ಮಾಜಿ ಎಂಎಲ್ಸಿ ಅಮರನಾಥ ಪಾಟೀಲ್ ಅವರಿಂದ ಗುರುಪೂರ್ಣಿಮೆ - 2025

ಮಾಜಿ ಎಂಎಲ್ಸಿ ಅಮರನಾಥ ಪಾಟೀಲ್ ಅವರಿಂದ ಗುರುಪೂರ್ಣಿಮೆ - 2025

ಗುರು ಪೂರ್ಣಿಮೆ ಉತ್ಸವ–2025: ಕಲಬುರಗಿಯಲ್ಲಿ ಅದ್ದೂರಿ 'ಗುರುವಂದನೆ' ಕಾರ್ಯಕ್ರಮ

ಕಲಬುರಗಿ, ಜುಲೈ 11 – ಕಲಬುರಗಿ ನಗರದ ಶ್ರೀ ಸಿದ್ಧಾರೂಢ ಕಲ್ಯಾಣ ಮಂಟಪದಲ್ಲಿ ಇಂದಿನ ಗುರು ಪೂರ್ಣಿಮೆ ಉತ್ಸವ-2025 ಪ್ರಯುಕ್ತ ‘ಗುರುವಂದನೆ’ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿ ಪೂರ್ವಕವಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮವನ್ನು ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅಮರನಾಥ ಪಾಟೀಲ ಮಹಾಗಾಂವ ಅವರು ಉದ್ಘಾಟಿಸಿ ಮಾತನಾಡಿದರು. ಅವರು ಗುರುಗಳ ಮಹತ್ವದ ಬಗ್ಗೆ ಹಂಚಿಕೊಂಡು, “ಗುರುವೆಂದರೆ ಜ್ಞಾನ, ಶಿಸ್ತಿನ ಬೆಳಕನ್ನು ನೀಡುವ ದೈವ. ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಮೂಲ್ಯ” ಎಂದು ಭಾವೋದ್ಗಾರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಗುರುಮಾನ್ಯರಿಗೆ ಸನ್ಮಾನವೂ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸೊನ್ನ ವಿರಕ್ತ ಮಠದ ಪೂಜ್ಯ ಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳು,ಯಳಸಂಗಿ ಶ್ರೀ ಸಿದ್ಧಾರೂಢ ಮಠದ ಪೂಜ್ಯ ಶ್ರೀ ಪರಮಾನಂದ ಮಹಾಸ್ವಾಮಿಗಳು,ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ದಯಾನಂದ್ ಅಗಸರ,ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಶ್ರೀಧರ ರತ್ನಗಿರಿ,ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಸಂಜೀವಕುಮಾರ್ ಪಾಟೀಲ ,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಶ್ರೀ ಮಹೇಶ್ ಬಸರಕೋಡ,ಡಾ. ಆನಂದ ಸಿದ್ಧಾಮಣಿ , ವಿವಿಧ ಶಾಲೆಗಳ ಹಿರಿಯ ಶಿಕ್ಷಕರು, ಸಾರ್ವಜನಿಕರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳು, ಭಕ್ತಿಗೀತೆಗಳು ಹಾಗೂ ಗುರುಗಳಿಗೆ ನಮನಗಳು ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮನೋರಂಜನೆ ಮತ್ತು ಶ್ರದ್ಧೆಯ ಹೂಬಿಟ್ಟವು.

KKP ನ್ಯೂಸ್, ಕಲಬುರಗಿ