ಬೇಸಿಗೆ ತರಗತಿಗಳ ಕುರಿತಂತೆ ಶಶೀಲ್ ಜಿ. ನಮೋಶಿ ಸ್ಪಷ್ಟನೆ

ಬೇಸಿಗೆ ತರಗತಿಗಳ ಕುರಿತಂತೆ ಶಶೀಲ್ ಜಿ. ನಮೋಶಿ ಸ್ಪಷ್ಟನೆ

ಬೇಸಿಗೆ ತರಗತಿಗಳ ಕುರಿತಂತೆ ಶಶೀಲ್ ಜಿ. ನಮೋಶಿ ಸ್ಪಷ್ಟನೆ

ಕಲಬುರಗಿ: ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬೇಸಿಗೆ ಕಾಲದಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸುವ ಕುರಿತು ಚರ್ಚೆ ನಡೆದಿತ್ತು. ಈ ಸಂಬಂಧ ಮಾನ್ಯ ಅಪರ ಆಯುಕ್ತರೊಂದಿಗೆ ಆಯಾ ವಿಭಾಗದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರ ಸಂಘಟನೆಗಳು ಸಮಾಲೋಚನೆ ನಡೆಸಿದ್ದು, ಬೇಸಿಗೆ ಅವಧಿಯಲ್ಲಿ ತರಗತಿಗಳ ಆಯೋಜನೆ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅನಾನುಕೂಲವಾಗಬಹುದೆಂದು ನಿರ್ಧಾರಕ್ಕೆ ಬಂದಿದ್ದಾರೆ.

ಈ ಕುರಿತು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಸ್ಪಷ್ಟಪಡಿಸಿ, "ಈ ಪ್ರಸ್ತಾವನೆ ಪ್ರಾಥಮಿಕ ಚರ್ಚೆಯಲ್ಲಿ ಮಾತ್ರ ಇತ್ತು. ಆದರೆ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಹಂತದಲ್ಲಿ ಅದನ್ನು ಕೈಬಿಡಲು ನಿರ್ಧಾರ ಕೈಗೊಳ್ಳಲಾಗಿದೆ. ಆದ್ದರಿಂದ ಈ ವಿಷಯ ಕುರಿತು ಶಿಕ್ಷಕರು ಯಾವುದೇ ಕಳವಳ ಹೊಂದದಿರಲು ಮನವಿ," ಎಂದು ತಿಳಿಸಿದ್ದಾರೆ.

ಶಿಕ್ಷಕರಿಗೆ ಮತ್ತು ಪೋಷಕರಿಗೆ ಭರವಸೆ:

ಈ ನಿರ್ಧಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಅಧಿಕಾರಿಗಳ ಸಮಾಲೋಚನೆಯ ನಂತರ ಕೈಗೊಳ್ಳಲಾಯಿತು. ಬೇಸಿಗೆ ಅವಧಿಯ ಉಪಯೋಗ ಮತ್ತು ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸುವ ಬೇರೆ ಮಾರ್ಗಗಳನ್ನು ಅನ್ವೇಷಿಸಲಾಗುವುದು ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ, ಈಗಾಗಲೇ ಚರ್ಚೆಯಾದ ಬೇಸಿಗೆ ತರಗತಿಗಳನ್ನು ಮುಂದುವರಿಸುವ ಉದ್ದೇಶ ಈ ಹಂತದಲ್ಲಿ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಯಿತು.