ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಹಜರತ ಖಾಜಾ ಬಂದನವಾಜ್ (ರ.ಅ) ದರ್ಗಾ ಭೇಟಿ

ಕಲಬುರ್ಗಿ : ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಶುಕ್ರವಾರ ಹಜರತ್ ಖಾಜಾ ಬಂದನವಾಜ್ (ರ.ಅ) ದರ್ಗಾ ದರ್ಶನ ಪಡೆದು ಸಜ್ಜಾದಾ ನಶೀನ ಅವರೊಂದಿಗೆ ಜುಮಾ ನಮಾಜ ಮಾಡಿದರು. ನಮಾಜಿನ ಬಳಿಕ ಅವರು ಗುಂಬದ್ ಮುಬಾರಕ್ಗೆ ಭೇಟಿ ನೀಡಿ, ಪುಷ್ಪಾರ್ಚನೆ ಸಲ್ಲಿಸಿದರು ಹಾಗೂ ಫಾತಿಹಾ ಖುವಾನಿ ನೆರವೇರಿಸಿತು. 

ನಂತರ, ಸಜ್ಜಾದಾ ನಶೀನ್ ಹಾಫಿಜ್ ಸಯ್ಯದ್ ಮುಹಮ್ಮದ್ ಅಲಿ ಅಲ್-ಹುಸೈನೀ ಅವರು ಯು.ಟಿ. ಖಾದರ್ ಅವರಿಗೆ ಸನ್ಮಾನ ಮಾಡಿ, ಪವಿತ್ರ ತಬರುಕ್ಕಾತ್ (ಮಂಗಳ ವಸ್ತುಗಳು) ನೀಡಿದರು. ನಂತರ ದರ್ಗಾ ಶರೀಫ್‌ನ ಸಂಪೂರ್ಣ ಪವಿತ್ರ ದರ್ಶನ (ಜಿಯಾರತ್) ಮಾಡಿಸಿದರು.

"ಇಂದು ನನಗೆ ಹಜರತ್ ಖಾಜಾ ಬಂದನವಾಜ್ (ರ.ಅ) ದರ್ಗಾ ಶರೀಫ್‌ಗೆ ಭೇಟಿ ನೀಡುವ ಸೌಭಾಗ್ಯ ಸಿಕ್ಕಿದೆ. ಬಡಿ ದೇ಼ವಡಿಯಲ್ಲಿ ಸಜ್ಜಾದಾ ನಶೀನ್ ಹಾಫಿಜ್ ಸಯ್ಯದ್ ಮುಹಮ್ಮದ್ ಅಲಿ ಅಲ್-ಹುಸೈನೀ ಮತ್ತು ಅವರ ತಮ್ಮ ಡಾ. ಸಯ್ಯದ್ ಮುಸ್ತಫಾ ಅಲ್-ಹುಸೈನೀ ಅವರನ್ನು ಭೇಟಿ ಮಾಡಿದೆ. ಇಲ್ಲಿ ಪಡೆದ ದುವೆಗಳೊಂದಿಗೆ ನಾನು ಹೊರಡುತ್ತಿದ್ದೇನೆ ಎಂದರು. 

ಈ ಸಂದರ್ಭದಲ್ಲಿ ಜನಾಬ್ ಸಯ್ಯದ್ ಶಾಹ್ ತಕಿ ಉಲ್ಲಾ ಹುಸೈನೀ, ಜನಾಬ್ ಸಯ್ಯದ್ ಮುರ್ತಝಾ ಹುಸೈನೀ, ಜನಾಬ್ ಸಯ್ಯದ್ ಆಕಿಬ್ ಹುಸೈನೀ, ಜನಾಬ್ ಆದಿಲ್ ಸುಲೇಮಾನ್ ಸೇಠ್, ಜನಾಬ್ ಶಫೀಕ್ ಅಹ್ಮದ್ (ಶಬ್ಬು) ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಕೂಡ ಉಪಸ್ಥಿತರಿದ್ದರು.