ಅಧ್ಯಕ್ಷರ ಆರೋಗ್ಯಕ್ಕಾಗಿ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ :...

ಅಧ್ಯಕ್ಷರ ಆರೋಗ್ಯಕ್ಕಾಗಿ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ :...

ಅಧ್ಯಕ್ಷರ ಆರೋಗ್ಯಕ್ಕಾಗಿ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ :... 

ಶಹಾಬಾದ :- ಬಿಜೆಪಿ ಶಹಾಬಾದ ಮಂಡಲದ ಅಧ್ಯಕ್ಷ ರಾದ ನಿಂಗಪ್ಪ ಹುಳುಗೋಳಕರ ರವರು ಅನಾರೋಗ್ಯ ದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು

ಜಗದಂಬಾ ಮಂದಿರದಲ್ಲಿ ಶಹಾಬಾದ ಮಂಡಲ ಅಧ್ಯಕ್ಷರಾದ ನಿಂಗಪ್ಪ ಹುಳಗೊಳಕರ ಭಾವಚಿತ್ರ ಇಡಿದು, ಅವರು 

ಕಾಯಿಲೆಯಿಂದ ಬೇಗ ಚೇತರಿಸಿಕೊಳ್ಳಲಿ ಮತ್ತು ಆದಷ್ಟು ಬೇಗ ಗುಣಮುಖರಾಗಿ ಜನ ಸೇವೆ ಸಲ್ಲಿಸುವಂತಾಗಲಿ ಎಂದು ಜಗನ್ಮಾತೆಗೆ ಅಭಿಷೇಕ ಮಾಡಿ, ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲಾಯಿತು. 

ಪ್ರಧಾನ ಕಾರ್ಯದರ್ಶಿ ದೇವದಾಸ ಜಾಧವ ಮಾತನಾಡಿ, ಅಧ್ಯಕ್ಷ ನಿಂಗಪ್ಪ ಹುಳುಗೋಳಕರ ರವರು ಸರ್ವಧರ್ಮ ದವರಲ್ಲಿ ಸಮಾನತ ಕಾಣುವ ವ್ಯಕ್ತಿಯಾಗಿದ್ದಾರೆ, ಪಕ್ಷದ ಸಂಘಟನೆಗೆ ಹಗಲಿರುಳು ಶ್ರಮಿಸಿ ಕೊಡುಗೆ ನೀಡಿದ್ದಾರೆ ಅವರ ಆರೋಗ್ಯದಲ್ಲಿ ಬೇಗ ಚೇತರಿಸಿಕೊಂಡು ಮತ್ತಷ್ಟು ಸೇವೆ ಸಲ್ಲಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.

ಈ ಸಂಧರ್ಭದಲ್ಲಿ ದೇವದಾಸ ಜಾಧವ, ನಾರಾಯಣ ಕಂದಕೂರ, ಕಾಶಣ್ಣ ಚೆನ್ನೂರ, ಕನಕಪ್ಪ ದಂಡಗುಲಕರ, ಭಾನುದಾಸ ತುರೆ, ಬಸವರಾಜ ಬಿರಾದಾರ, ಯಲ್ಲಪ್ಪ ದಂಡಗುಲಕರ, ರಾಮ ಕುಸಾಳೆ, ಅಮರ ಕೋರೆ, ಬಸವರಾಜ ಹಡಪದ, ಶ್ರೀನಿವಾಸ ದೇವಕರ, ಜ್ಯೋತಿ ಶರ್ಮ, ನಂದಾ ಗುಡೂರ, ಪದ್ಮಾ ಕಟಗೆ, ಸನ್ನಿಧಿ ಕುಲಕರ್ಣಿ, ಅನುಪಮಾ ಜಗತಾಪ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.