ವಿದ್ಯಾನಗರ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಾನಗಲ್ಲ ಶ್ರೀಗಳ ತೊಟ್ಟಿಲು ಕಾರ್ಯಕ್ರಮ

ವಿದ್ಯಾನಗರ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಾನಗಲ್ಲ ಶ್ರೀಗಳ ತೊಟ್ಟಿಲು ಕಾರ್ಯಕ್ರಮ

ವಿದ್ಯಾನಗರ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಾನಗಲ್ಲ ಶ್ರೀಗಳ ತೊಟ್ಟಿಲು ಕಾರ್ಯಕ್ರಮ

ಕಲಬುರಗಿ: ನಗರದ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯಲ್ಲಿರುವ ವಿದ್ಯಾನಗರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಯುತ್ತಿರುವ ಪುರಾಣ ಕಾರ್ಯಕ್ರಮದ ಅಂಗವಾಗಿ ಹಾನಗಲ್ಲ ಶಿವಕುಮಾರ ಮಹಾಶಿವಯೋಗಿಗಳ ತೊಟ್ಟಿಲು ಕಾರ್ಯಕ್ರಮವನ್ನು ಅಕ್ಕ ಮಹಾದೇವಿ ಮಹಿಳಾ ಟ್ರಸ್ಟ್ ಸದಸ್ಯರು ನಡೆಸಿಕೊಟ್ಟರು.

ಪುರಾಣ ಕೇಳಲು ಆಗಮಿಸಿದ್ದ ಭಕ್ತರು ತೊಟ್ಟಿಲು ಕಾರ್ಯಕ್ರಮಕ್ಕೆ ಕಾಣಿಕೆ ನೀಡಿ, ಪ್ರಸಾದ ವ್ಯವಸ್ಥೆ ಮಾಡಿದರು. ಗದ್ದುಗೆ ಮಠದ ಪೂಜ್ಯ ಶ್ರೀ ಚರಲಿಂಗ ಮಹಾಸ್ವಾಮಿಗಳು ತೊಟ್ಟಿಲು ಕಾರ್ಯಕ್ರಮದ ವಿಧಿವಿಧಾನಗಳು ಹಾಗೂ ಸನಾತನ ಧರ್ಮದ ಆಚರಣೆಗಳ ಮಹತ್ವಗಳ ಕುರಿತು ಭಕ್ತರಿಗೆ ಮನಮುಟ್ಟುವಂತೆ ಪುರಾಣ ಪ್ರವಚನ ನೀಡಿದರು. ಅನೀಲಕುಮಾರ ಮಠಪತಿ ಹಾಗೂ ಸೋಮಶೇಖರ ಕಲ್ಯಾಣಿ ಸಂಗೀತ ಸೇವೆ ಸಲ್ಲಿಸಿದರು.

ವೆಲ್‌ಫೇರ್ ಸೊಸೈಟಿಯ ಪದಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಬಡಾವಣೆಯ ನೂರಾರು ಭಕ್ತರು ಪ್ರತಿದಿನ ಸಂಜೆ 6.30ರಿಂದ 8.30ರವರೆಗೆ ನಡೆಯುವ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾನಗಲ್ಲ ಶ್ರೀಗಳ ತತ್ವಸಿದ್ಧಾಂತಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಪುರಾಣದ ಅರ್ಧಭಾಗ ಮುಗಿದಿದ್ದು, ಇನ್ನುಳಿದ ಶ್ರಾವಣ ಮಾಸದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗಳ ಪುರಾಣ ಆಲಿಸಿ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸೇವಾಭಾವದಿಂದ ಹಾನಗಲ್ಲ ಶಿವಯೋಗಿಗಳ ಕೃಪೆಗೆ ಪಾತ್ರರಾಗಬೇಕೆಂದು ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.