ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಕೈಗೊಂಡಿದೆ-ಸಿಂಪಿ
ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಕೈಗೊಂಡಿದೆ-ಸಿಂಪಿ
ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಸತ್ಯಂ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಕಲ್ಬುರ್ಗಿ ಇವರ ಸಂಯುಕ್ತಾಶ್ರಯದಲ್ಲಿ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಬಹುಮಾನ ವಿತರಣಾ ಸಮಾರಂಭ ನಗರದ ಸತ್ಯಂ ಪಿಯು ಕಾಲೇಜಿನಲ್ಲಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ವೀರಭದ್ರ ಸಿಂಪಿಯವರು ಕನ್ನಡ ಭಾಷೆ, ನಾಡು, ನುಡಿಯನ್ನು ಪ್ರತಿಯೊಬ್ಬ ಕನ್ನಡಿಗರು ಪ್ರೀತಿಸಬೇಕು ಮತ್ತು ಗೌರವಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ ವೀರಭದ್ರ ಸಿಂಪಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗುರೂಜಿ ಪದವಿ ಮಹಾ ವಿದ್ಯಾಲಯದ ಅಧ್ಯಕ್ಷರಾದ ಕಲ್ಯಾಣರಾವ ಶೀಲವಂತ ಅವರು ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡಬೇಕು ಮೊಬೈಲ್ ಹಿಡಿದು ಸಮಯ ಹಾಳು ಮಾಡ್ಕೋಬೇಡಿ ಅದನ್ನು ಬಿಟ್ಟುಓದಿ ಜ್ಞಾನವನ್ನು ಸಂಗ್ರಹ ಮಾಡಿಕೊಳ್ಳಬೇಕು ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡ ಸತತ ಅಭ್ಯಾಸದ ಕಡೆ ಗಮನ ಕೊಡಬೇಕೆಂದು ಕಲ್ಯಾಣರಾವ ಶೀಲವಂತ ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ಚಿ ಸಿ ನಿಂಗಣ್ಣ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರು ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ ಎಚ್. ನಿರಗುಡಿಯವರು ಅತಿಥಿಗಳಿಗೆ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು ಕನ್ನಡ ಪುಸ್ತಕ ಪ್ರಾಧಿಕಾರ ನಾಡಿನಾದ್ಯಂತ ಕನ್ನಡವನ್ನು ಪಸರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಜೊತೆಗೆ ವಿದ್ಯಾರ್ಥಿಗಳನ್ನು ಕನ್ನಡ ಭಾಷೆಯ ಅರಿವು ಮೂಡಿಸುವ ದೊಡ್ಡ ಜವಾಬ್ದಾರಿ ಹೊಂದಿದೆ ಎಂದು ಪ್ರಾಸ್ತಾವಿಕದಲ್ಲಿ ಹೇಳಿದರು. ಪ್ರಥಮ ಬಹುಮಾನ ಅಂಬಿಕಾ ಶರಣಪ್ಪ ಸತ್ಯಂ ಪಿಯು ಕಾಲೇಜು ಕಲಬುರ್ಗಿ ಹಾಗೂ ಧೂಳಪ್ಪ ಪೂಜಾರಿ ಆರ್ ಜೆ ಪಿ ಯು ಕಾಲೇಜ್ ಕಲಬುರ್ಗಿ
ದ್ವಿತೀಯ ಬಹುಮಾನ ಎಸ್ಎಸ್ ತೆಗನೂರು ಕಾಲೇಜಿನ ಅಪೂರ್ವ ಆನಂದ್ ಕುಮಾರ್ ಹಾಗೂ ಆಚಾರ್ಯ ಪಿಯು ಕಾಲೇಜಿನ ಭಾಗ್ಯಶ್ರೀ ಮಲ್ಲಿಕಾರ್ಜುನ್ ಪಡೆದರು. ತೃತೀಯ ಬಹುಮಾನ ಎಸ್ ಬಿ ಆರ್ ಕಾಲೇಜಿನ ನೀಲಮ್ಮ ವೀರಣ್ಣ ಹಾಗೂ ಚೆನ್ನಕೇಶವ ಮಾಳಪ್ಪ ಅವರನ್ನು ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು
ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕಲಬುರ್ಗಿ ನಗರದ ಅನೇಕ ಕಾಲೇಜುಗಳನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು ಅವರನ್ನು ಪ್ರಮಾಣ ಪತ್ರ ವಿತರಣಾ ಮಾಡಲಾಯಿತು.ಕಾರ್ಯಕ್ರಮದ ನಿರೂಪಣೆ ಉಪನ್ಯಾಸಕ ರಮೇಶ್ ಬಡಿಗೇರ್ ಮಾಡಿದರು.