ಡಾ.ಶರಣಬಸಪ್ಪ ಅಪ್ಪ ಆರೋಗ್ಯ ವಿಚಾರಿಸಿದ ಮಾಜಿ ಸಂಸದ ಡಾ.ಜಾಧವ್

ಡಾ.ಶರಣಬಸಪ್ಪ ಅಪ್ಪ ಆರೋಗ್ಯ ವಿಚಾರಿಸಿದ ಮಾಜಿ ಸಂಸದ ಡಾ.ಜಾಧವ್
ಕಲಬುರಗಿ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀ ಶರಣಬಸವೇಶ್ವರ ಮಹಾದಾಸೋಹ
ಸಂಸ್ಥಾನ ಮಠದ ಎಂಟನೇ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರನ್ನು ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ನಗರದ ಖಾಸಗಿ ಆಸ್ಪತ್ರೆಗೆ ಜುಲೈ 29ರಂದು ಭೇಟಿ ಮಾಡಿ ಪೂಜ್ಯರು ಶೀಘ್ರದಲ್ಲೇ ಚೇತರಿಸಿಕೊಂಡು ಸಮಸ್ತಭಕ್ತ ಕುಲಕೋಟಿಗೆ ಅಪ್ಪಾಜಿಯವರ ಕೃಪಾಶೀರ್ವಾದ ಮತ್ತು ಮಾರ್ಗದರ್ಶನ ಸಿಗುವಂತಾಗಲು ಶ್ರೀ ಶರಣಬಸವೇಶ್ವರರು ಅವರಿಗೆ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುವುದಾಗಿ ಡಾ. ಜಾಧವ್ ಈ ಸಂದರ್ಭದಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಅಪ್ಪಾಜಿಯವರ ಕುಟುಂಬದವರು ಉಪಸ್ಥಿತರಿದ್ದರು. ಬಿಜೆಪಿಯ ನಾಯಕರಾದ ರವಿ ರಾಜ್ ಕೊರವಿ, ಶಿವಕಾಂತ್ ಮಹಾಜನ್ ಅಶೋಕ್ ಚೌಹಾನ್ ವಿನೋದ್ ಚೌಹಾನ್ ಹಾಗೂ ರಾಘವೇಂದ್ರ ಕುಲಕರ್ಣಿ,ರೋಷನ್ ರಾಥೋಡ್, ಮಾಜಿ ಸಂಸದರ ಜೊತೆಗಿದ್ದರು.