ಕಮಲಾನಗರದಿಂದ ಬ್ರಹಾಣಪೂರವರೆಗೆ 16ನೇ ವರ್ಷದ ಪಾದಯಾತ್ರೆ

ಕಮಲಾನಗರದಿಂದ ಬ್ರಹಾಣಪೂರವರೆಗೆ 16ನೇ ವರ್ಷದ ಪಾದಯಾತ್ರೆ
ಮಹಾರಾಷ್ಟ್ರ ರಾಜ್ಯದ ಅಕ್ಕಲಕೋಟ ತಾಲೂಕಿನ ಬ್ರಹಾಣಪೂರ ಗ್ರಾಮದ ಶ್ರೀ ಅನಂತ ಚೈತನ್ಯ ಸಿದ್ದಯ್ಯಯಪ್ಪ ಮಹಾರಾಜರ ದರ್ಶನಕ್ಕಾಗಿ ಕಲಬುರಗಿ ಜಿಲ್ಲೆಯ ಕಮಲಾನಗರದಿಂದ ಭಕ್ತಾದಿಗಳು 16ನೇ ವರ್ಷದ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.
ಈ ಪಾದಯಾತ್ರೆಯಲ್ಲಿ ಕಮಲಾನಗರದ 50 ಕ್ಕು ಹೆಚ್ಚಿನ ಭಕ್ತಾದಿಗಳು ಬಲಗೊಂಡಿದ್ದಾರೆ , ಗಂಗಪ್ಪಗೌಡ, ಚಂದ್ರಕಾಂತ್ ಬಿರಾದರ್, ಶಿವಕುಮಾರ ಭೀಮಶ, ನಾಗೇಂದ್ರ, ವೀರಭದ್ರಪ್ಪ, ಸಿದ್ದರಾಮಪ್ಪ, ಭೀಮಶ್ಯಾ, ಅಪ್ಪರಾಯು, ನೀಲಕಂಠ ಬಿ, ಶರಣಪ್ಪ ವಿ, ಬಸವರಾಜ್, ರಾಜಕುಮಾರ್ ಕೆ, ಮತ್ತು ಗಣಪತಿ ಪಾಟೀಲ್ ಭಾಗವಹಿಸಿದ್ದಾರೆ.
ಭಕ್ತಿಯಿಂದ, ಶ್ರದ್ಧೆಯಿಂದ ಶ್ರೀ ಸಿದ್ದಯ್ಯ ಮಹಾರಾಜರ ದರ್ಶನ ಪಡೆಯಲು ಈ ಪಾದಯಾತ್ರೆ ಸಾಂಪ್ರದಾಯಿಕ ಭಕ್ತಿಧಾರೆಯ ಪ್ರತೀಕವಾಗಿದೆ. ಭಕ್ತರ ಉತ್ಸಾಹ ಮತ್ತು ಸಹನೆ ಈ ಯಾತ್ರೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಈ ಸಂದರ್ಭದಲ್ಲಿ ಭಕ್ತಾದಿಗಳು ಪರಸ್ಪರ ಸಹಕಾರದಿಂದ, ನಂಬಿಕೆ ಮತ್ತು ಶ್ರದ್ಧೆಯಿಂದ ಪಾದಯಾತ್ರೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.