ಆದರ್ಶ ವೃತ್ತಿ ಜೀವನದ ಸಾಹಿತಿ- ಡಾ. ದಯಾಸಾಗರ- ಸಾಹಿತಿ ಡಾ‌.ಗವಿಸಿದ್ದಪ್ಪ ಪಾಟೀಲ

ಆದರ್ಶ ವೃತ್ತಿ ಜೀವನದ ಸಾಹಿತಿ- ಡಾ. ದಯಾಸಾಗರ- ಸಾಹಿತಿ ಡಾ‌.ಗವಿಸಿದ್ದಪ್ಪ ಪಾಟೀಲ

ಆದರ್ಶ ವೃತ್ತಿ ಜೀವನದ ಸಾಹಿತಿ- ಡಾ. ದಯಾಸಾಗರ- ಸಾಹಿತಿ ಡಾ‌.ಗವಿಸಿದ್ದಪ್ಪ ಪಾಟೀಲ

ಹುಮನಾಬಾದ‌:ಬಂಧಿಖಾನೆಯಲ್ಲಿ ವೃತ್ತಿ ಜೀವನ ಸಾಮಾನ್ಯ ವಾದುದಲ್ಲ.ಅಂತಹ ಜನ ಮಧ್ಯದಲ್ಲಿ ವೃತ್ತಿಯನ್ನು ಪ್ರಾಮಾ ಣಿಕವಾಗಿ ನಡೆಸಿ,ಕವಿ,ಲೇಖಕ, ಬರಹಗಾರರಾಗಿ ಹೊರಹೊಮ್ಮಿದ ಸರಳ ಸಾತ್ವಿಕ ವ್ಯಕ್ತಿ. ಮನೆಗೆದ್ದು ಮಾರು ಗೆದ್ದ ಅಪರೂಪದ ಸಾಹಿತಿ ಡಾ.ಬಸವರಾಜ ದಯಾಸಾಗರ

ಎಂದು ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಅಭಿಮತ ಪಟ್ಟರು.

    ಮಾಣಿಕನಗರದ ಅಂಧ ವಸತಿ ಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಸಾಕ್ಷಿ ಪ್ರತಿಷ್ಠಾನ, ಗೆಲಕೆಯರ ಬಳಗ ಏರ್ಪಡಿಸಿದ ಡಾ.ಬಸವರಾಜ ದಯಾಸಾಗರ ಅವರ ಹುಟ್ಟು ಹಬ್ಬ ಮತ್ತು ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ ಜೇಲರ್ ಆಗಿ ಕುಟುಂಬ,ವೃತ್ತಿಗೂ ಸಮಾಜ , ಸಾಹಿತ್ಯಕ್ಕೂ ಸೇವೆ ಅಮೋಘವೆಂದರು.

  ‌ ‌ಕೆಪಿಸಿಸಿ ರಾಜ್ಯ ಓಬಿಸಿ ಉಪಾಧ್ಯಕ್ಷ ಡಾ.ಸಿದ್ರಾಮ ವಾಘಮಾರೆ ಅವರು ಇರುವಷ್ಟು ದಿನ ಒಳ್ಳೆಯ ಕೆಲಸ ಕಾರ್ಯ ಮಾಡಿದ್ದಾರೆ. ಹೀಗಾಗಿ ಅವರು ಎಲ್ಲಿಯೇ ಹೊಗಲಿ ಅಲ್ಲಿ ಕೆಲಸ ನಿರ್ವಹಿಸಿದವರು.

  ‌‌‌‌‌‌‌ ಚಿಂತಕಿ ಡಾ.ಜಯದೇವಿ ಗಾಯಕವಾಡ ಮಾತನಾಡಿ ಉದ್ಯೋಗ ಮಾಡುತ್ತಲೇ,ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆಬಗಷನೀಯವೆಂದರು.

ಅಧ್ಯಕ್ಷತೆ ವಹಿಸಿದ್ದ ಕಜಾಪ ಅಧ್ಯಕ್ಷ ಶರದಕುಮಾರ ನಾರಾಯಣಪೇಟ್ಕರ್ ದಯಾಸಾಗರ ಅವರು ಎಲ್ಲರಂತೆ ಅವರು ಉದ್ಯೋಗ ಮಾಡಿ ಬಿಟ್ಟರೆ ಅವರನ್ನ ಯಾರು ನೆನೆಸುತ್ತಿರಲಿಲ್ಲ.ಎಲ್ಲರ ಜೊತೆಗೆ ಸಾಹಿತ್ಯ ಜೊತೆ ಒಂದಾಗಿ ಇರುವುದರಿಂದ ಜನಪ್ರಿಯರಾದರು.ಅವರ ಕಾರ್ಯ ಹಚ್ಚ ಹಸಿರೆಂದರು.

 ಸನ್ಮಾನ ಸ್ವೀಕರಿಸಿದ ಡಾ.ಬಸವರಾಜ ದಯಾಸಾಗರ ನಾನು ಅನೇಕ ಕಡೆ ಕೆಲಸ ಮಾಡಿರುವೆ ಹಾಗೇ ಬೀದರ ಮತ್ತು ಹುಮನಾಬಾದ‌ ಸೇವೆ ನಾನು ಮರೆಯುಂತಿಲ್ಲ. ಸಾಹಿತ್ಯ ಪ್ರಕಟ,ಪ್ರೋತ್ಸಾಹ ಇಲ್ಲಿಂದ ಆಗಿದೆ.ನಾನು ಯಾವತ್ತೂ ಈ ನೆಲ ಮರೆಯುವುದಿಲ್ಲ ಎಂದರು.

ಅಂಧ ವಸತಿ ಶಾಲೆಯ ಮಕ್ಕಳು ಪ್ರಾರ್ಥನೆ ಹಾಡಿದರು.ಶಶಿಕಾಂತ ಗಾವಲ್ಕರ ಸ್ವಾಗತಿಸಿದರು ಡಾ.ಸಿದ್ಧಾರ್ಥ ಮಿತ್ರಾ ನಿರೂಪಿಸಿ ವಂದಿಸಿದರು.

ಶಶಿಕಾಂತ ಘವಾಳಕಾರ, ಶಿವು ಪವಾರ,ಸೂರ್ಯಕಾಂತ ಪಾಟೀಲ,ಸಾಕ್ಷಿ ಪಾಟೀಲ, ದಯಾಸಾಗರ ಸಂಗೀತಾ, 

ಪ್ರಶಾಂತ ದಯಾಸಾಗರ,ತುಕಾರಾಂ ನಿವೃತ್ತ ASI ಮೊದಲಾದವರಿದ್ದರು.