ಶ್ರೀದಂಡಗುಂಡ ಬಸವಣ್ಣನ ಜಾತ್ರಾ ಮಹೋತ್ಸವಕ್ಕೆ ಭಕ್ತರನ್ನು ಆಹ್ವಾನ

ಶ್ರೀದಂಡಗುಂಡ ಬಸವಣ್ಣನ ಜಾತ್ರಾ ಮಹೋತ್ಸವಕ್ಕೆ ಭಕ್ತರನ್ನು ಆಹ್ವಾನ
ಚಿತ್ತಾಪುರ: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಕ್ಷೇತ್ರ ದಂಡಗುಂಡದಲ್ಲಿ ಶ್ರೀ ಬಸವಣ್ಣನ ಜಾತ್ರಾ ಮಹೋತ್ಸವವನ್ನು ಭವ್ಯವಾಗಿ ಹಮ್ಮಿಕೊಳ್ಳಲಾಗಿದೆ. ಈ ಮಹೋತ್ಸವವು ಆಗಸ್ಟ್ 10ರಿಂದ 12ರವರೆಗೆ ಮೂರು ದಿನಗಳ ಕಾಲ ಜರುಗಲಿದೆ.
ಆಗಸ್ಟ್ 10ರಂದು (ರವಿವಾರ) ರಾತ್ರಿ 9 ಗಂಟೆಗೆ ಗಂಗಸ್ಥಳ ಕಾರ್ಯಕ್ರಮ ನಡೆಯಲಿದೆ. ಆಗಸ್ಟ್ 11ರಂದು (ಸೋಮವಾರ) ಸಂಜೆ 6 ಗಂಟೆಗೆ ಭವ್ಯ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಆಗಸ್ಟ್ 12ರಂದು (ಮಂಗಳವಾರ) ರಾತ್ರಿ 8 ಗಂಟೆಗೆ ಕುಸ್ತಿ ಪಟುಗಳಿಂದ ಕೈ ಕುಸ್ತಿ ಕಾರ್ಯಕ್ರಮ ನಡೆಯಲಿದೆ.
ಸಕಲ ಭಕ್ತರು ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬಸವಣ್ಣನ ದರ್ಶನ ಮಾಡಿ ಆಶೀರ್ವಾದ ಪಡೆಯುವಂತೆ ಸಕಲ ಸದ್ಭಕ್ತರ ಪರವಾಗಿ ಅಂಬಾರಾಯ ಎಂ. ಕೋಣೆ ಅವರು ಆಹ್ವಾನ ನೀಡಿದ್ದಾರೆ.
ಚಿತ್ತಾಪುರ ಸುದ್ದಿ – ನಾಗರಾಜ್ ದಂಡಾವತಿ