ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ.

ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ.
ಯಾದಗಿರಿ:- ಇಂದು ಕರ್ನಾಟಕ ರಾಜ್ಯ ರೈತ ಸಂಘ ಯಾದಗಿರಿ ಜಿಲ್ಲೆಯ ವತಿಯಿಂದ ಜಿಲ್ಲೆಯಲ್ಲಿ ಹಾಲಿ ಕಲ್ಲು ಮಳೆಗಯಿಂದ ಬೆಳೆಗಳು ಹಾಳಾಗಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು, ಶುಗರ್ ಕಂಪನಿಯಲ್ಲಿ ರೈತರಿಗೆ ಬಾಕಿ ಇರುವ ಎಲ್ಲಾ ಹಣವನ್ನು ಶೀಘ್ರದಲ್ಲೇ ರೈತರ ಖಾತೆಗೆ ಜಮಾವಣೆ ಮಾಡಬೇಕು, ಯಾದಗಿರಿ ಜಿಲ್ಲೆಯಲ್ಲಿ ವಿದ್ಯುತ್ ಪರಿಕರಗಳು ಹಳೆಯದಾಗಿದ್ದು ಇದರಿಂದ ರೈತರಿಗೆ ಸಮರ್ಪ ವಿದ್ಯುತ್ ಸಂಪರ್ಕವಾಗುತ್ತಿಲ್ಲ ಎಲ್ಲಾ ಹಳೆಯ ಪರಿಕರಗಳನ್ನು ಶೀಘ್ರದಲ್ಲೇ ನವೀಕರಿಸಬೇಕು ಮತ್ತು ರೈತರಿಗೆ ಹಗಲಿನ ವೇಳೆಯಲ್ಲಿ ವಿದ್ಯುತ್ ನೀಡಬೇಕು, ಕಡೇಚೂರ್ ಬಾಡಿಯಾಳ ಕಂಪನಿಗಳಲ್ಲಿ ಆಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಿ ಭೂಮಿ ನೀಡಿದ ರೈತ ಕುಟುಂಬಕ್ಕೆ ಉದ್ಯೋಗವನ್ನು ನೀಡಬೇಕು, ರೈತರ ಬೆಳೆ ಸಮೀಕ್ಷೆಯನ್ನು ಪಾರದರ್ಶಕವಾಗಿ ಮಾಡಬೇಕು, ಮತ್ತು ರೈತರ ಜಮೀನುಗಳ ಮಣ್ಣು ಪರೀಕ್ಷೆಯನ್ನು ಮಾಡಿ ರೈತರಿಗೆ ಯಾವ ಬೆಳೆಯನ್ನು ಬೆಳೆಯಬೇಕೆಂದು ಸೂಕ್ತ ಮಾಹಿತಿಗಳನ್ನು ನೀಡಬೇಕು, ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಿರಣ ಅಂಗಡಿ,ಹೋಟೆಲ್, ಭೀಡಾ ಅಂಗಡಿಗಳಲ್ಲಿ ರಾಜ್ಯ ರೋಷವಾಗಿ ಮಧ್ಯಪಾನವನ್ನು ಮಾಡುತ್ತಿದ್ದಾರೆ ಎಂದು ಮನವಿಯನ್ನು ಸಲ್ಲಿಸಲಾಯಿತು ಈ ಒಂದು ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ಯಕ್ಷಿoತಿ, ರಾಜ್ಯ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ಸತ್ಯಂ ಪೆಟ್, ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಶರಣು ಮಂದಾರವಾಡ, ಜಿಲ್ಲಾ ಕಾರ್ಯದರ್ಶಿ ಹಣಮಂತ ಕೊಂಗಂಡಿ, ಗುರುಮಿಟ್ಕಲ್ ತಾಲೂಕ ಅಧ್ಯಕ್ಷರಾದ ಭೀಮರಾಯ, ಯಾದಗಿರಿ ತಾಲೂಕ ಅಧ್ಯಕ್ಷರಾದ ಬಾಲಾಜಿ, ವಡಗೇರ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ್, ಶಹಾಪುರ, ಸುರಪುರ, ಹುಣಸಗಿ ತಾಲೂಕ ಅಧ್ಯಕ್ಷರುಗಳು ಮತ್ತು ರೈತ ಸಂಘದ ವಿವಿಧ ಮುಖಂಡರು ಈ ಒಂದು ಸಂದರ್ಭದಲ್ಲಿ ಹಾಜರಿದ್ದರು.