ನಮ್ಮ ಪ್ರಜ್ಞೆ ವಿಸ್ತಾರಕ್ಕೆ ಅಂಬೇಡ್ಕರ್ ಬದುಕು ಪೂರಕ : ಡಾ.ಕಿರಣ್ ಗಾಜನೂರು.

ನಮ್ಮ ಪ್ರಜ್ಞೆ ವಿಸ್ತಾರಕ್ಕೆ ಅಂಬೇಡ್ಕರ್    ಬದುಕು ಪೂರಕ : ಡಾ.ಕಿರಣ್ ಗಾಜನೂರು.

ನಮ್ಮ ಪ್ರಜ್ಞೆ ವಿಸ್ತಾರಕ್ಕೆ ಅಂಬೇಡ್ಕರ್   

ಬದುಕು ಪೂರಕ : ಡಾ.ಕಿರಣ್ ಗಾಜನೂರು.

ಶಹಪುರ : ಸಂವಿಧಾನದ ಆಶಯಗಳು ಪ್ರತಿಯೊಬ್ಬರು ಅರಿತುಕೊಳ್ಳುವುದರ ಜೊತೆ ಜೊತೆಗೆ ನಮ್ಮ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳುವುದಕ್ಕೆ ಅಂಬೇಡ್ಕರರ ಬದುಕು ಮತ್ತು ಬರಹ ಓದಿಕೊಳ್ಳುವುದು ಅತ್ಯವಶ್ಯಕ ಎಂದು ಕಲ್ಬುರ್ಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಕಿರಣ ಗಾಜನೂರು ಹೇಳಿದರು

ತಾಲೂಕಿನ ಭೀಮರಾಯನಗುಡಿ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಇವರ ವತಿಯಿಂದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತ ಮಾತನಾಡಿದರು.ಅಲ್ಲದೆ ಅಂಬೇಡ್ಕರರ ಬದುಕು ಅತ್ಯಂತ ನೋವಿನಿಂದ ಕೂಡಿತ್ತು, ಪ್ರತಿಕ್ಷಣವೂ ದೀನ ದಲಿತರ ಏಳಿಗೆಗಾಗಿ ಸದಾ ಚಿಂತನೆ ಮಾಡುತ್ತಿದ್ದರು ಎಂದು ಹೇಳಿದರು. 

ಶಹಾಪುರ ನಗರದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ.ಶಂಕರ ರೆಡ್ಡಿ ಮಾತನಾಡಿ ಅಂಬೇಡ್ಕರರ ವಿಚಾರಧಾರೆಗಳು ಸರ್ವಕಾಲಕ್ಕೂ ಶ್ರೇಷ್ಠವಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿ ಅಂಬೇಡ್ಕರ್ ಕುರಿತು ಅಧ್ಯಯನ, ಸಂಶೋಧನೆ,ಕೈಗೊಳ್ಳಬೇಕಾಗಿದೆ, ಅಲ್ಲದೆ ಅವರ ಆದರ್ಶ ತತ್ವ ಸಿದ್ಧಾಂತಗಳು ಓದಿ ಅರ್ಥೈಸಿಕೊಂಡು ಜೀವನ ದುದ್ದಕ್ಕೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ರಾಜ್ಯ ಸರ್ಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂವಿಧಾನದ ಆಶಯಗಳನ್ನ ವಿದ್ಯಾರ್ಥಿಗಳಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ ಇದರ ಕಾರ್ಯ ಶ್ಲಾಘನೀಯವಾದದ್ದು ಎಂದು ತಿಳಿಸಿದರು.

ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ದೇವೇಂದ್ರಪ್ಪ ಮಡಿವಾಳಕರ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಚಾಮನಾಳ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಜುನ್ನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರದೇವಿ ಮಠಪತಿ,ಯೋಧ ದುರ್ಗಪ್ಪ ನಾಯಕ, ಉಪನ್ಯಾಸಕರಾದ ರಾಮಚಂದ್ರರಾವ್ ಗುಂಡೆಕಾರ, ಸಾಬಣ್ಣ ಮೇತ್ರೆ,ಜಿ ಬೋನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಡಾ. ಬಿ.ಆರ್.ಅಂಬೇಡ್ಕರ್ ಓದು 

ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಏರ್ಪಡಿಸಲಾಗಿತ್ತು,ಪ್ರಬಂಧ ಸ್ಪರ್ಧೆಯಲ್ಲಿ ಜ್ಯೋತಿ ಶಾಂತಪ್ಪ ಪ್ರಥಮ,ಮರೆಮ್ಮ ಮರೆಪ್ಪ ದ್ವಿತೀಯ,ನಿಂಗಮ್ಮ ಅಮಾತೆಪ್ಪ ತೃತೀಯ ಸ್ಥಾನ ಪಡೆದರೆ,ರಸಪ್ರಶ್ನೆ ಯಲ್ಲಿ ಪೂಜಾ ನಿಂಗಪ್ಪ ಪ್ರಥಮ, ಮುನೀರ್ ಗೋಕುಲ್ ಹುಸೇನ್ ದ್ವಿತೀಯ ಸ್ಥಾನ ಪಡೆದರು,ಆಶು ಭಾಷಣದಲ್ಲಿ ರೇಣುಕ ದೇವಪ್ಪ ಪ್ರಥಮ,ರಕ್ಷಿತಾ ಭೀಮಾಶಂಕರ ದ್ವಿತೀಯ,ಸುಜಾತ ಶರಣಪ್ಪ ತೃತೀಯ ಸ್ಥಾನ ಪಡೆದರು, ಹಾಗೂ ದೇವರಾಜ್,ಪೂಜಾ,ಮಲ್ಲಪ್ಪ,ಅಂಬಿಕಾ ಇನ್ನಿತರರು ಸ್ವರಚಿತ ಕವನ ವಾಚಸಿದರು.ಈ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಮಾಣ ಪತ್ರ ಮತ್ತು ಅಂಬೇಡ್ಕರ್ ಪುಸ್ತಕ ಬಹುಮಾನವಾಗಿ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ರವೀಂದ್ರನಾಥ್ ಹೊಸಮನಿ ಪ್ರಾಸ್ತಾವಿಕವಾಗಿ ಮಾತ ನಾಡಿದರು,ಜಟ್ಟಪ್ಪ ಪೂಜಾರಿ ಸರ್ವರನ್ನು ಸ್ವಾಗತಿಸಿದರು, ಗೋವಿಂದರಾಜ ಹಳಿ ಸಗರ ನಿರೂಪಿಸಿದರು,ವಿದ್ಯಾರ್ಥಿನಿ ಅಂಕಿತ ವಂದಿಸಿದರು.