ಜಾತಿ ಪ್ರಮಾಣ ಪತ್ರದಲ್ಲಿ ತಪ್ಪು: ತಹಶೀಲ್ದಾರ್ ಕಚೇರಿ ವಿರುದ್ಧ ದಯಾನಂದ ಎಂ. ಪಾಟೀಲ ತೀವ್ರ ಖಂಡನೆ

ಜಾತಿ ಪ್ರಮಾಣ ಪತ್ರದಲ್ಲಿ ತಪ್ಪು: ತಹಶೀಲ್ದಾರ್ ಕಚೇರಿ ವಿರುದ್ಧ ದಯಾನಂದ ಎಂ. ಪಾಟೀಲ ತೀವ್ರ ಖಂಡನೆ

ದಯಾನಂದ ಎಂ ಪಾಟೀಲ ತೀವ್ರ ಖಂಡನೆ 

 ಜಾತಿ ಪ್ರಮಾಣ ಪತ್ರದ ದಾಖಲೆಗಳಲ್ಲಿ ಜಾತಿ ತಪ್ಪು ನಮೂದಿಸಿದ ಕಲಬುರ್ಗಿ ತಹಶೀಲ್ದಾರ್ ಕಚೇರಿ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಿ

ಕಲಬುರ್ಗಿಯ ತಹಶೀಲ್ದಾರ್ ಕಚೇರಿ ಹಾಗೂ ಸರ್ಕಾರಿ ಅಧಿಕಾರಿಗಳಿಂದ ವೀರಶೈವ ಲಿಂಗಾಯತ ವಿದ್ಯಾರ್ಥಿಗೆ ಜಾತಿ ಪ್ರಮಾಣಪತ್ರದಲ್ಲಿ ಮುಸ್ಲಿಂ ಎಂದು ಬರೆದಿರುವ ಘಟನೆ ಬಹಳ ವಿಷಾದಕರ ಹಾಗೂ ಸಮಾಜದ ಭವಿಷ್ಯವನ್ನೇ ನಾಶ ಮಾಡುವಂತದ್ದು. ಇದು ಕೇವಲ ನಿರ್ಲಕ್ಷ್ಯವಲ್ಲ, ಇದು ಒಂದು ಭಯಾನಕ ಧರ್ಮಾಂತರ ಪ್ರೇರಿತ ರಾಜಕೀಯ ಷಡ್ಯಂತ್ರವಾಗಿದೆ.

ಈ ಘಟನೆಯ ಹಿಂದಿನ ಸತ್ಯವನ್ನು ಹೊರತೆಗೆದು, ನಿಜವಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಹೀಗೆ ಮಕ್ಕಳ ದಾಖಲೆಗಳ ಜಾತಿ ಮಾಹಿತಿಯನ್ನು ಬದಲಾಯಿಸುವುದು ಪೋಷಕರಿಗೆ ತಿಳಿಸದೇ ಅಥವಾ ಶಾಲೆಯ ನಿಖರ ದಾಖಲೆಗಳನ್ನು ಕಡೆಗಣಿಸಿ ಮಾಡಿದರೆ, ಅದು ಮುಂದಿನ ದಿನಗಳಲ್ಲಿ ಧರ್ಮಾಂತರದ ಒಂದು ಭಾಗವೆಂದು ಕಂಡುಬರುತ್ತದೆ.

ಈ ಕುರಿತು ವೀರಶೈವ ಲಿಂಗಾಯತ ಮಹಾ ವೇದಿಕೆಯ ಸ್ಪಷ್ಟ ನಿಲುವು ಹೊಂದಿದ್ದು, ಕಲಬುರಗಿ ನಗರದ ವೀರಶೈವ ಲಿಂಗಾಯತ ಸಮುದಾಯದ ಬಡ ಕುಟುಂಬದ ಮಹಾಂತಪ್ಪ ಕೊತಲಿ ಅವರ ಮಗನ ಜಾತಿ ಪ್ರಮಾಣ ಪತ್ರ ತಿದ್ದುಪಡಿ ಆಗೋವರೆಗೂ ಹಾಗೂ ಇದರ ಹಿಂದಿನ ಶೈಡ್ಯಂತ್ರ ಸಮಾಜಕ್ಕೆ ತಿಳಿಸುವರೆಗೂ ನಮ್ಮ ವೇದಿಕೆಯ ಜೊತೆಗೆ ನಿಲ್ಲುತ್ತೆ ಅನ್ನೋ ಅಭಯವನ್ನು ನೀಡುತ್ತೇವೆ.

ಈ ಪ್ರಕರಣ ಕೇವಲ ಸ್ಥಳೀಯ ಮಟ್ಟದ ತಪ್ಪು ಅಲ್ಲ – ಇದು ಧರ್ಮ ನಾಶ ಮಾಡುವ ಹುನ್ನಾರ ಭಗವಾಗಿದೆ, ಹಾಗೂ ಒಟ್ಟಾರೆ ಸನಾತನ ಹಿಂದೂ ಸಮಾಜವನ್ನು ತುಂಡರಿಸುವ ಯೋಜನೆಯ ಭಾಗವಾಗಿದೆ.

 ಇದರ ಹಿಂದಿರುವ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವ ಮೂಲಕ ಸರ್ಕಾರ ತಮ್ಮ ನೈತಿಕ ಹೊಣೆಗಾರಿಕೆಯನ್ನು ಸಾಬೀತುಪಡಿಸಬೇಕು ಇಲ್ಲವಾದರೆ ಇದರ ಹಿಂದೇ ನೀವೇ ಇದ್ದೀರಿ ಅನ್ನೋ ನಮ್ಮ ಸಂಶಯಕ್ಕೆ ಪುಷ್ಟಿ ಕೊಟ್ಟಂತ್ತಾಗುತ್ತೆ.

ಈ ದೇಶದ ಸಂವಿಧಾನವು ಜಾತಿ ಪ್ರಮಾಣಪತ್ರವನ್ನು ಸರ್ಕಾರದ ದಾಖಲೆಗಳ ಆಧಾರದಲ್ಲಿ ನಿರ್ಣಯಿಸಬೇಕು. ಆದರೆ ಈಗ ನಡೆಯುತ್ತಿರುವದು – ರಾಜಕೀಯ ಪ್ರೇರಿತ ಅಭಿಪ್ರಾಯವನ್ನು ಮಕ್ಕಳ ದಾಖಲೆಗಳ ಮೇಲೆ ಸೇರಿಸಲಾಗುತ್ತಿದೆ.

ಯಾಕೆ ಈ ಹುಡಗನ ಜಾತಿ ಮುಸ್ಲಿಂ ಎಂದು ನಮೂದಿಸಲಾಗಿದೆ?

ಯಾರು ಇದಕ್ಕೆ ಸೂಚನೆ ನೀಡಿದ್ದಾರೆ?

ಸರ್ಕಾರ ಇದನ್ನು ಸೀರಿಯಸ್ ಆಗಿ ತನಿಖೆಗೆ ಒಪ್ಪಿಸಬೇಕು.

ಇಂತಹ ಸಾವಿರಾರು ಪ್ರಕರಣಗಳು ಇನ್ನೂ ರಾಜ್ಯದ ಎಲ್ಲೆಲ್ಲಿ ನಡೆಯುತ್ತಿವೆ ಅನ್ನೋದು ಬಯಲಿಗೆ ಬರಬೇಕು.

ವೀರಶೈವ ಲಿಂಗಾಯತ ಮಹಾ ವೇದಿಕೆಯ ಆಗ್ರಹ

ತಪ್ಪಿತಸ್ಥ ಅಧಿಕಾರಿಗಳನ್ನು ತಕ್ಷಣ ಸೇವೆಯಿಂದ ಅಮಾನತು ಮಾಡಬೇಕು.

ಸರಕಾರ ಈ ಧರ್ಮಾಂತರದ ಸಂಚು ವಿರುದ್ಧ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು.

 ಅನ್ಯಾಯ ಆಗಿರುವ ಪೋಷಕರಿಗೆ ಹಾಗೂ ಸಮುದಾಕ್ಕೆ ನ್ಯಾಯ ದೊರೆಯುವವರೆಗೆ ಈ ಪ್ರಕರಣವನ್ನು ನಾವು ಬಿಡೋದಿಲ್ಲ.

ಈ ಗಂಭೀರ ಪ್ರಕಾರಣಕ್ಕೆ ಸಂಬಂಧ ಪಟ್ಟ ಇಲಾಖೆಯ ಸಚಿವರು ಮುತುವರ್ಜಿ ವಹಿಸಿ ನ್ಯಾಯ ದೊರಕಿಸಿ ಕೊಡಬೇಕು ಇಲ್ಲಾಂದ್ರೆ ಮುಂದಿನ ದಿನಗಳಲ್ಲಿ ನಮ್ಮ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಪ್ರಶಾಂತ ಕಲ್ಲೂರು ಅಣ್ಣಾ ಅವರ ನೇತೃತ್ವದಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಮೊದಲೇ ಜಾತಿ ಜನಗಣತಿಯ ಸಂಚಿನಿಂದ್ ಸಮುದಾಯ ಹೊರ ಬಂದಿಲ್ಲ ಅದರ ಮೇಲೆ ಈ ಇತರ ದಾಳಿ ವೀರಶೈವ ಲಿಂಗಾಯತ ಸಮಾಜ ಸಹಿಸೋದಿಲ್ಲ. 

ಇನ್ನಾದರೂ ಸಮುದಾಯ ಒಂದಾಗಿ ಇದರ ಬಗ್ಗೆ ಹೋರಾಟ ಮಾಡಬೇಕೆಂದು ಮನವಿ ಮಾಡಿಕೊಂಡರು.

ವೀರಶೈವ ಲಿಂಗಾಯತ ಸಮುದಾಯದ ಪರವಾಗಿ ವೀರಶೈವ ಲಿಂಗಾಯತ ಮಹಾ ವೇದಿಕೆ ಸದಾ   ಮುಂಚುಣಿಯಲ್ಲಿ ನಿಲ್ಲುತ್ತೆ! 

ದಯಾನಂದ ಎಂ ಪಾಟೀಲ

ಅಧ್ಯಕ್ಷರು, ವೀರಶೈವ ಲಿಂಗಾಯತ ಮಹಾ ವೇದಿಕೆ ಕಲಬುರಗಿ