ನೆಲಮಂಗಲದ ದೇವಾಂಗ ಶಾಖಾ ಮಠದಲ್ಲಿ ನೇಕಾರ ಸಮುದಾಯದ ಒಕ್ಕೂಟದ ಸಭೆ – ಶರಣ ದಾಸಿಮಯ್ಯ ತತ್ವದ ಜಾಗೃತಿ ಕೋರಿಕೆ

ನೆಲಮಂಗಲದ ದೇವಾಂಗ ಶಾಖಾ ಮಠದಲ್ಲಿ ನೇಕಾರ ಸಮುದಾಯದ ಒಕ್ಕೂಟದ ಸಭೆ – ಶರಣ ದಾಸಿಮಯ್ಯ ತತ್ವದ ಜಾಗೃತಿ ಕೋರಿಕೆ
ನೆಲಮಂಗಲ: ನಾಳೆ ನೆಲಮಂಗಲದಲ್ಲಿರುವ ದೇವಾಂಗ ಶಾಖಾ ಮಠದಲ್ಲಿ ನೇಕಾರ ಸಮುದಾಯದ ಒಕ್ಕೂಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ನೇಕಾರ ಸಮುದಾಯದ ಮೂಲ ಸಪ್ತ ಕುಲಗುರುಗಳು ಹಾಗೂ ಶರಣ ದಾಸಿಮಯ್ಯನವರ ತತ್ವ, ಸಿದ್ಧಾಂತಗಳಿಗೆ ರಾಜ್ಯದಾದ್ಯಂತ ಜಾಗೃತಿ ಮೂಡಿಸುವ ಉದ್ದೇಶದಿಂದ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಲಾಗಿದೆ.
ಈ ಕುರಿತು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಜಾಗ್ರತಿ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ನ್ಯಾಯವಾದಿ ಜೆ.ಎಸ್. ವಿನೋದ್ ಕುಮಾರ ಅವರು ಮಾತನಾಡಿ – “ನೇಕಾರ ಮಠಾಧೀಶರು, ಪೀಠಾಧೀಶರು ಹಾಗೂ ಸ್ವಾಮಿಗಳನ್ನು ಒಳಗೊಂಡ ಒಕ್ಕೂಟವನ್ನು ರಚಿಸಬೇಕು. ವಚನ ಸಂಸ್ಕೃತಿ ಅಭಿಯಾನ ಹಮ್ಮಿಕೊಂಡು, ಸಮುದಾಯದ ಅಸ್ಮಿತೆಯನ್ನು ಜಾಗೃತಗೊಳಿಸಬೇಕು. ಜಾತಿಗಣತಿಗೆ ಮಾರ್ಗದರ್ಶನ ನೀಡುವುದು ಜೊತೆಗೆ ಧರ್ಮದ ಅರಿವನ್ನು ಹೆಚ್ಚಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ, ಈ ಬೇಡಿಕೆಗೆ ಸಮ್ಮತಿ ಸಿಗದಿದ್ದಲ್ಲಿ, ಪ್ರತ್ಯೇಕ ಕ.ಕ. ನೇಕಾರ ಮಹಾಸಭೆ* ಹಾಗೂ ನೇಕಾರ ಮಹಾ ಒಕ್ಕೂಟ ಸ್ಥಾಪಿಸುವ ಕುರಿತು ಗಂಭೀರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.