ಎನ್.ರವಿಕುಮಾರ ವಿರುದ್ಧ ಕ್ರಮಕ್ಕೆ ಚಂದಪ್ಪ ಸೇರಿ ಆಗ್ರಹ.

ಎನ್.ರವಿಕುಮಾರ ವಿರುದ್ಧ ಕ್ರಮಕ್ಕೆ ಚಂದಪ್ಪ ಸೇರಿ ಆಗ್ರಹ.
ಶಹಪುರ : ವಿಧಾನ ಪರಿಷತ್ ಸದಸ್ಯರು ಹಾಗೂ ಬಿಜೆಪಿಯ ಮುಖಂಡರಾದ ಎನ್,ರವಿಕುಮಾರ ಎಲ್ಲರಿಗೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ಚಂದಪ್ಪ ಸೇರಿ ಆಗ್ರಹಿಸಿದ್ದಾರೆ.
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಎಷ್ಟರಮಟ್ಟಿಗೆ ಸರಿ,ಇವರಿಗೆ ಮಾತನಾಡುವ ನೈತಿಕ ಹಕ್ಕಿಲ್ಲ,ಅವರು ಪ್ರಚಾರಕ್ಕಾಗಿ ಹಾಗೂ ಬಿಜೆಪಿಯ ಹಿರಿಯ ಮುಖಂಡರ ಓಲೈಕೆಗಾಗಿ ಮಾತನಾಡುತ್ತಿದ್ದಾರೆ.ಇದು ನಾಚಿಕೆಗೇಡಿನ ಸಂಗತಿ ಎಂದು ಖಾರವಾಗಿ ನುಡಿದರು.
ಅವರ ದ್ವಂದ್ವ ಮಾತಿನಿಂದ ಆಶ್ಚರ್ಯ ಹಾಗೂ ಅಸಹನೀಯವಾಗಿವೆ,ಅಲ್ಲದೆ ಅವರು ಆಡಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ,ಅವರ ಹೇಳಿಕೆಯಿಂದ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಸ್ತ್ರೀಯರ ಘನತೆಗೆ ಧಕ್ಕೆ ತರುವಂತ ಪರಿಸ್ಥಿತಿ ಉಲ್ಬಣವಾಗುತ್ತಿದೆ.ಇನ್ನೊಮ್ಮೆ
ಇಂತಹ ಹೇಳಿಕೆಗಳು ನೀಡದಂತೆ ಆಸ್ಪದ ಕೊಡಬಾರದು ಎಂದು ಈಮೂಲಕ ಎಚ್ಚರಿಕೆ ನೀಡಿದ್ದಾರೆ.