ಧಾರ್ಮಿಕ ಸಮಾರಂಭ ಯಶಸ್ವಿಗೆ ಸೋಮೇಶ್ವರ ಶ್ರೀಗಳ ಕರೆ.

ಧಾರ್ಮಿಕ ಸಮಾರಂಭ ಯಶಸ್ವಿಗೆ ಸೋಮೇಶ್ವರ ಶ್ರೀಗಳ ಕರೆ.
ಶಹಪುರ : ತಾಲೂಕಿನ ಸಗರದ ನಾಗಠಾಣ ಹಿರೇಮಠದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ವರ್ತಮಾನ ಹಾಗೂ ದ್ವಾದಶಿ ಶ್ರೀಗಳ ಪಟ್ಟಾಧಿಕಾರ ಮತ್ತು ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮಗಳ ಪೂರ್ವಭಾವಿ ಸಭೆ ನೆರವೇರಿತು.
ಈ ಸಭೆಯ ದಿವ್ಯ ಸಾನಿಧ್ಯ ವಹಿಸಿ ನಾಗಠಾಣ ಹಿರೇಮಠದ ಪರಮ ಪೂಜ್ಯ ಶ್ರೀ ಸೋಮೇಶ್ವರ ಶಿವಾಚಾರ್ಯರು ಮಾತನಾಡಿ ಗ್ರಾಮದ ಪ್ರತಿಯೊಬ್ಬ ಸದ್ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತನು,ಮನ,ಧನ ದಿಂದ ಸಹಾಯ ಮಾಡಿ ಯಶಸ್ವಿಗೊಳಿಸಲು ಕರೆ ನೀಡಿದರು
ನವೆಂಬರ್ 2 ರಿಂದ 20 ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ,ಪುರಾಣ ಪ್ರವಚನ,ಧಾರ್ಮಿಕ ಸಭೆ ಸಮಾರಂಭಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುವುದು ಕೊಳ್ಳಲಾಗುವುದು,ಈ ಕಾರ್ಯಕ್ರಮದ ಯಶಸ್ವಿಗೆ 4 ಸಮಿತಿ ಹಾಗೂ ರಚಿಸಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಈ ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ನಾಗನಗೌಡ ಸುಬೇದಾರ,ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಚಂದಣ್ಣ ಸೇರಿ,ಸಿದ್ದನಗೌಡ ಸುಬೇದಾರ, ಗುರುಲಿಂಗಪ್ಪಗೌಡ ಪೊ: ಪಾಟೀಲ್,ಮಹಾಂತಗೌಡ ಸುಬೇದಾರ,ಮಲ್ಲಣ್ಣ ವಮ್ಮಾ, ಅಮೀನರೆಡ್ಡಿ ಮಲ್ಲೇದ,ಪ್ರಕಾಶ್ ದೇಸಾಯಿ,ವಿಶ್ವರಾಧ್ಯ ದೇಸಾಯಿ ಮಠ,ಸಿದ್ದಯ್ಯಸ್ವಾಮಿ ಪುರಾಣಿಕ ಮಠ ಸೇರಿದಂತೆ ಗ್ರಾಮದ ಸರ್ವಸದ್ಭಕ್ತರು ಉಪಸ್ಥಿತರಿದ್ದರು.