ಸರಕಾರಿ ಹುದ್ದೆಗಳ ಭರ್ತಿ ಬಿಟ್ಟು ಉದ್ಯೋಗ ಮೇಳ ಹಿಡಿದ ಸರಕಾರ ಶಿವ ಅಷ್ಠಗಿ ಲೇವಡಿ

ಸರಕಾರಿ ಹುದ್ದೆಗಳ ಭರ್ತಿ ಬಿಟ್ಟು ಉದ್ಯೋಗ ಮೇಳ ಹಿಡಿದ ಸರಕಾರ ಶಿವ ಅಷ್ಠಗಿ ಲೇವಡಿ

ಸರಕಾರಿ ಹುದ್ದೆಗಳ ಭರ್ತಿ ಬಿಟ್ಟು ಉದ್ಯೋಗ ಮೇಳ ಹಿಡಿದ ಸರಕಾರ ಶಿವ ಅಷ್ಠಗಿ ಲೇವಡಿ

ರಾಜ್ಯದಲ್ಲಿ ಸಾವಿರಾರು ಸರಕಾರಿ ಹುದ್ದೆಗಳಿದ್ದು ಅವುಗಳನ್ನು ಭರ್ತಿ ಮಾಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಖಾಸಗಿ ಕಂಪನಿಗಳನ್ನು ಆಹ್ವಾನಿಸಿ ಉದ್ಯೋಗ ಮೇಳಗಳನ್ನು ಮಾಡುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ, ಯುವ ಮುಖಂಡ ಶಿವ ಅಷ್ಠಗಿ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ಮೂಲಕ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಲಕ್ಷಕ್ಕೂ ಹೆಚ್ಚು ಸರಕಾರಿ ಹುದ್ದೆಗಳು ಖಾಲಿಯಿದ್ದು, ಅವುಗಳನ್ನು ಭರ್ತಿ ಮಾಡಲು ಸರಕಾರ ಕ್ರಮ ಕೈಗೊಳ್ಳದೆ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ಖಾಸಾಗಿ ಕಾಲೇಜುಗಳು ಕ್ಯಾಂಪಸ್‌ ಸಂದರ್ಶನಗಳು ಏರ್ಪಡಿಸುವ ರೀತಿಯಲ್ಲಿ ಸರ್ಕಾರ ಉದ್ಯೋಗ ಮೇಳಗಳನ್ನು ಮಾಡುತ್ತಿರುವುದು ಒಂದು ರೀತಿಯಲ್ಲಿ ನಿರುದ್ಯೋಗಿಗಳ ಮುಗಿದೆ ತುಪ್ಪ ಸೇರಿದಂತೆ ಆಗಿದೆ.

ರಾಜ್ಯದಲ್ಲಿ ಲಕ್ಷಾಂತರ ಬಡ-ಪ್ರತಿಭಾವಂತ ನಿರುದ್ಯೋಗ ಪದವೀಧರರಿದ್ದು ಸರಕಾರಿ ಹುದ್ದೆಗಳಿಗಾಗಿ ವರ್ಷಾನುಗಟ್ಟಲೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಭರ್ತಿ ಮಾಡಿಕೊಳ್ಳಬೇಕಾದ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ನಿರುದ್ಯೋಗಿಗಳ ಬಾಳಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಸುಮಾರು ಒಂದು ಲಕ್ಷ ಉದ್ಯೋಗ ಸಿಗಲಿದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹೇಳಿಕೆ ಕೊಟ್ಟಿದ್ದರು ಆದರೆ ನಿನ್ನೆ ನಗರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ೧೦ ಸಾವಿರ ನಿರುದ್ಯೋಗಿಗಳು ಭಾಗವಹಿಸಿ ಅದರಲ್ಲಿ ಕೇವಲ ೧೨೩೫ ಜನರಿಗೆ ಮಾತ್ರ ಆಫರ್ ಲೆಟರ್ ಸಿಕ್ಕಿದೆ, ೪೪೪೮ ಜನರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಇದೊಂದು ತರ ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ ಎಂದು ಶಿವ ಅಷ್ಠಗಿ ಹೇಳಿದ್ದಾರೆ.

ರಾಜ್ಯ ಸರ್ಕಾರದ ಬಳಿ ಉಚಿತ ಯೋಜನೆಗಳಿಗೆ ಹಣ ಒದಗಿಸಲು ರಾಜ್ಯದ ಖಜಾನೆ ಖಾಲಿ ಮಾಡಿ ಎಸ್‌ಸಿ ಎಸ್‌ಟಿಗಳ ಹಣವನ್ನು ಬಿಡುತ್ತಿಲ ಇನ್ನೂ ಪೂರ್ಣಪ್ರಮಾಣದಲ್ಲಿ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಬಳಿ ದುಡ್ಡಿಲ್ಲ, ಅದಕ್ಕಾಗಿಯೇ ರಾಜ್ಯದ ಕಡೆಗಳಲ್ಲಿಯೂ ಉದ್ಯೋಗ ಮೇಳ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ ಎಂದರು.