ಕ್ರತಿ ಮದರಗಾಂವಕರ್ ಅವರಿಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ, ಸನ್ಮಾನಿಸಿ ಗೌರವ

ಕ್ರತಿ ಮದರಗಾಂವಕರ್ ಅವರಿಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ, ಸನ್ಮಾನಿಸಿ ಗೌರವ
ಕಲಬುರಗಿ: ಹತ್ತನೇ ತರಗತಿಯಲ್ಲಿ ಶೇ.97.28% ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ ಕು. ಕ್ರತಿ ಕಲ್ಯಾಣರಾವ ಮದರಗಾಂವಕರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಂಘಟನೆಯಿಂದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಲಭಿಸಿದೆ.
ಈ ಹಿನ್ನೆಲೆಯಲ್ಲಿ, ಶ್ರಮಜೀವಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಮಾಣಿಕ ಭೂರೆ ಮತ್ತು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುನಾಥ ಗಡ್ಡೆ ಅವರು ಕ್ರತಿಯವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಧನರಾಜ ಡಿ. ರಾಜೋಳೆ,ಸೂರ್ಯಕಾಂತ್ ಮಡುಕಂಟಿ,ವಿಜಯ್ ಕುಮಾರ್ ಪಾಟೀಲ್, ಹಿರಿಯ ಸಾಹಿತಿಗಳು, ಬಸವೇಶ್ವರ ಶಾಲೆಯ ನಿವೃತ್ತ ಮುಖ್ಯಗುರು ನೈಮೋದಿನ್ ಚಾಬೂಕು, ಪತ್ರಕರ್ತರು ಮತ್ತು ಬೇಲೂರು ಸ್ವಾಮೀಜಿ ಉಪಸ್ಥಿತರಿದ್ದರು.