ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆ – ನಗರದಲ್ಲಿ 2 ಸೆಪ್ಟೆಂಬರ್ ರಂದು ಭವ್ಯ ಕಾರ್ಯಕ್ರಮ

ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆ – ನಗರದಲ್ಲಿ 2 ಸೆಪ್ಟೆಂಬರ್ ರಂದು ಭವ್ಯ ಕಾರ್ಯಕ್ರಮ
ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆ – ನಗರದಲ್ಲಿ 2 ಸೆಪ್ಟೆಂಬರ್ ರಂದು ಭವ್ಯ ಕಾರ್ಯಕ್ರಮ

ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆ – ನಗರದಲ್ಲಿ 2 ಸೆಪ್ಟೆಂಬರ್ ರಂದು ಭವ್ಯ ಕಾರ್ಯಕ್ರಮ

ಕಲಬುರಗಿ: ಅ.18.ಬಸವ ಸಂಸ್ಕೃತಿ ಅಭಿಯಾನದಡಿ ನಗರದ ವಿವಿಧ ಬಸವಾಭಿಮಾನಿ ಸಂಘಟನೆಗಳು, ಸಂಸ್ಥೆಗಳು ಹಾಗೂ ಲಿಂಗಾಯತ ಮಠಾಧಿಪತಿಗಳು ಸೇರಿ 2-9-2025, ಮಂಗಳವಾರ ಬೆಳಿಗ್ಗೆ 11 ಗಂಟೆಗೆ ನಗರದ ಪೂಜ್ಯ ಬಸವರಾಜಪ್ಪ ಅಪ್ಪಾ ಸ್ಮರಣಾರ್ಥ ಭವನದಲ್ಲಿ,( ಸೆಂಟಿನರಿ ಹಾಲ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ ಪ್ರಕಟಣೆಯಲ್ಲಿ ತಿಳಿಸಿದರು.

ಇಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಬಸವ ಅಭಿಮಾನಿಗಳು ಭಾಗವಹಿಸಿದ್ದರು. ಸಭೆಯ ಆರಂಭದಲ್ಲಿ ಲಿಂಗೈಕ್ಯರಾದ ಪರಮ ಪೂಜ್ಯ*ಡಾ. ಶರಣಬಸವಪ್ಪ ಅಪ್ಪಾ* ಅವರ ಸ್ಮರಣಾರ್ಥ ಮೌನಾಚರಣೆ ಕೈಗೊಂಡು, ನಂತರ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಾ – “ಕರ್ನಾಟಕ ಸರ್ಕಾರ ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿ ಒಂದು ವರ್ಷ ಪೂರೈಸಿದೆ. ಇದು ಐತಿಹಾಸಿಕ ಘಟ್ಟವಾಗಿದ್ದು, ಬಸವಣ್ಣನವರ ತತ್ವಗಳು ವಿಪ್ಲವಾತ್ಮಕವಾಗಿವೆ. ಅವರು ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಇಡೀ ವಿಶ್ವದ ಸಾಂಸ್ಕೃತಿಕ ನಾಯಕ. ಅವರಿಂದ ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ನೈತಿಕ ಹಂತಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಉಂಟಾಗುತ್ತವೆ. ಜಾತಿ–ಮತ–ಲಿಂಗ ಅಂತರವಿಲ್ಲದ ಸಮ ಸಮಾಜ ನಿರ್ಮಿಸಿದ ಮಹಾನ್ ದಾರ್ಶನಿಕ” ಎಂದು ಹೇಳಿದರು.

ಜಗದ್ಗುರು ಡಾ.ಸಾರಂಗದರ ದೆಸೀಕೇಂದ್ರ ಮಹಾಸ್ವಾಮಿಗಳು,ಡಾ.ಬಸವಲಿಂಗ ಪಟ್ಟದೇವರು ,ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಮಾರ್ಗದರ್ಶನದಡಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಕಾರ್ಯಕ್ರಮದ ಪ್ರಮುಖ ಆಯ್ಕೆಗಳು:

* ಮಧ್ಯಾಹ್ನ 4:00 ಗಂಟೆಗೆ ಶೋಭಾ ಮೆರವಣಿಗೆ (Procession)

* ಸಂಜೆ 6:00 ಗಂಟೆಗೆ ಸಾರ್ವಜನಿಕ ಸಮಾರಂಭ

* ರಾತ್ರಿ 8:00 ಗಂಟೆಗೆ ‘ಜಂಗಮದಡಿಗೆ’ ನಾಟಕ ಪ್ರದರ್ಶನ

ಸಭೆಯಲ್ಲಿ ವಿವಿಧ ವಿಚಾರಗಳನ್ನು ಕುರಿತು ಕಾರ್ಯಯೋಜನೆ, ವ್ಯವಸ್ಥಾಪನಾ ಜವಾಬ್ದಾರಿಗಳ ಹಂಚಿಕೆ, ಶರಣ ಸಂಸ್ಕೃತಿ ಪ್ರದರ್ಶನ, ಹಾಗೂ ಯುವಸಂಘಟನೆಗಳ ಭಾಗವಹಿಸುವಿಕೆ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಪ್ರಭುಲಿಂಗ ಮಾಹಾಗಾಂವಕರ್, ಸೂಕ್ತ ನಿಯೋಜನೆಗಳನ್ನು ತಿಳಿಸಿದರು.

ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ ಕೋಟಿಯವರು ಮಾತನಾಡಿ, “ನಗರದ ಎಲ್ಲ ಬಸವಪರ ಸಂಘಟನೆಗಳು ಹಾಗೂ ಯುವಕರು ಈ ಸಂಸ್ಕೃತಿ ಅಭಿಯಾನದಲ್ಲಿ ಉತ್ತಮವಾಗಿ ಭಾಗವಹಿಸಬೇಕು” ಎಂದು ತಿಳಿಸಿದರು.

ಸಭೆಗೆ ಉಪಸ್ಥಿತರಿದ ಗಣ್ಯರು:

ಸುಭಾಷ್ ಬಿಜಾಪುರೆ, ಜಗನ್ನಾಥ ಪಟ್ಟಣಶೆಟ್ಟಿ, ಶರಣು ಕಲಶೆಟ್ಟಿ, ಮಲ್ಲಿನಾಥ ನಾಗನಹಳ್ಳಿ, ರಮೇಶ್ ತಿಪನೂರ, ಸೋಮಶೇಖರ್ ಪಾಟೀಲ, ಶಿವಶರಣಪ್ಪ ದೇಗಾಂವ, ಪತ್ರಕರ್ತ ಶರಣಗೌಡ ಪಾಟೀಲ ಪಾಳಾ, ಸಾವಿತ್ರಿ ಪಲ್ಲಿ,ಬಸಮ್ಮ, ಜಯಶ್ರೀ ಶರಣು ಕಲಶೆಟ್ಟಿ ಹಾಗೂ ಇತರ ಬಸವಪರ ನಾಯಕರು ಉಪಸ್ಥಿತರಿದ್ದರು.

ದೇಗಾಂವ ಅವರು ಧನ್ಯವಾದಗಳನ್ನು ಅರ್ಪಿಸಿದರು. ಸಭೆಯ ನಿರ್ವಹಣೆಯನ್ನು ರಾಜಕುಮಾರ ಕೋಟಿ ಅವರು ನಡೆಸಿದರು.

-