುವದೆಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.

 ಈ ಯೋಜನೆಯು ಸ್ಥಳೀಯ ತಳಿಗಳನ್ನು ರಕ್ಷಿಸುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಹೇಳಿದರು: 

ಈ ಹಣದಿಂದ ಗೋವುಗಳಿಗೆ ಮೇವು ಒದಗಿಸಲು ಸಹಾಯವಾಗುತ್ತದೆ ಎಂದು ಹೇಳಿದರು. 

ಮಹಾರಾಷ್ಟ್ರದ ಮಾದರಿಯಲ್ಲಿ ಕರ್ನಾಟಕದಲ್ಲಿ "ರಾಜ್ಯಮಾತ- ಗೋಮಾತಾ"ಅಥವಾ ಕ್ಷೀರ ಮಾತೆ ಎಂದು ಘೋಷಿಸಬೇಕು ಎಂದು ಆನಂದ ಬಿ.ಕಣಸೂರ,ಹರಸೂರ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.